ಹುಬ್ಬಳ್ಳಿ: ಪ್ರೀತಿಗೆ ಕಣ್ಣಿಲ್ಲ ನಿಜ. ಆದರೆ ಪ್ರೀತಿಸೋರಿಗೆ ಕಣ್ಣಿಲ್ವಾ.. ಒಂದಲ್ಲ ಒಂದು ಬಗೆಯ ವಿಚಿತ್ರ ಪ್ರೇಮ ಪ್ರಕರಣಗಳನ್ನು ನಾವು ದಿನನಿತ್ಯ ನೋಡುತ್ತಿರುತ್ತೇವೆ. ಸ್ಟೂಡೆಂಟ್ ನ್ನೇ ಮದ್ವೆಯಾದ ಟೀಚರ್, ಮಗನನ್ನೇ ವಿವಾಹವಾದ ಹೆತ್ತ ತಾಯಿ, ವೃದ್ಧನ ಜೊತೆ ಎಸ್ಕೇಪ್ ಆದ ಆಂಟಿ...ಹೀಗೆ ಬೇರೆ ಬೇರೆ ರೀತಿಯ ಪ್ರೇಮ ಪುರಾಣಗಳನ್ನು ನಾವು ನೋಡಿರಬಹುದು. ಆದರೆ ಇಲ್ಲಿ ನಡೆದ ಘಟನೆ ಅದೆಲ್ಲವುಗಳನ್ನು ಮೀರಿ ಮತ್ತೂ ವಿಚಿತ್ರವಾದದ್ದು. ಏನಂತೀರಾ..? ಈ ಸ್ಟೋರಿ ನೋಡಿ...
ಅಂಕಲ್ ಜೊತೆ ಪರಾರಿಯಾದ ಹದಿನೆಂಟರ ತರುಣಿ...!!
ಅಜ್ಜಿ ಮನೆಗೆ ಹೋಗುವುದಾಗಿ ಹೇಳಿ ಹೊರಟು ಬಂದಿದ್ದ ಹದಿನೆಂಟು ವರ್ಷದ ಯುವತಿ ಐವತ್ತರ ಹರೆಯದ ಅಂಕಲ್ ಜೊತೆ ಪರಾರಿಯಾಗಿರುವ ವಿಚಿತ್ರ ಘಟನೆ ಹುಬ್ಬಳ್ಳಿಯ ಕೊಲ್ಲಾಪುರದಲ್ಲಿ ನಡೆದಿದೆ. ಯುವತಿಯ ಮನೆಯವರು ಕಣ್ಣೀರು ಹಾಕುತ್ತಿದ್ದು ಅಂಕಲ್ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಯುವತಿ ಕರೀಷ್ಮಾ ನಾಪತ್ತೆಯಾದಾಕೆ.
ಈಕೆಗಾಗಿ ಮನೆಯವರು ಫೋಟೋ ಹಿಡಿದು ಸಿಕ್ಕಸಿಕ್ಕಲ್ಲಿ ವಿಚಾರಿಸುತ್ತಾ ಹುಡುಕಿಕೊಡುವಂತೆ ಮಾಧ್ಯಮದವರಲ್ಲಿ, ಪೊಲೀಸರಲ್ಲಿ ಬೇಡಿಕೊಂಡಿದ್ದಾರೆ. ಪ್ರಕಾಶ್ ಗೋಪಿ ಎನ್ನುವಾತ ಯುವತಿಯನ್ನು ಬುಟ್ಟಿಗೆ ಬೀಳಿಸಿದ ಅಂಕಲ್..
ಮದ್ವೆಯಾಗಿ ಮಕ್ಕಳಿದ್ರೂ ಮೂರು ವರ್ಷದ ಹಿಂದೆ ಕರೀಷ್ಮಾ ಹಿಂದೆ ಬಿದ್ದಿದ್ದ ತೆವಲುರಾಜ...!
ಕರೀಷ್ಮಾ ಮನೆಯ ತುಸು ದೂರದಲ್ಲೇ ಪ್ರಕಾಶ್ ಗೋಪಿಯವರ ಮನೆಯಿತ್ತು. ತನಗೆ ಮದುವೆಯಾಗಿ ಮಕ್ಕಳು ದೊಡ್ಡವರಾಗಿದ್ದರೂ ಈತನಿಗೆ ಚಪಲ ಹೆಚ್ಚಿತ್ತು. ಮೂರು ವರ್ಷದ ಹಿಂದೆಯೇ ಕರೀಷ್ಮಾ ಹಿಂದೆ ಬಿದ್ದಿದ್ದನಂತೆ. ಆಕೆಯೂ ಅವನ ಜೊತೆ ಸುತ್ತಾಡುತ್ತಿದ್ದಳು.
ಇದೀಗ ಹದಿನೆಂಟು ತುಂಬುವಷ್ಟರಲ್ಲಿ ತಾನು ಮೇಜರ್ ಎಂದು ತಿಳಿದು ಆತನ ಜೊತೆಗೆ ನಾಪತ್ತೆಯಾಗಿದ್ದಾಳೆ. ನಮ್ಮ ಮಗಳನ್ನು ಹಿಂಬಾಲಿಸಿ ಅಂಕಲ್ ಕಿರುಕುಳ ನೀಡುತ್ತಿದ್ದ ಎಂದು ಕರೀಷ್ಮಾ ಹೆತ್ತವರು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಆಕೆ ಕಾಣೆಯಾಗಿ ನಲ್ವತ್ತು ದಿನವಾದರೂ ಇನ್ನೂ ಪತ್ತೆಯಾಗಿಲ್ಲ. ಆದ್ದರಿಂದ ಹೇಗಾದರೂ ಮಾಡಿ ಹುಡುಕಿಕೊಡುವಂತೆ ಆಕೆಯ ಪೋಷಕರು ಪೊಲೀಸರಲ್ಲಿ ಗೋಗರೆದು ವಿನಂತಿ ಮಾಡಿಕೊಂಡಿದ್ದಾರೆ.