ಪುತ್ತೂರು *ಮೊನ್ನೆ ಮಂಗಳೂರಿನಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಡಾ/ಅರುಣ್ ಉಳ್ಳಾಲ್ ಅವರು ತಮ್ಮ ಧರ್ಮದಲ್ಲಿ ನಾವು ಹೇಗೆಲ್ಲಾ ನಡೆದು ಕೊಳ್ಳಬೇಕೆಂದು ಸ್ವಧರ್ಮ ಬಾಂಧವರಿಗೆ ಉಪನ್ಯಾಸ ಮಾಡಿದ ವಿಡಿಯೋ ತುಣುಕು ನೋಡಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಅವರ ಮೇಲೆ ಬಿ ಎನ್ ಎಸ್ 196 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಈ ಸೆಕ್ಷನ್ ಜಾಮೀನು ರಹಿತ ಪ್ರಕರಣವಾಗಿದೆ, ಅದರೆ ಬಿಲ್ಲವ ಸಮಾಜದ ಯುವತಿಯರ ಬಗ್ಗೆ ಅವ್ಯಾಚ ಶಬ್ದಗಳಿಂದ ಮಾತನಾಡಿ ಧರ್ಮದ ಮತ್ತು ಮಹಿಳೆಯರ ಅವಹೇಳನ ಮಾಡಿದ ಅರಣ್ಯ ಇಲಾಖೆಯ ಅಧಿಕಾರಿ ಕಾಣಿಯೂರು ಸಂಜೀವನ ಮೇಲೆ ಜನರೇ ಬಂದು ಕೇಸು ಕೊಟ್ಟರೋ ಬಿ ಎನ್ ಎಸ್ 79 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ, ಈ ಸೆಕ್ಷನ್ 3ವರ್ಷಕ್ಕಿಂತ ಕಡಿಮೆ ಶಿಕ್ಷೆ ಇರುವ ಪ್ರಕರಣ ವಾಗಿದೆ, ಈ ಇಲಾಖೆಯ ಅಧಿಕಾರಿಗಳು ಇಬ್ಬಗೆ ನೀತಿ ಮುಂದುವರಿದರೆ ಸಮಾಜವೇ ಇದಕ್ಕೆ ಸೂಕ್ತ ರೀತಿಯಲ್ಲಿ ಉತ್ತರ ಕಂಡು ಕೊಳ್ಳಬೇಕಾಗುತ್ತದೆ, ಪುತ್ತೂರಿನಲ್ಲಿ ಎದ್ದಿರುವ ಪ್ರತಿಭಟನೆ ಕೂಗಿಗೆ ಇಲಾಖೆ ಹೊಣೆ ಎಂದು ಜಾಗರಣ ವೇದಿಕೆಯ ಪ್ರಮುಖರು ತಿಳಿಸಿದರು
ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಇಲಾಖೆಯ ಇಬ್ಬಗೆ ನೀತಿಯ ವಿರುದ್ಧ ಹಿಂದು ಜಾಗರಣ ವೇದಿಕೆ ಗರಂ* *ಯಾವುದೇ ಕಾರಣಕ್ಕೂ ಪ್ರತಿಭಟನೆ ವಾಪಸ್ ಇಲ್ಲಾ*
- 17 Oct 2024 10:19:53 PM

