ವಿಟ್ಲ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ! : ಅಂಗಡಿ ಮಾಲಿಕ ಅಶ್ರಫ್‌ಗೆ 5 ವರ್ಷ ಜೈಲು, ₹30,000 ದಂಡ!

  • 16 Feb 2025 05:55:38 PM


ವಿಟ್ಲ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಶಿಕ್ಷೆ ವಿಧಿಸಿರುವ ಘಟನೆ ಬೆಳಕಿಗೆ ಬಂದಿದೆ. ಎ.ಎಮ್ ಸ್ಟೋರ್ ದಿನಸಿ ಅಂಗಡಿ ಮಾಲಕನಾದ 40 ವರ್ಷದ ಅಶ್ರಫ್, ಅಂಗಡಿಗೆ ಬಂದಿದ್ದ ಬಾಲಕಿಯ ಮೇಲೆ ಕೃತ್ಯ ಎಸಗಿದ್ದಾನೆ. ಈ ಘಟನೆ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಪೊಲೀಸರು ತನಿಖೆ ಕೈಗೊಂಡಿದ್ದರು.

 

ಈ ಪ್ರಕರಣದ ವಿರುದ್ಧ ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಆರೋಪಿಯನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದವು. ಪ್ರಕರಣದ ತನಿಖೆ ನಂತರ, ವಿಟ್ಲ ಪೊಲೀಸರು ಅಶ್ರಫ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಂಗದ ಮುಂದೆ ಸಾಕ್ಷ್ಯಾಧಾರಗಳು ಮಂಡನೆಯ ಬಳಿಕ, ಪ್ರಕರಣವನ್ನು ಮಂಗಳೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ವಿಚಾರಣೆ ನಡೆಸಿತು.

 

ನ್ಯಾಯಾಲಯದ ತೀರ್ಪಿನ ಪ್ರಕಾರ, ಭಾರತೀಯ ದಂಡ ಸಂಹಿತೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (POCSO) ನನ್ವಯ ಆರೋಪಿ ಅಶ್ರಫ್‌ಗೆ 5 ವರ್ಷಗಳ ಜೈಲು ಶಿಕ್ಷೆ ಹಾಗೂ ₹30,000 ದಂಡವನ್ನು ವಿಧಿಸಲಾಗಿದೆ. ಈ ತೀರ್ಪು ಬಾಲಕಿಯ ನ್ಯಾಯಕ್ಕಾಗಿ ಹೋರಾಡಿದ ಕೊರತಕ್ಕೆ ಸಂದ ಜಯ. ಈ ತೀರ್ಪನ್ನೂ ಹಿಂದೂ ಸಂಘಟನೆಗಳು ಸ್ವೀಕರಿಸಿದೆ. ಸಮಾಜದಲ್ಲಿ ಈ ರೀತಿಯ ಅಪರಾಧಗಳಿಗೆ ಕಠಿಣ ಶಿಕ್ಷೆ ಅವಶ್ಯಕತೆಯಿದೆ ಎಂಬ ಅಭಿಪ್ರಾಯವನ್ನು ಸಹ ವ್ಯಕ್ತ ಪಡಿಸಿದ್ದಾರೆ.