ಸರ್ಕಾರಿ ಶಾಲೆಗಳಲ್ಲಿ ಈಗ ಮಕ್ಕಳಿಗೆ ಬೇಕಾಗುವಂತಹ ಎಲ್ಲಾ ಮೂಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಅದರಲ್ಲೂ ಅವರಿಗೆ ಆಹಾರ ಪೂರೈಕೆ (ಬಿಸಿಯೂಟ) ಮಾಡುವ ವಿಚಾರದಲ್ಲಿ ಅತ್ಯಂತ ಹೆಚ್ಚಿನ ಗಮನ ವಹಿಸಬೇಕಾಗುತ್ತದೆ. ಇತ್ತೀಚೆಗೆ ಬಾಲಕನೋರ್ವ ಅಂಗನವಾಡಿಯಲ್ಲಿ ಇರುವ ಫುಡ್ ಗೆ ಬದಲಾಗಿ ಬಿರಿಯಾನಿ ಮತ್ತು ಕಬಾಬ್ ಕೊಡಿ ಎಂದು ಬೇಡಿಕೆ ನೀಡಿದ್ದು ಸಚಿವರು ಅದಕ್ಕೆ ಅಸ್ತು ಎಂದಿದ್ದಾರೆ. ಈ ಬೆನ್ನಲ್ಲೇ ಇದೀಗ ಕರ್ನಾಟಕದಲ್ಲಿ ಸಿದ್ದು ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಶಾಲೆಗಳಿಗೆ ಹುಳ ಇರುವ ಧಾನ್ಯಗಳ ಪೂರೈಕೆ, ಸರ್ಕಾರದ ವಿರುದ್ಧ ರೊಚ್ಚಿಗೆದ್ದ ಶಿಕ್ಷಕರು..!
ಸರ್ಕಾರಿ ಶಾಲೆಗೆ ಬರುವ ಮಕ್ಕಳು ಹೆಚ್ಚಾಗಿ ಆರ್ಥಿಕವಾಗಿ ಹಿಂದುಳಿದ ಕುಟುಂಬದಿಂದ ಬಂದಿರುತ್ತಾರೆ. ಇವರು ಹಸಿವಿನಿಂದ ಬಳಲಬಾರದು ಎನ್ನುವ ಸದುದ್ದೇಶದಿಂದ ಸರ್ಕಾರ ಮಧ್ಯಾಹ್ನ ಬಿಸಿ ಊಟ ಯೋಜನೆಯನ್ನು ಜಾರಿಗೊಳಿಸಿದೆ. ಅದರಂತೆ ಮಕ್ಕಳಿಗೆ ಪ್ರತಿನಿತ್ಯ ಮೊಟ್ಟೆ ಜೊತೆಗೆ ಅನ್ನ, ಸಾರು ಸೇರಿದಂತೆ ಪ್ರತಿನಿತ್ಯ ಒಂದೊಂದು ರೀತಿಯ ಆಹಾರವನ್ನು ನೀಡಲಾಗುತ್ತದೆ. ಆದರೆ, ಕೊಪ್ಪಳ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗೆ ಹುಳು, ನುಸಿ ಹತ್ತಿರುವ ಆಹಾರ ಧಾನ್ಯಗಳ ಪೂರೈಕೆಯಾಗುತ್ತಿವೆ.
