ಆರೆಸ್ಸೆಸ್ ನವರೇ ಮುಸ್ಲಿಮರಂತೆ ಬಂದು ಗಲಾಟೆ ಮಾಡಿದ್ದಾರೆ!;ಉದಯಗಿರಿ ಘಟನೆಯ ಬಗ್ಗೆ ನಾಲಿಗೆ ಹರಿಬಿಟ್ಟ ಕಾಂಗ್ರೆಸ್ ನಾಯಕ ಲಕ್ಷ್ಮಣ್

  • 15 Feb 2025 03:51:42 PM

ಮೈಸೂರ್: ರಾಜ್ಯದಲ್ಲಿ ಹಿಂದು- ಮುಸ್ಲಿಂ ಗಲಭೆಗಳು ನಡೆಯೋದು ಹೊಸತೇನಲ್ಲ. ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಇಂತಹ ಒಂದಲ್ಲ ಒಂದು ರಾದ್ಧಾಂತಗಳು ನಡೆಯುತ್ತಲೇ ಇರುತ್ತದೆ. ಮುಸ್ಲಿಮರಿಗೆ ಹಿಂದೂಗಳನ್ನು ಕೆರಳಿಸಲು ಸಣ್ಣ ವಿಷಯವಿದ್ದರೂ ಸಾಕು. ರಂಪರಾಮಾಯಣ ಮಾಡಿಬಿಡುತ್ತಾರೆ. ಇದೀಗ ರಾಜಕೀಯ ವ್ಯಕ್ತಿಯೋರ್ವ ಹಿಂದೂಗಳ ಮೇಲೆ ಟೀಕಾಪ್ರಹಾರವನ್ನು ಮಾಡಿದ್ದಾನೆ.

 

ಮುಸ್ಲಿಮರ ವೇಷದಲ್ಲಿ ಆರೆಸ್ಸೆಸ್ ನವರೇ ಗಲಾಟೆ ಮಾಡೋದು...!

 

ಮೈಸೂರಿನಲ್ಲಿ ಸೋಷಿಯಲ್ ಮೀಡಿಯಾ ಪೋಸ್ಟ್ ವೊಂದರಿಂದ ಆಕ್ರೋಶಿತರಾದ ಮುಸ್ಲಿಂ ಯುವಕರ ಗುಂಪು ಪೊಲೀಸ್ ಠಾಣೆಯ ಮೇಲೆ ಆಕ್ರಮಣ ನಡೆಸಿದೆ. ಆದರೆ ಅವರು ನಿಜವಾಗಲೂ ಮುಸ್ಲಿಮರಲ್ಲ. ಆರೆಸ್ಸೆಸ್ ನವರೇ ಬೇಕಂತಲೇ ಅವರ ವೇಷ ಹಾಕಿಕೊಂಡು ಬಂದು ಗಲಾಟೆ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ಎಂ. ಲಕ್ಷ್ಮಣ್ ಅವರು ಮನಬಂದಂತೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.

 

ರಾಜಕೀಯ ತಿರುವು ಪಡೆದ ಪೋಸ್ಟ್ ವಾರ್...!

 

ಸುರೇಶ್ ಎಂಬಾತ ತಮ್ಮ ಧರ್ಮಗುರುಗಳ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದಾನೆಂದು ಸಿಡಿಮಿಡಿಗೊಂಡ ಯುವಕರ ಗುಂಪೊಂದು ಉದಯಗಿರಿ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿತ್ತು. ಸುರೇಶ್ ನನ್ನು ಅರೆಸ್ಟ್ ಕೂಡಾ ಮಾಡಲಾಗಿದೆ. ಇದೀಗ ಈ ಘಟನೆ ರಾಜಕೀಯ ತಿರುವು ಪಡೆದುಕೊಳ್ಳುತ್ತಿದ್ದು ಆರೆಸ್ಸೆಸ್ ಮೇಲೆ ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಇವರ ಈ ಹೇಳಿಕೆ ಭಾರೀ ವೈರಲ್ ಆಗಿದ್ದು ಹಿಂದೂಗಳು ಕೆಂಡಾಮಂಡಲರಾಗಿದ್ದಾರೆ.