ಅರಿಕೋಡಿ ಕ್ಷೇತ್ರದ ಲಕ್ಕಿ ಡ್ರಾ ರಿಸಲ್ಟ್..! ಸುಳ್ಯದ ಸತೀಶ್ ಭಟ್ ಗೆ ಒಲಿಯಿತು ಬೈಕ್...!!

  • 18 Feb 2025 08:23:38 AM


ಸುಳ್ಯ: ಕೆಲವೊಮ್ಮೆ ಅದೃಷ್ಟದ ಲಾಟರಿಗಳು ಮನುಷ್ಯನ ಜೀವನದ ದಿಕ್ಕನ್ನೇ ಬದಲಾಯಿಸಿ ಬಿಡುತ್ತದೆ. ಅನಿರೀಕ್ಷಿತವಾಗಿ ರಾತ್ರೋ ರಾತ್ರಿ ಸಾಮಾನ್ಯ ಮನುಷ್ಯನೋರ್ವ ಅದೃಷ್ಟ ಖುಲಾಯಿಸಿ ಕೋಟ್ಯಾಧಿಪತಿ ಆದರೆ ಅದಕ್ಕಿಂತ ದೊಡ್ಡ ಅದೃಷ್ಟ ಇನ್ನೊಂದಿಲ್ಲ.‌ ಅದಕ್ಕೆ ಕೇರಳದ ಲಾಟರಿ ಟಿಕೆಟ್ ಗಳಿಗೆ ಜನ ಮುಗಿಬೀಳುತ್ತಾರೆ. ಇದೀಗ ಸುಳ್ಯದ ವ್ಯಕ್ತಿಯೋರ್ವರಿಗೆ ಅದೃಷ್ಟದ ಲಾಟರಿ ಹೊಡೆದಿದೆ.

 

ಸುಳ್ಯದ ವ್ಯಕ್ತಿಗೆ ದೊರೆತ ಅರಿಕೋಡಿ ಕ್ಷೇತ್ರದ ಅದೃಷ್ಟದ ಚೀಟಿ...!

 

ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ವಾರ್ಷಿಕ ಉತ್ಸವದ ಅಂಗವಾಗಿ ಏಳನೇ ವರ್ಷದ ಅದೃಷ್ಟ ಚೀಟಿ ಖುಲಾಯಿಸಿದ್ದು ಈ ಯೋಜನೆಯಲ್ಲಿ ಸುಳ್ಯದ ಪತ್ರಿಕಾ ವಿತರಕ ಸತೀಶ್ ಭಟ್ ಅವರಿಗೆ ಮೂರನೇ ಬಹುಮಾನವಾಗಿ ಬೈಕ್ ಲಭಿಸಿದೆ. ಇದರಿಂದ ಅವರು ಸಂತೋಷವಾಗಿದ್ದು ಅನಿರೀಕ್ಷಿತವಾಗಿ ತಾಯಿ ದಯಪಾಲಿಸಿರೋದು ಇದು ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

 

ಅರಿಕೋಡಿ ವಾರ್ಷಿಕ ಜಾತ್ರೆಯಲ್ಲಿ ಭಾಗವಹಿಸಿದ್ದ ಸತೀಶ್ ಭಟ್..!

 

ಮೊನ್ನೆ ತಾನೇ ಅದ್ಧೂರಿಯಾಗಿ ಅರಿಕೋಡಿ ಚಾಮುಂಡೇಶ್ವರಿ ತಾಯಿಯ ಜಾತ್ರಾ ಮಹೋತ್ಸವ ನಡೆಯಿತು. ಸಹಸ್ರಾರು ಸಂಖ್ಯೆಯಲ್ಲಿ ಈ ವೈಭವದ ಜಾತ್ರೆಗೆ ಜನ ಆಗಮಿಸಿದ್ದರು. ಫೆ.ಹದಿಮೂರರಂದು ಇವರು ತನ್ನ ಸ್ನೇಹಿತರೊಂದಿಗೆ ರಾತ್ರಿ ಅರಿಕೋಡಿ ಕ್ಷೇತ್ರದ ವಾರ್ಷಿಕ ಮಹೋತ್ಸವಕ್ಕೆ ಆಗಮಿಸಿದ್ದು ಅವರು ಅಲ್ಲಿಯೇ ಅದೃಷ್ಟದ ಚೀಟಿ ಪಡೆದುಕೊಂಡಿದ್ದರು.