ಬೆಳ್ತಂಗಡಿ|ಐಟಿಐ ಕಾಲೇಜಿಗೆ ಹೋಗುತ್ತಿದ್ದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ..! ಕಾಮುಕ ಅರೆಸ್ಟ್..!

  • 15 Feb 2025 03:44:42 PM

ಬೆಳ್ತಂಗಡಿ: ಮಿತಿಮೀರಿದ ಕಾಮದಾಹದಿಂದಾಗಿ ಪುರುಷರು ತೃಷೆ ತೀರಿಸಿಕೊಳ್ಳಲು ವಿಕೃತ ವರ್ತನೆ ತೋರುತ್ತಿದ್ದಾರೆ. ಅಪ್ರಾಪ್ತ ಮಕ್ಕಳನ್ನೂ ಬಿಡದೆ ಮೃಗಗಳಂತೆ ಮೇಲೆರಗುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲೇ ಈ ರೀತಿ ವರ್ತಿಸುವ ಕಾಮುಕರಿಂದ ಹೆಣ್ಮಕ್ಕಳಿಗೆ ರಕ್ಷಣೆ ಇದೆಯೇ...ಹೇಳಿ. ಇದೀಗ ಅಂತಹುದೇ ರೀತಿಯ ಘಟನೆಯೊಂದು ಬೆಳ್ತಂಗಡಿಯಲ್ಲಿ ನಡೆದಿದೆ.

 

ಕಾಲೇಜಿಗೆ ತೆರಳುತ್ತಿದ್ದಾಗ ವಿದ್ಯಾರ್ಥಿನಿಗೆ ಟಾರ್ಚರ್ ಕೊಡ್ತಿದ್ದ ಭೂಪ..!

 

ಅಪ್ರಾಪ್ತ ಬಾಲಕಿಯೋರ್ವಳು ಕಾಲೇಜಿಗೆ ತೆರಳುತ್ತಿದ್ದ ಸಂದರ್ಭ ಆಕೆಯನ್ನು ಅಡ್ಡಗಟ್ಟಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪಿಗೆ ನ್ಯಾಯಾಲಯ ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ. ಸಜಿಪನಡು ಕಂಚಿನಡ್ಕ ನಿವಾಸಿ ಜಮಾಲ್ ಜೈಲುಶಿಕ್ಷೆಗೆ ಒಳಗಾದ ಆರೋಪಿ. ನ್ಯಾಯಾಲಯ ವಿಚಾರಣೆ ನಡೆಸಿ ಅಪರಾಧಿಗೆ ಒಂದು ವರ್ಷ ಜೈಲು, ಹತ್ತು ಸಾವಿರ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.

 

ವೇಣೂರು ಪೊಲೀಸ್ ಠಾಣೆಯಲ್ಲಿ ಬಾಲಕಿ ದೂರು ದಾಖಲಿಸಿದ್ದಳು. ಆ ದೂರಿನ ಮೇರೆಗೆ ಪ್ರಕರಣದ ತನಿಖೆ ನಡೆಸಿ ಠಾಣಾ ಪಿಎಸ್ಐ ಶ್ರೀಶೈಲ ಮುರಗೋಡು ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. 

 

ಏನಿದು ಪ್ರಕರಣ...?

 

ಕಳೆದ ವರ್ಷ ನಡೆದಿದ್ದ ಈ ಪ್ರಕರಣ ಈ ಬಾರಿ ಅಂತ್ಯ ಕಂಡಿದೆ. ಬೆಳ್ತಂಗಡಿಯಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಜಮಾಲ್ ವಿದ್ಯಾರ್ಥಿನಿಗೆ ಅಡ್ಡಗಟ್ಟಿ ಲೈಂಗಿಕ ಕಿರುಕುಳ ನೀಡಿದ್ದ. ಈತನ ಈ ಕಾಟ ಆಕೆಗೆ ನಿರಂತರವಾಗಿತ್ತು. ಕಾಲೇಜಿಗೆ ನಿನ್ನನ್ನು ಬಿಡಬೇಕಾ, ಮೊಬೈಲ್ ನಂಬರ್ ಕೊಡು ಹೀಗೆಲ್ಲ ಮಾತಾಡುತ್ತಾ ಲೈಂಗಿಕ ದೌರ್ಜನ್ಯ ನೀಡುತ್ತಿದ್ದ.

 

ಕೊನೆಗೆ ಆತನ ಹಿಂಸೆ ತಾಳಲಾರದೆ ವಿದ್ಯಾರ್ಥಿನಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯ ವಾದ- ಪ್ರತಿವಾದವನ್ನು ಆಲಿಸಿ ಅಪರಾಧಿಗೆ ಸೂಕ್ತ ಶಿಕ್ಷೆ ನೀಡಿ ಪ್ರಕರಣಕ್ಕೆ ಅಂತ್ಯ ಹಾಡಿದೆ.