ಮಕ್ಕಳು ಪ್ರತಿನಿತ್ಯ ಹುಳು, ನುಸಿ ಇರುವ ಆಹಾರವನ್ನೇ ಸೇವಿಸುವ ದುರ್ದೈವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಶಿಕ್ಷಕರು ಸರ್ಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಕಳೆದ ಕೆಲ ತಿಂಗಳಿಂದ ಕಳಪೆ ಆಹಾರ ಧಾನ್ಯಗಳು ಶಾಲೆಗೆ ಪೂರೈಕೆಯಾಗುತ್ತಿವೆ. ಕೊಪ್ಪಳ ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳು ಸೇರಿ ಒಟ್ಟು 2.8 ಲಕ್ಷ ಮಕ್ಕಳಿಗೆ ಪ್ರತಿನಿತ್ಯ ಮಧ್ಯಾಹ್ನದ ಬಿಸಿ ಊಟವನ್ನು ನೀಡಲಾಗುತ್ತದೆ. ಜಿಲ್ಲೆಯ ಬಹುತೇಕ ಕಡೆ ಶಾಲೆಯಲ್ಲಿಯೇ ಆಹಾರವನ್ನು ತಯಾರು ಮಾಡಿ ನೀಡಲಾಗುತ್ತದೆ. ಮಕ್ಕಳು ಊಟ ಮಾಡುವಾಗ ಅನ್ನ ಮತ್ತು ಸಾರಿನಲ್ಲಿ ನುಸಿ, ಹುಳುಗಳು ಸಿಗುತ್ತಿವೆ. ಇದರಿಂದ ಮಕ್ಕಳೂ ಊಟವನ್ನು ತಿನ್ನದೆ ಬಿಸಾಡುತ್ತಿದ್ದಾರೆ. ಈ ಬಗ್ಗೆ ಅದೆಷ್ಟು ಸಲ ಹೇಳಿದರೂ ಕೂಡಾ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ ಎನ್ನುವಂತಹ ಆರೋಪ ಕೇಳಿಬಂದಿದೆ.
ಹಣದಾಸೆಗಾಗಿ ಕಳಪೆ ಗುಣಮಟ್ಟದ ತೊಗರಿ ಬೇಳೆ ಪೂರೈಕೆ...!
ಅನೇಕ ಶಾಲೆಗಳಲ್ಲಿ ಸಿಬ್ಬಂದಿ ಹೆಚ್ಚಿನ ಕೆಲಸ ನಿರ್ವಹಿಸಿ ಬೇಳೆಯನ್ನು ನೀರಿನಲ್ಲಿ ತೊಳೆದು ಬೇಯಿಸಿದ್ರೂ ಬೇಯುತ್ತಿರುವಾಗ ಬೇಳೆಯ ಒಳಗಿನಿಂದ ಹುಳಗಳು ಬರುತ್ತಿದೆಯಂತೆ. ಜಿಲ್ಲೆಯ ವಿವಿಧ ದಾಸ್ತಾನುಗಳಿಂದ ಅಕ್ಕಿ ಪೂರೈಕೆಯಾದರೆ, ತೊಗರಿಬೇಳೆ, ಎಣ್ಣೆ ಸೇರಿದಂತೆ ಬೇರೆ ಪದಾರ್ಥಗಳು ಟೆಂಡರ್ ಪಡೆದಿರುವ ಏಜೆನ್ಸಿಗಳು ಶಾಲೆಗೆ ಪೂರೈಗೆ ಮಾಡುತ್ತವೆ.
ಆದರೆ, ಖಾಸಗಿ ಗುತ್ತಿಗೆದಾರರು ಕೂಡಾ ಹಣದಾಸೆಗೆ, ಲಾಭ ಗಳಿಸುವ ಉದ್ದೇಶದಿಂದ ಕಳಪೆ ಮಟ್ಟದ ತೊಗರಿ ಬೇಳೆ ಪೂರೈಕೆ ಮಾಡಿದ್ದಾರೆ. ಜೊತೆಗೆ ವಿವಿಧ ಗೋಡೌನ್ಗಳಿಂದ ಪೂರೈಕೆಯಾಗುತ್ತಿರುವ ಅಕ್ಕಿ ಕೂಡ ಇತ್ತೀಚೆಗೆ ಕಳಪೆ ಗುಣಮಟ್ಟದ್ದಾಗಿದೆ ಎನ್ನುವಂತಹ ಆರೋಪಗಳು ಕೇಳಿಬಂದಿದೆ. ಈಗಾಗಲೇ ವಿದ್ಯಾರ್ಥಿಗಳು ಮನೆಯಿಂದಲೇ ಊಟ ತರಲು ಆರಂಭಿಸಿದ್ದಾರೆ. ಮಕ್ಕಳ ಪೋಷಕರು ಸಿದ್ದು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.