ರಾತ್ರಿ ಮೊಬೈಲ್ ಚಾರ್ಜ್ ಹಾಕಿ ಮಲಗ್ತೀರಾ ಎಚ್ಚರ!;ಚಾರ್ಜಿಗೆ ಹಾಕಿದ ಮೊಬೈಲ್ ಸ್ಪೋಟದಿಂದ ಭಸ್ಮವಾಯ್ತು‌ ಮನೆ! ಇದ್ದಕಿದ್ದಂತೆ ಸ್ಫೋಟಗೊಂಡ ಚಾರ್ಜ್ ಗಿಟ್ಟ ಮೊಬೈಲ್..! ಮನೆಯನ್ನೇ ಆವರಿಸಿದ ಬೆಂಕಿ..!!

  • 18 Feb 2025 08:27:07 AM


ಕಾರ್ಕಳ : ಈಗಿನ ಆಧುನಿಕ ತಂತ್ರಜ್ಞಾನಗಳು ಅತ್ಯಂತ ಶರವೇಗದಲ್ಲಿ ಮುಂದುವರೆಯುತ್ತಿದೆ. ಆದರೆ ಈಗ ಅದೇನೇ ಹೊಸ ವಸ್ತುಗಳನ್ನು, ಹೊಸ ವಾಹನಗಳನ್ನು ಖರೀದಿಸುವ ಮೊದಲು ನೂರು ಬಾರಿ ಪರಿಶೀಲಿಸಬೇಕಾಗುತ್ತದೆ. ಏಕೆಂದರೆ ಒಮ್ಮೆಲೆ ಸ್ಫೋಟಗೊಂಡು ಅಪಾಯವಾಗುವ ಸಂಭವ ಹೆಚ್ಚಿರುತ್ತದೆ. ಇದೀಗ ಉಡುಪಿ ಜಿಲ್ಲೆಯ ಕಾರ್ಕಳದಲ್ಲೂ ಅಂತಹುದೇ ರೀತಿಯ ಘಟನೆಯೊಂದು ನಡೆದಿದೆ.

 

ಚಾರ್ಜ್ ಗಿಟ್ಟ ಮೊಬೈಲ್ ಇದ್ದಕಿದ್ದಂತೆ ಬ್ಲಾಸ್ಟ್...!!

 

ಮನೆಯಲ್ಲಿ ಚಾರ್ಜ್ ಗಿಟ್ಟಿದ್ದ ಮೊಬೈಲ್ ಫೋನ್ ಸ್ಫೋಟಗೊಂಡು ಬೆಂಕಿಯ ಕೆನ್ನಾಲಿಗೆ ಇಡೀ ಮನೆಯನ್ನೇ ಆವರಿಸಿದ ಘಟನೆ ಕಾರ್ಕಳದ ತೆಳ್ಳಾರು ರಸ್ತೆಯ ಮುರತ್ತಪ್ಪ ಶೆಟ್ಟಿ ಕಾಲನಿಯಲ್ಲಿ ನಡೆದಿದೆ. ಮುರತಪ್ಪ ಶೆಟ್ಟಿ ಕಾಲನಿಯ ಕಿಶೋರ್ ಕುಮಾರ್ ಶೆಟ್ಟಿ ಎಂಬವರ ಮನೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಅಪಾರ ಹಾನಿ ಉಂಟಾಗಿದ್ದು ಸುಮಾರು ಏಳು ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.

 

ನಡೆದ ಘಟನೆಯೇನು..?

 

ಮುಂಜಾನೆ ನಾಲ್ಕು ಗಂಟೆ ಸುಮಾರಿಗೆ ಚಾರ್ಜ್ ಗಿಟ್ಟಿದ್ದ ಮೊಬೈಲ್ ಸ್ಫೋಟಗೊಂಡಿದ್ದು ಇದರಿಂದ ಆವರಿಸಿದ್ದ ಬೆಂಕಿ ಎರಡು ಅಂತಸ್ತಿನ ಮನೆಯನ್ನು ಸಂಪೂರ್ಣವಾಗಿ ಆವರಿಸಿಕೊಂಡಿದೆ. ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿದ್ದಾರೆ. ಟಿವಿ, ಕಿಟಕಿ, ಫ್ಯಾನ್, ಮೊಬೈಲ್ ಸೇರಿದಂತೆ ವಿವಿಧ ಪೀಠೋಪಕರಣಗಳು ಬೆಂಕಿಗೆ ಆಹುತಿಯಾಗಿದೆ. ಮನೆಯ ಮಾಲಕ ಕಿಶೋರ್ ಕುಮಾರ್ ಶೆಟ್ಟಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಬಚಾವಾಗಿದ್ದಾರೆ.