ರೈಲ್ವೆ ಹಳಿಯ ಕಬ್ಬಿಣ ಹೆಕ್ಕಿದರೆಂದು ಅಪ್ರಾಪ್ತ ಬಾಲಕರ ಮೇಲೆ ಹಲ್ಲೆ – ರೈಲ್ವೇ ಗ್ಯಾಂಗ್ ಮ್ಯಾನ್ ವಿರುದ್ಧ ದೂರು!

  • 17 Feb 2025 06:22:09 PM


ಪಡುಬಿದ್ರಿ: ಎರಡು ಅಪ್ರಾಪ್ತ ಬಾಲಕರ ಮೇಲೆ ಹಲ್ಲೆ ನಡೆಸಿ, ಅದನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ ಪ್ರಕರಣ ಪಡುಬಿದ್ರಿ ಪೊಲೀಸರ ಗಮನಕ್ಕೆ ಬಂದಿದೆ. ಬಾಲಕರು ರೈಲ್ವೇ ಹಳಿಯ ಬಳಿ ಆಟವಾಡುತ್ತಿದ್ದಾಗ, ಕಬ್ಬಿಣದ ತುಂಡು ಹೆಕ್ಕಿದ್ದರು ಅದನ್ನು ಗಮನಿಸಿದ ಗ್ಯಾಂಗ್ ಮ್ಯಾನ್ ಹಿಡಿದು ಕೋಲಿನಿಂದ ಹಲ್ಲೆ ನಡೆಸಿದ್ದಾನೆ. ಈ ಸಂಬಂಧ ಬಾಲಕರ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಹಲ್ಲೆಗೊಳಗಾದ ಬಾಲಕರ ಪೋಷಕರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ ಅವರ ಪೈಕಿ ಒಬ್ಬನ ತಂದೆ ಹೆಜಮಾಡಿಯ ಅಬ್ದುಲ್ ಖಾದರ್ ಎಂಬಾತ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. .

 

ಘಟನೆ ಶನಿವಾರ ಮಧ್ಯಾಹ್ನ ಪಲಿಮಾರು ಗ್ರಾಮದ ಅವರಾಲು ಮಟ್ಟು ಎಂಬಲ್ಲಿ ನಡೆದಿದೆ. ಬಾಲಕರು ಆಟವಾಡಲು ಅಜ್ಜನ ಮನೆಗೆ ಹೋಗಿದ್ದಾಗ ಈ ಘಟನೆ ಸಂಭವಿಸಿದ್ದು , ಈ ಘಟನೆ ಮಕ್ಕಳ ಮೇಲೆ ಭಯ ಮೂಡಿಸಿದೆ. ಪಡುಬಿದ್ರಿ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.