ಪುತ್ತೂರು ತಾಲೂಕಿನಲ್ಲಿಯೇ ತೆರಿಗೆ ಸಂಗ್ರಹಣೆಯಲ್ಲಿ ಕೊನೆಯ ಸ್ಥಾನ ಪಡೆದ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಮೊದಲ ಸ್ಥಾನದಲ್ಲಿ ಹಿರೇಬಂಡಾಡಿ ಗ್ರಾಮ ಪಂಚಾಯತ್

  • 16 Feb 2025 10:53:52 AM

ಹಿಂದು ರಿಪಬ್ಲಿಕ್ ಟಿವಿಗೆ ಲಭ್ಯವಾದ ಡಿಸಿಬಿ ರಿಪೋರ್ಟ್ ನ‌ ಮಾಹಿತಿ ಪ್ರಕಾರ ನೆಟ್ಟಣಿಗೆ ಮುಡ್ನೂರು ಗ್ರಾಮಪಂಚಾಯತ್ ತೆರಿಗೆ ಸಂಗ್ರಹಣೆ ವಿಚಾರದಲ್ಲಿ ಕೊನೆಯ ಸ್ಥಾನ ಪಡೆದುಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ

ಕಾರಣ ಏನು

ಗ್ರಾಮ ಪಂಚಾಯತ್ ನಲ್ಲಿ ಆಡಳಿತರೂಡ ವ್ಯಕ್ತಿಗಳು ಅಧಿಕಾರಿಗಳ ಚಲನ ವಲನ ತೆರಿಗೆ ಸಂಗ್ರಹಣೆ ಮುಂತಾದ ವಿಚಾರದಲ್ಲಿ ಗಮನಕೊಡದೇ ಇರುವುದು ನಿರ್ಲಕ್ಷ್ಯತನ ವಹಿಸುವುದು ಹಾಗೂ ಅಧಿಕಾರಿಗಳ ಮೇಲೆ ಸಿಬ್ಬಂದಿಗಳ ಮೇಲೆ ಅಧ್ಯಕ್ಷ ಉಪಾಧ್ಯಕ್ಷರಿಗೆ ಹಿಡಿತ ಇಲ್ಲದಿರುವುದೇ ಈ ಪರಿಸ್ಥಿತಿಗೆ ಕಾರಣವಾಗಿದೆ  ಎಂಬ ಮಾಹಿತಿ ಲಭ್ಯವಾಗಿದೆ

ಬಿಜೆಪಿ ಬೆಂಬಲಿತ ಸದಸ್ಯರ ಪ್ರಕಾರ ಕಾಂಗ್ರೆಸ್ ನ ದುರಾಡಳಿತವೇ ನಮ್ಮ ಗ್ರಾಮದ ಈ ಪರಿಸ್ಥಿತಿಗೆ ಕಾರಣ ಹಾಗೂ ಎಲ್ಲಾ ವಿಚಾರದಲ್ಲಿ ಕೂಡ ಗ್ರಾಮ ಪಂಚಾಯತ್ ಹಿಂದೆ ಉಳಿಯಲು ಕಾರಣ ಅಸಮರ್ಪಕ ಆಡಳಿತ ನೀಡಿದ ಪರಿಣಾಮ ಈ ರೀತಿ ಆಗಿದೆ ನಮಗೆ ಅಧಿಕಾರ ಸಿಕ್ಕಿದ್ದಲ್ಲಿ ಕೇವಲ ಒಂದೇ ವರ್ಷದಲ್ಲಿ ಗ್ರಾಮವನ್ನು ಮೊದಲ ಸ್ಥಾನಕ್ಕೇರಿಸುವ ಪ್ರಯತ್ನ ಮಾಡುತ್ತೇವೆ ಎನ್ನುವ ಅಭಿಪ್ರಾಯ ಕೆಲವು ಸದಸ್ಯರು ವ್ಯಕ್ತಪಡಿಸಿದ್ದಾರೆ

ಗ್ರಾಮದಲ್ಲಿ 22 ಗ್ರಾಮಪಂಚಾಯತ್ ಸದಸ್ಯರಿದ್ದು ಒಟ್ಟು ಕಾಂಗ್ರೆಸ್ ಬೆಂಬಲಿತ ಸದಸ್ಯರು 11 ಹಾಗೂ ಬಿಜೆಪಿ ಬೆಂಬಲಿತ ಸದಸ್ಯರು 8 ಹಾಗೂ ಎಸ್ ಡಿ ಪಿ ಐ ಬೆಂಬಲಿತ 2 ಸದಸ್ಯರು ಜೆಡಿಎಸ್ ಬೆಂಬಲಿತ 1 ಸದಸ್ಯರನ್ನು ಒಳಗೊಂಡಿದೆ ಸತತವಾಗಿ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ನಲ್ಲಿ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷರು ಅಧಿಕಾರದಲ್ಲಿ ಇದ್ದು ಇಲ್ಲಿ ಒಂದೇ ಒಂದು ಬಾರಿ ಕೂಡ ಬಿಜೆಪಿ ಬೆಂಬಲಿತರು ಅಧಿಕಾರ ಹಿಡಿದಿಲ್ಲ

ಈ ವರೆಗೆ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಕೇವಲ 32%  ತೆರಿಗೆ ಸಂಗ್ರಹ ಮಾತ್ರ ಮಾಡಿರುತ್ತದೆ

ನೆಟ್ಟಣಿಗೆ ಮುಡ್ನೂರು ಮತ್ತು ಕೊಳ್ತಿಗೆ ಗ್ರಾಮಪಂಚಾಯತ್ ನಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿದ್ದು ಅಲ್ಲಿ ತೆರಿಗೆ ಸಂಗ್ರಹದಲ್ಲಿ ಅತೀ ಕಳಪೆ ಮಟ್ಟದ ಸಾಧನೆ ಮಾಡಿದೆ

ಡಿಸಿಬಿ ರಿಪೋರ್ಟ್ ನ‌ ಪ್ರಕಾರ ಎಲ್ಲಾ ಗ್ರಾಮದ ಪಟ್ಟಿ ಈ ಕೆಳಗಿನಂತಿದೆ

DCB REPORT (11.02.2025)

1. ಹಿರೇಬಂಡಾಡಿ-83%
2. ಬಲ್ನಾಡು-81%
3. 34 ನೆಕ್ಕಿಲಾಡಿ-78%
4. ಬಜತ್ತೂರು-78%
5. ಕೆಯ್ಯೂರು-76%
6. ಕೊಡಿಂಬಾಡಿ-72%
7. ಕೆದಂಬಾಡಿ-71%
8. ಉಪ್ಪಿನಂಗಡಿ-68%
9. ನರಿಮೊಗ್ರು-67%
10. ಬೆಟ್ಟಂಪಾಡಿ-65%
11. ಕುಡಿಪ್ಪಾಡಿ-64%
12. ಕೊಳ್ತಿಗೆ-63%
13. ಅರಿಯಡ್ಕ-62%
14. ಆರ್ಯಾಪು-60%
15. ಬಡಗನ್ನೂರು-60%
16. ಒಳಮೊಗ್ರು-59%
17. ಕಬಕ-58%
18. ನಿಡ್ಪಳ್ಳಿ-58%
19. ಮುಂಡೂರು-57%
20. ಪಾಣಾಜೆ-57%
21. ಬನ್ನೂರು-51%
22. ನೆಟ್ಟಣಿಗೆ ಮುಡ್ನೂರು-32%