ಉದಯಗಿರಿ : ಅನೇಕ ಸಲ ಶಾಂತವಾಗಿದ್ದ ವಾತಾವರಣ ಕೆರಳಿ ಕೆಂಡಾಮಂಡಲವಾಗಲು ಪ್ರಚೋದನೆ ನೀಡುವ ಒಂದು ಭಾಷಣ ಸಾಕು. ಹಿಂದೂ- ಮುಸ್ಲಿಮರ ಮಧ್ಯೆ ಗಲಾಟೆ, ಧರ್ಮದಂಗಲ್ ನಡೆಯಲು ಕೆಲವು ಬುದ್ಧಿಜೀವಿಗಳ ಪ್ರಚೋದಿತ ಭಾಷಣವೂ ಒಂದು ರೀತಿಯಲ್ಲಿ ಕಾರಣವಾಗಬಹುದು. ಅದಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ನೂರಾರು ಜನರನ್ನು ಉದ್ದೇಶಿಸಿ ಮಾತನಾಡುವಾಗ ನಾವೇನು ಮಾತನಾಡುತ್ತಿದ್ದೇವೆ ಎಂಬುದರ ಬಗ್ಗೆ ಗಮನವಿರಬೇಕು. ಇದೀಗ ಮೈಸೂರಿನಲ್ಲೂ ಅಂತಹುದೇ ಘಟನೆಯೊಂದು ನಡೆದಿದೆ.
ಕಲ್ಲು ತೂರಾಟಕ್ಕೆ ಮೌಲ್ವಿಯ ಪ್ರಚೋದಿತ ಭಾಷಣವೇ ಕಾರಣ..!
ಉದಯಗಿರಿ ಪೊಲೀಸ್ ಠಾಣೆಯ ಮೇಲೆ ಸೋಮವಾರ ರಾತ್ರಿ ನಡೆದ ಕಲ್ಲುತೂರಾಟ ಘಟನೆಗೆ ಮೌಲ್ವಿಯೊಬ್ಬರ ಪ್ರಚೋದಿತ ಭಾಷಣವೇ ಕಾರಣ ಎಂದು ಹೇಳಲಾಗುತ್ತಿದೆ. ಪೊಲೀಸ್ ಠಾಣೆಯ ಮುಂಭಾಗ ರೊಚ್ಚಿಗೆದ್ದ ಯುವಕರ ತಂಡ ಬಂದಾಗ ಮುಫ್ರಿ ಮುಸ್ತಾಕ್ ಮಫ್ ಅಲಿ ಎಂಬಾತ `ನಾವು ಜೀವ ಬೇಕಾದ್ರೂ ಕೊಡ್ತೇವೆ, ನಮ್ಮ ಗುರುಗಳ ಬಗ್ಗೆ ಮಾಡಿದ ಅವಮಾನ ಮಾತ್ರ ಸಹಿಸೋದಿಲ್ಲ. ಆ ಪೋಸ್ಟ್ ಹಾಕಿದ ಪಾಪಿಯನ್ನು ಸುಮ್ಮನೆ ಬಿಡಬೇಡಿ, ನೇಣಿಗೇರಿಸಿ' ಎಂದು ಪ್ರಚೋದಿತ ಭಾಷಣ ಮಾಡಿದ್ದಾನೆ. ಆಗ ಮತ್ತಷ್ಟು ಕೆರಳಿದ ಯುವಕರು ಕಲ್ಲು ತೂರಾಟ ನಡೆಸಿದ್ದಾರೆ.
ಆರೋಪಿಗಳ ಮೊಬೈಲ್ ಸಿಗ್ನಲ್ ಆಧರಿಸಿ ಮನೆಗಳಿಗೆ ಭೇಟಿ ನೀಡಿದ ಪೊಲೀಸರು...!
ಗಲಾಟೆ ನಡೆದ ಸ್ಥಳದ ಟವರ್ ಲೊಕೇಶನ್ ಆಧಾರದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಆರೋಪಿಗಳ ಮೊಬೈಲ್ ಸಿಗ್ನಲ್ ಆಧರಿಸಿ ಆರೋಪಿಗಳ ಮನೆಗಳಿಗೆ ಪೊಲೀಸರು ಭೇಟಿ ನೀಡಿದ್ದಾರೆ. ಆರೋಪಿಗಳು ಮೊಬೈಲನ್ನು ಮನೆಯಲ್ಲಿಯೇ ಬಿಟ್ಟು ಹೋಗಿರುವುದರಿಂದ ಅವರ ಶೋಧ ಕಾರ್ಯಕ್ಕೆ ಸ್ವಲ್ಪ ಹಿನ್ನೆಡೆ ಆಗಿದೆ. ಆದರೂ ಪೊಲೀಸರು ಅಲರ್ಟ್ ಆಗಿ ತನಿಖೆ ಮುಂದುವರೆಸಿದ್ದಾರೆ.