ಪುತ್ತೂರು:ಮನುಷ್ಯ ಬರಬರುತ್ತಾ ಮೃಗದಂತೆ ವರ್ತಿಸುತ್ತಿದ್ದಾನೆ. ಕ್ರೂರಿಯಾಗುತ್ತಿದ್ದಾನೆ. ತಾಳ್ಮೆಯ ಜೊತೆಗೆ ಮನೋಬಲವನ್ನೂ ಕಳೆದುಕೊಳ್ಳುತ್ತಿದ್ದಾನೆ. ಅದಕ್ಕೆ ಇಲ್ಲಸಲ್ಲದ ವಿಚಾರಗಳಿಗೆ ಹಲ್ಲೆ, ಗಲಾಟೆ, ರಾದ್ಧಾಂತ, ಕೊಲೆ ಈಗೀಗ ಕಾಮನ್ ಆಗಿಬಿಟ್ಟಿದೆ. ದ.ಕ ಜಿಲ್ಲೆಯ ಪುತ್ತೂರಿನಲ್ಲೂ ಅಂತಹುದೇ ಘಟನೆಯೊಂದು ನಡೆದಿದೆ.
ಆರಂಭವಾದ ಗಲಾಟೆ ಹಲ್ಲೆಯಿಂದ ಅಂತ್ಯ...
ಇತ್ತಂಡಗಳ ಮಧ್ಯೆ ನಡೆದ ಗಲಾಟೆ ವಿಕೋಪಕ್ಕೇರಿ ವ್ಯಕ್ತಿಯೋರ್ವರಿಗೆ ಸೋಡಾ ಬಾಟಲಿಯಿಂದ ಹಲ್ಲೆ ನಡೆಸಿ ಗಂಭೀರ ಗಾಯಗೊಂಡಿರುವ ಘಟನೆ ಪುತ್ತೂರಿನ ಬೊಳ್ವಾರ್ ನಲ್ಲಿ ನಡೆದಿದೆ. ಉಮೇಶ್ ಬಾಳುಗೋಡು ಎಂಬವರು ಗಾಯಗೊಂಡವರಾಗಿದ್ದಾರೆ. ತಿಂಗಳಾಡಿ ನಿವಾಸಿ ನರ್ಮೇಶ್ ರೈ, ಪ್ರಸಾದ್ ಬಂಧಿತ ಆರೋಪಿಗಳು. ಉಮೇಶ್ ಅವರು ಘಟನೆಗೆ ಸಂಬಂಧಿಸಿದಂತೆ ಪುತ್ತೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈಗಾಗಲೇ ಅನೇಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿ..!!
ಈ ಪ್ರಕರಣದ ಆರೋಪಿ ನರ್ಮೇಶ್ ರೈ ಈ ಹಿಂದೆ ಅನೇಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಅದರದ್ದೇ ಹಿನ್ನೆಲೆ ಹೊಂದಿದ್ದಾನೆ. ಕುಡಿದ ಮತ್ತಿನಲ್ಲಿ ಜಗಳವಾಡಿ ಅದು ತಾರಕಕ್ಕೇರಿ ಉಮೇಶ್ ಮೇಲೆ ಸೋಡಾ ಬಾಟಲಿಯಿಂದ ಹಲ್ಲೆ ನಡೆಸಲಾಗಿದೆ. ಅವರ ತಲೆಗೆ ಗಂಭೀರ ಗಾಯವಾಗಿದ್ದು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.