ಪ್ರೀತಿಸಲು ಒಪ್ಪದ ಯುವತಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ತೇನೆಂದು ಬೆದರಿಕೆ...!! ವೀಡಿಯೋ ವೈರಲ್..!

  • 15 Feb 2025 04:46:26 PM

ತೆಲಂಗಾಣ: ಸಮಾಜ ಮುಂದುವರೆಯುತ್ತಾ ಹೋದಂತೆ ಮನುಷ್ಯನ ಮನಸ್ಸು ಅತ್ಯಂತ ಸಂಕುಚಿತ ಮತ್ತು ದುರ್ಬಲವಾಗುತ್ತಾ ಹೋಗುತ್ತಿದೆ. ಪ್ರೀತಿಯ ವಿಷಯದಲ್ಲಂತೂ ಈಗಿನ ಕೆಲ ತರುಣರು ಸೈಕೋ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಇದರಿಂದಲೇ ಅನೇಕರು ಭವಿಷ್ಯವನ್ನೂ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇಂತಹುದೇ ಅಪರೂಪದ ಘಟನೆಯೊಂದು ತೆಲಂಗಾಣದಲ್ಲಿ ನಡೆದಿದೆ.

 

ಯುವತಿಯ ಮೇಲೆ ಪೆಟ್ರೋಲ್ ಸುರಿದು ಬೆದರಿಸಿದ ಪಾಗಲ್ ಪ್ರೇಮಿ..! 

 

ತನ್ನ ಪ್ರೀತಿ ನಿವೇದನೆಯನ್ನು ನಿರಾಕರಿಸಿದ ಕಾರಣಕ್ಕೆ ಯುವಕನೋರ್ವ ಆಕೆಯ ಮೇಲೆ ಮತ್ತು ತನ್ನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸಾಯಿಸುತ್ತೇನೆಂದು ಬೆದರಿಕೆ ಒಡ್ಡಿದ ಭಯಾನಕ ಘಟನೆ ತೆಲಂಗಾಣದ ಹುಜೂರ್ ನಗರದಲ್ಲಿ ನಡೆದಿದೆ.

 

ಆತ ಹಠ ಹಿಡಿಯುತ್ತಿದ್ದಾಗ ಯುವತಿ ಮತ್ತು ಆಕೆಯ ಜೊತೆಗಿದ್ದ ಸ್ನೇಹಿತೆ ಅವನಿಗೆ ಅರ್ಥೈಸುವ ಪ್ರಯತ್ನವನ್ನೂ ಮಾಡಿದ್ದಾರೆ. ಸೂರ್ಯಪೇಟೆ ಎನ್ ಜಿಒ ಕಾಲೋನಿಯಲ್ಲಿ ನಡೆದ ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. 

 

ವೈರಲ್ ಆದ ವೀಡಿಯೋದಲ್ಲಿ ಏನಿದೆ..?

 

ವೀಡಿಯೋದಲ್ಲಿ ವ್ಯಕ್ತಿಯು ಇಬ್ಬರು ಯುವತಿಯರೊಂದಿಗೆ ವಾಗ್ವಾದ ನಡೆಸುತ್ತಿರುವ ದೃಶ್ಯವನ್ನು ನೋಡಬಹುದು. ಆಕೆ ಪ್ರಪೋಸಲ್ ಒಪ್ಪದಿದ್ದಾಗ ಅವಳ ಮೇಲೆ ಮತ್ತು ಆತನ ಮೇಲೆ ಅವನ ಕೈಯ್ಯಲ್ಲಿದ್ದ ಬಾಟಲಿಯಿಂದ ಪೆಟ್ರೋಲ್ ಸುರಿದಿದ್ದಾನೆ.

 

ಪರಿಸ್ಥಿತಿ ಬಿಗಡಾಯಿಸುವ ಮೊದಲು ಸ್ಥಳೀಯರು ಸ್ಥಳಕ್ಕೆ ಬಂದು ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಂಭವಿಸಬಹುದಾಗಿದ್ದ ದೊಡ್ಡ ದುರಂತವನ್ನು ತಪ್ಪಿಸಿದ್ದಾರೆ.