ಪಲ್ಟಿಯಾಗಿ ಚರಂಡಿಗೆ ಬಿದ್ದ ರಿಕ್ಷಾ..! ಚಾಲಕ ದಾರುಣ ಸಾವು, ಮೂವರು ಮಕ್ಕಳಿಗೆ ಗಂಭೀರ..!

  • 17 Feb 2025 09:26:35 PM


ಪುತ್ತೂರು :ಅಪಘಾತಗಳು ಅನಿರೀಕ್ಷಿತವಾಗಿ ಸಂಭವಿಸುತ್ತದೆ. ಆದರೆ ನಾವು ನಮ್ಮ ಎಚ್ಚರಿಕೆಯಲ್ಲಿ ಇರಬೇಕಾಗುತ್ತದೆ. ಇತ್ತೀಚೆಗಂತೂ ಸಾಲು ಸಾಲು ಅಪಘಾತ ಪ್ರಕರಣಗಳ ಬಗ್ಗೆ ಮಾಧ್ಯಮಗಳಲ್ಲಿ ನೋಡುತ್ತಲೇ ಇರುತ್ತೇವೆ. ಅಪಘಾತದಿಂದಾಗಿ ಸಾವನ್ನಪ್ಪುತ್ತಿರುವ ಪ್ರಕರಣಗಳು ಕೂಡಾ ಹೆಚ್ಚಾಗಿ ಬಿಟ್ಟಿದೆ. ಇದೀಗ ಪುತ್ತೂರಿನಲ್ಲೂ ಅಂತಹುದೇ ಮನಕಲಕುವ ಘಟನೆಯೊಂದು ನಡೆದಿದೆ.

 

ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಆಟೋ, ಡ್ರೈವರ್ ಸ್ಪಾಟ್ ಡೆತ್..!

 

ಚಾಲಕನ ಕಂಟ್ರೋಲ್ ತಪ್ಪಿದ ಆಟೋರಿಕ್ಷಾವೊಂದು ಚರಂಡಿಗೆ ಬಿದ್ದು ಚಾಲಕ ದಾರುಣವಾಗಿ ಸಾವನ್ನಪ್ಪಿದ್ದು ಅದರಲ್ಲಿದ್ದ ಮೂವರೂ ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಪುತ್ತೂರಿನ ಅಮ್ಮುಂಜೆಯಲ್ಲಿ ಶುಕ್ರವಾರ ಮಧ್ಯರಾತ್ರಿ ನಡೆದಿದೆ. ಅಮ್ಮುಂಜೆ ನಿವಾಸಿ ಮಹಾಬಲ ಪೂಜಾರಿ ಮೃತಪಟ್ಟ ಅವಿವಾಹಿತ ಯುವಕ. ಇವರ ಸಂಬಂಧಿ ಮಕ್ಕಳಾದ ತುಷಾರ್, ಭವಿತ್ ಮತ್ತು ಪ್ರದೀಪ್ ಎಂಬವರು ಗಾಯಗೊಂಡವರು. ಮೃತಪಟ್ಟ ಚಾಲಕನ ಮನೆಯಲ್ಲಿ ಆಕ್ರಂದನ ಮುಗಿಲುಮುಟ್ಟಿದೆ.

 

ಜಾತ್ರೆಗೆ ಹೋಗಿ ಮರಳುವ ಸಮಯ ನಡೆದೇ ಹೋಯ್ತು ದುರಂತ...!!

 

ಮೂಡುಬಿದಿರೆಯ ಮಿಜಾರು ಎಂಬಲ್ಲಿಗೆ ಜಾತ್ರೆಗೆ ಹೋಗಿ ಅಲ್ಲಿಂದ ಹಿಂತಿರುಗುವ ಸಂದರ್ಭ ಮನೆಗೆ ತಲುಪುವ ಐನೂರು ಮೀಟರ್ ಅಂತರದಲ್ಲೇ ಈ ದುರ್ಘಟನೆ ಸಂಭವಿಸಿದೆ. ರಿಕ್ಷಾ ತಲೆಕೆಳಗಾಗಿ ಬಿದ್ದಿದೆ. ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.