ಬೆಳ್ತಂಗಡಿ| ಅಕ್ರಮ ಕಸಾಯಿಖಾನೆಗೆ ಪೊಲೀಸರ ದಿಢೀರ್ ಅಟ್ಯಾಕ್..! ದನದ ಮಾಂಸ, ಕರು ಪತ್ತೆ...!

  • 18 Feb 2025 02:48:09 PM

ಬೆಳ್ತಂಗಡಿ: ಗೋಕಳ್ಳರ ಅಟ್ಟಹಾಸ ಕರಾವಳಿಯಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ರಾತ್ರೋ ರಾತ್ರಿ ಮಲಗಿಕೊಂಡಿದ್ದ ದನ-ಕರುಗಳನ್ನು ಮಾನವೀಯತೆಯೇ ಇಲ್ಲದ ರೀತಿಯಲ್ಲಿ ಕ್ರೂರವಾಗಿ ಹೊತ್ತೊಯ್ಯುತ್ತಿದ್ದಾರೆ. ಕಸಾಯಿಖಾನೆಗೆ ದಬ್ಬಿ ಕೊಂದು ಮಾಂಸವನ್ನು ತಿನ್ನುವ ದುರುಳರಿಗೆ ಕಾನೂನಿನ ಭಯವೂ ಇಲ್ಲದಂತಾಗಿದೆ. ಇದೀಗ ಬೆಳ್ತಂಗಡಿಯ ಕಸಾಯಿಖಾನೆಯೊಂದಕ್ಕೆ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ.

 

ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸರ ದಾಳಿ..!!

 

ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ ಘಟನೆ ಬೆಳ್ತಂಗಡಿಯ ಗುರುವಾಯನಕೆರೆ ಸಮೀಪದ ಶಕ್ತಿನಗರದಲ್ಲಿ ನಡೆದಿದೆ. ಹಿಂದೂ ಸಂಘಟನೆ ನೀಡಿದ ಖಚಿತ ಮಾಹಿತಿಯ ಮೇರೆಗೆ ಮಾಂಸ ಕತ್ತರಿಸುತ್ತಿದ್ದ ಸೂಕ್ತ ಸಮಯಕ್ಕೇ ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿದ್ದಾರೆ. 

 

ಪುಟ್ಟ ಕರುಗಳನ್ನೂ ಬಿಡದ ದುರುಳರು...!!

 

ದನದ ಮಾಂಸದ ಜೊತೆಗೆ ಕರುವಿನ ಮಾಂಸವೂ ಪತ್ತೆಯಾಗಿದೆ. ಮುಂಜಾನೆ ಹೊತ್ತಲ್ಲೇ ಕಸಾಯಿಖಾನೆಯಲ್ಲಿ ಆರೋಪಿಗಳು ಕಾರ್ಯಾಚರಿಸುತ್ತಿದ್ದರು ಎನ್ನಲಾಗಿದೆ. ಅನ್ವರ್ ಎಂಬವರಿಗೆ ಸೇರಿದ ಜಾಗದಲ್ಲಿ ಅಕ್ರಮ ಕಸಾಯಿಖಾನೆ ಮಾಡಿ ಅಲ್ಲಿ ಗೋವಧೆ ಮಾಡುತ್ತಿದ್ದರು ಎನ್ನಲಾಗಿದೆ.