ಅಡ್ಯನಡ್ಕ: ಸಾಯ ಜಾನುಗುರಿಯಲ್ಲಿ ದಾರಿ ಕಲಹ ತೀವ್ರ! ಮನೆಗೆ ಹಾನಿ; ಎಡರಂಗ ತೊರೆದು ಬಿಜೆಪಿ ಸೇರಿದ ಕುಟುಂಬ!

  • 16 Feb 2025 10:40:06 PM


ಅಡ್ಯನಡ್ಕ: ಎಣ್ಮಕಜೆ ಪಂಚಾಯತು ವ್ಯಾಪ್ತಿಯ 1 ನೇ ವಾರ್ಡು ಸಾಯ ಜಾನುಗುರಿಯಲ್ಲಿ ವಾಸಿಸುವ ಮೂರು ಕುಟುಂಬಗಳು ಸಿಪಿಎಂ ತೊರೆದು ಬಿಜೆಪಿಗೆ ಸೇರಿರುತ್ತಾರೆ. ಕಾರಣ ಏನು ಗೊತ್ತೇ??

 

 ಇಲ್ಲಿನ ಚನಿಯಪ್ಪ‌ ನಾಯ್ಕ ಹಾಗೂ ಸಂಗಡಿಗರು ಸಕ್ರಿಯ ಸಿಪಿಎಂ ಕಾರ್ಯಕರ್ತರಾಗಿದ್ದರು. ಹಲವು ವರ್ಷಗಳಿಂದ ಎದುರಿಸುತ್ತಿರುವ ದಾರಿ ಸಮಸ್ಯೆಯೇ ಇವರು ಸಿಪಿಎಂ ಬಿಡಲು ಕಾರಣವೆನ್ನಲಾಗಿದೆ. ಸ್ವಂತ ಸ್ಥಳದಲ್ಲಿ ಹಾದು ಹೋಗುವ ದಾರಿಯನ್ನು ಸಾರ್ವಜನಿಕ ದಾರಿಯಾಗಿ ಮಾಡಬೇಕು ಎಂಬ ಸಿಪಿಎಂ ನೇತಾರರ ನಿರಂತರವಾದ ಕಿರುಕುಳಕ್ಕೆ ಬೇಸತ್ತು ಬಿಜೆಪಿ ಸೇರಿರುವುದಾಗಿ ಚನಿಯಪ್ಪ ನಾಯ್ಕ ಹೇಳಿದ್ದಾರೆ. ಚನಿಯಪ್ಪ ನಾಯ್ಕ‌ ಮಗನಿಗೆ 15 ಸೆಂಟ್ ಸ್ಥಳ ನೀಡಿದ್ದು ಇಲ್ಲಿ ಮನೆ ನಿರ್ಮಿಸಲಾಗಿತ್ತು. ಸ್ವಲ್ಪ ದಿನಗಳ ಹಿಂದೆ ಸಿಪಿಎಂ ಕಾರ್ಯಕರ್ತರು ಮನೆಗೆ ಹಾನಿಯನ್ನುಂಟು ಮಾಡಿದ್ದರು.ಅದಲ್ಲದೆ ಈ ಮನೆಯಲ್ಲಿನ ರಾಮಚಂದ್ರ, ಪತ್ನಿ ವಿಜಯಲಕ್ಷ್ಮಿ, ಅಪ್ರಾಪ್ತರಾದ ಇಬ್ಬರು ಹೆಣ್ಣು ಮಕ್ಕಳಿಗೆ ಬೆದರಿಕೆಯೊಡ್ಡಿದ್ದಾರೆ ಎಂದು ಹೇಳಿದ್ದಾರೆ.

 

 

 

ಘಟನೆ ನಡೆದ ಸ್ಥಳಕ್ಕೆ ಬಿಜೆಪಿ ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ,ಹಿಂದು ಸಂಘಟನೆಯ ಪ್ರಮುಖರಾದ ಅಕ್ಷಯ್ ರಜಪೂತ್, ಪಂಚಾಯತು ಅಧ್ಯಕ್ಷ ಸುಮಿತ್ ರಾಜ್, ಇತರರಾದ ಸ್ವಾಗತ್ ಸೀತಾಂಗೋಳಿ, , ಗೋಪಾಲ ಪಾಟಾಳಿ ಮೊದಲಾದವರು ಭೇಟಿ ನೀಡಿ ಈ ಕುಟುಂಬಗಳನ್ನು ಸಂತೈಸಿದರು. ಈ ಸಂದರ್ಭದಲ್ಲಿ ಕಳೆದ ಹಲವು ವರ್ಷಗಳಿಂದ ಸಿಪಿಎಂ ಬೆಂಬಲಿಗರಾಗಿದ್ದ ಈ ಮೂರು ಕುಟುಂಬಗಳು ಬಿಜೆಪಿಗೆ ಸೇರ್ಪಡೆಯಾದರು. ಇವರನ್ನು ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ಈ ಘಟನೆಯ ಬಗ್ಗೆ ಸಮಗ್ರ ತನಿಖೆ ಹಾಗೂ ಎಡರಂಗದ ಬೆದರಿಕೆ ತಂತ್ರವನ್ನು ಮಟ್ಟ ಹಾಕಲು ಸಂಘಟಿತರಾಗುವಂತೆ ಬಿಜೆಪಿ ಕರೆ ನೀಡಿದೆ.