ಬೆಂಗಳೂರು: ಮೆಟ್ರೋ ದರ ಹೆಚ್ಚಳದ ವಿರುದ್ಧ ಪ್ರತಿಭಟನೆ!; ಎಬಿವಿಪಿ ಕಾರ್ಯಕರ್ತರ ವಿರುದ್ಧ ಹಲವಾರು ಪ್ರಕರಣಗಳು ದಾಖಲಿಸಿದ ಕಾಟನ್‌ಪೇಟೆ ಪೊಲೀಸರು!

  • 16 Feb 2025 05:23:12 PM


ಬೆಂಗಳೂರು: ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದ ಫೂಟ್ ಪಾತ್ ನಲ್ಲಿ ಮೆಟ್ರೋ ಟಿಕೆಟ್ ದರಗಳ ಅಸಂಗತ ಹೆಚ್ಚಳದ ವಿರುದ್ಧ ಎಬಿವಿಪಿಯ ಕಾರ್ಯಕರ್ತರು ಕೇವಲ 10 ನಿಮಿಷಗಳ ಕಾಲ ಶಾಂತಿಯುತ ಪ್ರತಿಭಟನೆ ನಡೆಸಿದರು. ಆದರೆ, ಕಾಟನ್‌ಪೇಟೆ ಪೊಲೀಸರು ಎಲ್ಲ ಪ್ರತಿಭಟನಾಕಾರರನ್ನು ಬಂಧಿಸಿ, 15ಕ್ಕೂ ಹೆಚ್ಚು ಎಫ್‌ಐಆರ್ ದಾಖಲಿಸುವ ಮೂಲಕ ಪ್ರತಿಭಟನೆ ದೊಡ್ಡ ಅಪರಾಧ ಎಂದುವ್ಯಾಖ್ಯಾನಿಸಿದರು. ಯಾವುದೇ ಅಶಾಂತಿ ಇಲ್ಲದಿದ್ದರೂ ವಿದ್ಯಾರ್ಥಿಗಳ ಮೇಲೆ ನಿಷ್ಕರುಣ ನ್ಯಾಯಭೇದವನ್ನು ಹೇರಲಾಗಿದೆ ಎಂದು ತಿಳಿದು ಬಂದಿದೆ.

 

ಈ ಸಣ್ಣ ಪ್ರತಿಭಟನೆ ನಡೆಸಿದಕ್ಕಾಗಿ ಕಾನೂನಿನ ಹಲವು ಗಂಭೀರ ಸೆಕ್ಷನ್‌ಗಳನ್ನು ಕಾರ್ಯಕರ್ತರ ವಿರುದ್ಧ ಫೈಲ್ ಮಾಡಿದ್ದಾರೆ. ಇದರಡಿಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ, 1963ರ ಸೆಕ್ಷನ್ 103 U/A, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 189(2), ಸೆಕ್ಷನ್ 190 ಮತ್ತು ಸೆಕ್ಷನ್ 223 ಸೇರಿವೆ. 

 

ಈ ಕಾನೂನು ಕಲಂಗಳು ಸಾಮಾನ್ಯ ಅಪರಾಧಗಳಿಗೆ ಅನ್ವಯಿಸುವಂತೆ ಇದ್ದರೂ ಸಹ ಸರ್ಕಾರವು ವಿರೋಧ ಸ್ವರಗಳನ್ನು ದಮನಿಸಲು ವಿದ್ಯಾರ್ಥಿಗಳ ವಿರುದ್ಧ ದುರ್ಬಳಕೆ ಮಾಡುತ್ತಿದೆ ಎಂದೆನ್ನಲಾಗಿದೆ.ಕರ್ನಾಟಕದಲ್ಲಿ ಸರಳ ಪ್ರೊಟೆಸ್ಟ್ ಕೂಡ ಅಪರಾಧವೆಂದು ಪರಿಗಣಿಸಲಾಗುತ್ತಿದೆ. ಸರ್ಕಾರ ತನ್ನ ವಿರುದ್ಧದ ಪ್ರತಿಯೊಂದು ಧ್ವನಿಯನ್ನು ನಿಗ್ರಹಿಸಲು "ಹಿಟ್ಲರ್ ರಾಜ್" ಸ್ಥಾಪನೆ ಮಾಡುತ್ತಿದೆ. ಜನಸಾಮಾನ್ಯರು ಸರ್ಕಾರವನ್ನು ಪ್ರಶ್ನಿಸ ಬಾರದೆಂಬ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

 

ಅದಲ್ಲದೆ ಇದೀಗ "ಗುೃಹ ಜ್ಯೋತಿ" ಮತ್ತು "ಗುೃಹ ಲಕ್ಷ್ಮಿ" ಯೋಜನೆಗಳ ನಂತರ, "ಎಫ್‌ಐಆರ್ ಗ್ಯಾರಂಟಿ" ಎಂಬ ಹೊಸ ಯೋಜನೆಯನ್ನು ಕರ್ನಾಟಕ ಸರ್ಕಾರದ ಪರಿಚಯಮಾಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.