ವಿಟ್ಲ: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನ ಜೀವನ ಸಾಗಿಸಲು ಅತ್ಯಂತ ಸುಲಭದ ದಾರಿಯನ್ನು ಕಂಡುಕೊಳ್ಳುತ್ತಾರೆ. ಅದುವೇ ಕಳ್ಳತನದ ಮಾರ್ಗ. ಇದಕ್ಕೆ ಅದೇನೇನೋ ಗಿಮಿಕ್ ಗಳನ್ನು ಕೂಡಾ ಮಾಡ್ತಾರೆ. ಒಟ್ಟಾರೆ ಹಣದ ಲಾಭ ಗಳಿಸೋದೊಂದೇ ಉದ್ದೇಶ. ಇದೀಗ ಪೊಲೀಸ್ ಅಧಿಕಾರಿಯೇ ಅಂತದ್ದೊಂದು ಕೃತ್ಯದಲ್ಲಿ ಭಾಗಿಯಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಇ.ಡಿ ಅಧಿಕಾರಿಗಳ ಸೋಗಿನಲ್ಲಿ ನಡೆದ ಕೃತ್ಯಕ್ಕೆ ಬಿಗ್ ಟ್ವಿಸ್ಟ್...!!
ವಿಟ್ಲದ ಕೊಳ್ನಾಡಿನ ಉದ್ಯಮಿ ಸಿಂಗಾರಿ ಬೀಡಿ ಮಾಲೀಕ ಸುಲೈಮಾನ್ ಹಾಜಿ ಎಂಬವರ ಮನೆಗೆ ನಕಲಿ ಇಡಿ ಅಧಿಕಾರಿಗಳು ಭೇಟಿ ನೀಡಿ ಲಕ್ಷಾಂತರ ರೂ. ದೋಚಿದ ಪ್ರಕರಣ ಮಂಗಳೂರಿಗರನ್ನೇ ಬೆಚ್ಚಿಬೀಳಿಸಿತ್ತು. ಇದೀಗ ಅದಕ್ಕೆ ಸಂಬಂಧಿಸಿ ಕೇರಳದ ಪೊಲೀಸ್ ಅಧಿಕಾರಿಯನ್ನು ವಿಟ್ಲ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕೇರಳದ ಇರಿಂಗಾಲಕುಡ ನಿವಾಸಿ ಶಫೀರ್ ಬಾಬು ಬಂಧಿತ ಆರೋಪಿ. ಈತನನ್ನು ಸೇರಿಸಿದ್ರೆ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ನಾಲ್ವರನ್ನು ಅರೆಸ್ಟ್ ಮಾಡಲಾಗಿದೆ.
ನಡೆದಿದ್ದ ಘಟನೆ ಏನು..?
ಇಡಿ ಅಧಿಕಾರಿಗಳ ಸೋಗಿನಲ್ಲಿ ಮನೆಗೆ ನುಗ್ಗಿದ ತಂಡ ಲಕ್ಷಾಂತರ ರೂ. ಮೌಲ್ಯದ ಹಣ ಸಹಿತ ಮೂರು ಮೊಬೈಲ್ ದೋಚಿತ್ತು. ಅನುಮಾನಗೊಂಡು ಮನೆ ಮಾಲೀಕ ವಿಟ್ಲ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ಮೂರು ಆರೋಪಿಗಳನ್ನು ಈಗಾಗಲೇ (ಕೊಲ್ಲಂ ನಿವಾಸಿಗಳು)ಬಂಧಿಸಲಾಗಿದೆ.