ಅನಾಥವಾಯ್ತು ಹದಿನಾಲ್ಕು ದಿನದ ಹಸಿಗೂಸು..! ಜೀವಾಂತ್ಯಗೊಳಿಸಿದ ಬಾಣಂತಿ..!!

  • 15 Feb 2025 04:34:43 PM

ಕೊಡಗು: ಈಗಿನ ಮಹಿಳೆಯರಿಗೆ ಅದೇನಾಗುತ್ತೋ ಗೊತ್ತಿಲ್ಲ. ಕೆಲವರು ಅಕ್ರಮ ಸಂಬಂಧದ ಹಿಂದೆ ಹೋಗಿ ಜೀವನ ಹಾಳು ಮಾಡಿಕೊಂಡರೆ ಮತ್ತೆ ಕೆಲವರು ತಮಗೊದಗಿದ ಕಷ್ಟಗಳನ್ನು ಎದುರಿಸಲಾಗದೆ ಜೀವಾಂತ್ಯಗೊಳಿಸುತ್ತಾರೆ. ಆದರೆ ಈ ಪ್ರಕರಣವಂತೂ ಇನ್ನೂ ವಿಚಿತ್ರ. ಇದಕ್ಕೆ ಬಾಣಂತಿ ಸನ್ನಿಯಂತಹ ಕಾರಣವಿರಬಹುದೋ ಗೊತ್ತಿಲ್ಲ. ಆದರೆ ಆಕೆಯ ಮಗುವಿನ ಪರಿಸ್ಥಿತಿ ನೋಡಿದ್ರೆ ಕಣ್ಣಂಚಲ್ಲಿ ನೀರು ಬರದೇ ಇರದು..

 

ಹದಿನಾಲ್ಕು ದಿನದ ಕಂದಮ್ಮನ ಬಿಟ್ಟು ಆತ್ಮಹತ್ಯೆಗೆ ಶರಣಾದ ಯುವತಿ..!

 

ಹೌದು. ಕೊಡಗಿನ ವಿರಾಜಪೇಟೆ ತಾಲ್ಲೂಕಿನ ಕೊಟ್ಟೋಳಿಯಲ್ಲಿ ಮಹಿಳೆಯೊಬ್ಬರು ತನ್ನ ಹದಿನಾಲ್ಕು ದಿನದ ಹಸಿಗೂಸನ್ನು ಮತ್ತು ಪತಿಯನ್ನು ಬಿಟ್ಟು ಜೀವಾಂತ್ಯಗೊಳಿಸಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಮಗು ಇದೀಗ ತಾಯಿಯನ್ನು ಕಳೆದುಕೊಂಡು ಅನಾಥವಾಗಿದೆ.

 

ದಿನೇಶ್ ಎಂಬವರ ಪತ್ನಿ, ಕರಡ ನಿವಾಸಿ ಇಪ್ಪತ್ನಾಲ್ಕು ವರ್ಷದ ಕಾವೇರಮ್ಮ ಆತ್ಮಹತ್ಯೆಗೆ ಶರಣಾದ ಯುವತಿ. ದಿಢೀರ್ ಈಕೆ ಇಂತಹ ತಪ್ಪು ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಎಂಬುವುದು ತಿಳಿದುಬಂದಿಲ್ಲ. ಆದರೆ ಮಗುವಿನ ಮುಂದಿನ ಪರಿಸ್ಥಿತಿ ಎನಿಸಿದರೆ ಕರುಳು ಕಿತ್ತು ಬರುತ್ತದೆ. ಸ್ಥಳೀಯರು ಕೂಡಾ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

 

ಮಗುವಿನ ಕೂಗಾಟ ಕೇಳಿ ಓಡಿಬಂದ್ರೆ ನಡೆದಿತ್ತು ದುರಂತ..!

 

ನಾಲ್ಕು ವರ್ಷಗಳ ಹಿಂದೆ ಕಾವೇರಮ್ಮ ಮತ್ತು ದಿನೇಶ್ ವಿವಾಹವಾಗಿದ್ದರು. ದಿನೇಶ್ ಅವರ ಮನೆಯ ಸಮೀಪದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಮಗುವಿನ ಚೀರಾಟ ಕೇಳಿಬಂದಿದೆ.

 

ಓಡಿ ಬಂದು ನೋಡಿದಾಗ ಕಾವೇರಮ್ಮ ಬಾತ್ರೂಮ್ ನಲ್ಲಿ ಸೀರೆಯಿಂದ ನೇಣುಬಿಗಿದುಕೊಂಡಿದ್ದಾಳೆ. ಮೃತಳ ಸೋದರ ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ಮಾಡುತ್ತಿದ್ದಾರೆ.