ಉತ್ತರ ಪ್ರದೇಶ: ಕುಂಭಮೇಳ ಜಗತ್ತಿನ ಅತಿ ದೊಡ್ಡ ಧಾರ್ಮಿಕ ಉತ್ಸವ ಎಂದು ಕರೆಯಲಾಗುತ್ತದೆ. ಈ ಬಾರಿ ಇಲ್ಲಿ ಆಗಮಿಸಿದ ಭಕ್ತರ ಸಂಖ್ಯೆ ನಿರೀಕ್ಷೆಗೂ ಮೀರಿತ್ತು.
ಜನವರಿ 13 ರಿಂದ ಪ್ರಾರಂಭವಾದ ಈ ಭವ್ಯ ಕಾರ್ಯಕ್ರಮದಲ್ಲಿ ಈಗಾಗಲೇ ಸುಮಾರು 50 ಕೋಟಿ ಜನ ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದೂ ಕೇಳಿ ಬರ್ತಾ ಇದೆ. ಅದೆಷ್ಟರ ಮಟ್ಟಿಗೆ ಜನ ಪಾಲ್ಗೊಂಡಿದ್ದಾರೆ ಎಂದು ಗೊತ್ತಾ?? ಈ ಸಂಖ್ಯೆ ವಿಶ್ವದ ಎರಡು ಬಲಿಷ್ಠ ರಾಷ್ಟ್ರಗಳಾದ ಅಮೆರಿಕಾ ಮತ್ತು ರಷ್ಯಾದ ಒಟ್ಟು ಜನಸಂಖ್ಯೆಯನ್ನು ಮೀರಿಸಿದೆ. ಕೇವಲ 33 ದಿನಗಳಲ್ಲಿ ಇಷ್ಟು ದೊಡ್ಡ ಪ್ರಮಾಣದ ಭಕ್ತ ಸಮೂಹ ಈ ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸಿದ್ದು ಒಂದು ಅಪೂರ್ವ ಘಟನೆ.
ಇನ್ನೂ 11 ದಿನ ಬಾಕಿಯಿರುವುದರಿಂದ ಈ ಸಂಖ್ಯೆಯಲ್ಲಿ ಇನ್ನಷ್ಟು ಭಕ್ತರ ಸೇರ್ಪಡೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ವಿಶೇಷವಾಗಿ, ಮಹಾಶಿವರಾತ್ರಿಯ ದಿನವಾದ ಫೆಬ್ರವರಿ 26ರ ವೇಳೆಯಲ್ಲಿ ಈ ಸಂಖ್ಯೆಯು 60 ಕೋಟಿ ಭಕ್ತರನ್ನು ತಲುಪಬಹುದು ಎಂದು ಅಂದಾಜಿಸಲಾಗಿದೆ. ಇದು ಕೇವಲ ಧಾರ್ಮಿಕ ಉತ್ಸವ ಮಾತ್ರವಲ್ಲ, ಭಾರತದ ಐಕ್ಯತೆ, ಸಂಸ್ಕೃತಿ ಮತ್ತು ಆಧ್ಯಾತ್ಮದ ಮಹತ್ವವನ್ನು ಜಗತ್ತಿಗೆ ತೋರಿಸುವ ಮಹಾ ಕಾರ್ಯಕ್ರಮವಾಗಿದೆ.