ಅತ್ಯಾಚಾರ ಹೆಚ್ಚಾಗಲು ನ್ಯಾಯಾಲಯ ವ್ಯವಸ್ಥೆಯೇ ಕಾರಣ!;ನ್ಯಾಯಾಲಯದ ವಿರುದ್ಧ ಗರಂ ಆದ ಪ್ರಮೋದ್ ಮುತಾಲಿಕ್...!!

  • 18 Feb 2025 12:30:44 PM

ಇತ್ತೀಚಿನ ದಿನಗಳಲ್ಲಿ ಪ್ರಪಂಚ ಎಷ್ಟು ಮುಂದುವರೆದರೂ ಕೂಡಾ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಈಗೀಗ ಪ್ರತಿದಿನ ಮಾಧ್ಯಮಗಳಲ್ಲಿ ಅತ್ಯಾಚಾರ ಪ್ರಕರಣಗಳ ಬಗ್ಗೆ, ಮಹಿಳೆಯರ ಮೇಲಿನ ಅಮಾನುಷ ಕೃತ್ಯಗಳ ಬಗ್ಗೆ ವರದಿಯನ್ನು ನೋಡುತ್ತಿರುತ್ತೇವೆ. ಒಟ್ಟಾರೆಯಾಗಿ ಭಾರತ ದೇಶದಲ್ಲಿ ಹೆಣ್ಮಕ್ಕಳಿಗೆ ಭದ್ರತೆಯೇ ಇಲ್ಲದಂತಾಗಿದೆ. ಈ ಬಗ್ಗೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಕೂಡಾ ಕಿಡಿಕಾರಿದ್ದಾರೆ. 

 

ಕಾನೂನಿನ ಅವ್ಯವಸ್ಥೆಯಿಂದಲೇ ಅತ್ಯಾಚಾರ ಆಗ್ತಿರೋದು- ಮುತಾಲಿಕ್...!! 

 

ನ್ಯಾಯಾಲಯ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಕಾನೂನಿನ ಅವ್ಯವಸ್ಥೆಯಿಂದಲೇ ದೇಶದಲ್ಲಿ ಅನೇಕ ರೀತಿಯ ಅನಾಚಾರಗಳು ನಡೆಯುತ್ತಿರೋದು. ಪ್ರತಿನಿತ್ಯ ಅತ್ಯಾಚಾರ, ಕೊಲೆ ಪ್ರಕರಣಗಳು ಹೆಚ್ಚಾಗುತ್ತಿರೋದು. ಸ್ತ್ರೀಯನ್ನು ಪೂಜಿಸುವ ನೆಲದಲ್ಲಿ ಇದೆಂಥಾ ಕೊಳಕು ಕೆಲಸ...ಇದಕ್ಕೆ ಕೊನೆ ಅನ್ನೋದೆ ಇಲ್ಲವಾ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಕಾನೂನಿನ ಅವ್ಯವಸ್ಥೆ ಕುರಿತು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.  

 

ಲವ್ ಜಿಹಾದ್ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೇಶದಲ್ಲಿ ಕಾನೂನುಗಳಿಗೆ ಗಂಭೀರತೆ ಇಲ್ಲದಂತಾಗಿದೆ. ನ್ಯಾಯದೇವತೆಗೆ ಪಟ್ಟಿ ಕಟ್ಟಲಾಗಿದೆ. ಮಹಿಳೆಯ ಸುರಕ್ಷತೆಯ ಬಗ್ಗೆ ಜನಪ್ರತಿನಿಧಿಗಳು ಕೂಡಾ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸಿಡಿಮಿಡಿಗೊಂಡರು.

 

ಲವ್ ಜಿಹಾದ್ ಬಗ್ಗೆ ಸಂಗ್ರಹಿಸಿರುವ ಅಂಕಿ- ಅಂಶ ಕೇಳಿದ್ರೆ ನೋವಾಗುತ್ತೆ...!!

 

ನ್ಯಾಯಾಲಯ ವ್ಯವಸ್ಥೆಯಿಂದಲೇ ದೇಶದಲ್ಲಿ ಅಧಿಕ ಪ್ರಮಾಣದಲ್ಲಿ ಅತ್ಯಾಚಾರ, ಹತ್ಯೆ ಪ್ರಕರಣಗಳು ನಡೆಯುತ್ತಿರೋದು. ದುಷ್ಕೃತ್ಯ ಎಸಗುವ ಕ್ರಿಮಿಗಳಿಗೆ ಕಾನೂನಿನ ಭಯವೇ ಇಲ್ಲದಂತಾಗಿದೆ. ಲವ್ ಜಿಹಾದ್ ಬಗ್ಗೆ ಅಧ್ಯಯನ ನಡೆಸಿ ಸಿದ್ಧಪಡಿಸಿದ ಅಂಕಿ ಅಂಶಗಳನ್ನು ನೋಡಿದ್ರೆ ಮನಸ್ಸಿಗೆ ತುಂಬಾ ನೋವಾಗುತ್ತದೆ.

 

ಇದೇ ರೀತಿ ಸಾಗಿದರೆ ಮತ್ತಷ್ಟು ಸಾವು ನೋವುಗಳನ್ನು ನೋಡಲಿದ್ದೇವೆ. ಹಿಂದೂ ಹೆಣ್ಮಕ್ಕಳ ಸಂಖ್ಯೆಯೂ ಕುಸಿಯಲಿದೆ. ಅದಕ್ಕೂ ಮೊದಲು ಸೂಕ್ತ ರೀತಿಯಲ್ಲಿ ಇಂತಹ ದುಷ್ಕೃತ್ಯಗಳ ವಿರುದ್ಧ ಕಾರ್ಯಪ್ರವೃತ್ತರಾಗೋದು ಒಳ್ಳೆಯದು ಎಂದು ಗುಡುಗಿದರು.