ಮೂಡುಬಿದ್ರೆ| ಹಾಡುಹಗಲೇ ಯುವತಿಗೆ ಸ್ಪ್ರೇ ಹಾಕಿ ಕಳ್ಳತನಗೈದ ಖದೀಮರು..!! ಇಪ್ಪತ್ತು ಪವನ್ ಚಿನ್ನ ದರೋಡೆ...!

  • 18 Feb 2025 02:57:42 PM

ಪಡುಬಿದ್ರೆ: ಜನರು ಹಣದಾಸೆಗಾಗಿ ಅನೇಕ ಕಳ್ಳ ದಾರಿಯನ್ನು ಹಿಡಿಯುತ್ತಾರೆ‌. ಇನ್ನೂ ಕೆಲವರು ಅನಿವಾರ್ಯತೆಗೋ, ಹಣದಾಹಕ್ಕೋ ಕಳ್ಳರೇ ಆಗಿ ಬಿಡುತ್ತಾರೆ. ಬ್ಯಾಂಕ್ ದರೋಡೆ, ಮನೆಗೆ ನುಗ್ಗಿ ಕಳ್ಳತನದಂತಹ ಪ್ರಕರಣಗಳು ಇದೀಗ ಕಾಮನ್ ಆಗಿಬಿಟ್ಟಿದೆ. ಮೂಡುಬಿದ್ರಿಯಲ್ಲಿ ನಡೆದ ಈ ಪ್ರಕರಣ ಎಂಥವರನ್ನೂ ಬೆಚ್ಚಿ ಬೀಳಿಸುತ್ತೆ.

 

ಸಿನಿಮೀಯ ರೀತಿಯಲ್ಲಿ ಮನೆಗೆ ಎಂಟ್ರಿ ಕೊಟ್ಟ ಖದೀಮರು..!

 

ಪಾಕ ತಜ್ಞರೋರ್ವರ ಮನೆಗೆ ಹಗಲು ಹೊತ್ತಿನಲ್ಲೇ ಸಿನಿಮೀಯ ರೀತಿಯಲ್ಲಿ ಕಳ್ಳರು ನುಗ್ಗಿದ್ದು ಮನೆಯ ಕಪಾಟಿನಲ್ಲಿದ್ದ ಮೂರೂವರೆ ಲಕ್ಷ ರೂ. ನಗದು, ಇಪ್ಪತ್ತು ಪವನ್ ಚಿನ್ನ ದೋಚಿದ ಘಟನೆಯೊಂದು ನಡೆದಿದೆ. ಅಳಿಯೂರಿನ ನೇಲಡೆ ನಿವಾಸಿ, ಖ್ಯಾತ ಪಾಕತಜ್ಞ ಪ್ರಶಾಂತ್ ಜೈನ್ ಅವರ ಮನೆಯಲ್ಲಿ ಈ ಕೃತ್ಯ ನಡೆದಿದೆ. ಕಳ್ಳತನ ನಡೆದ ಸಂದರ್ಭ ಅವರು ಅವರ ಮಗ ಮತ್ತು ಪತ್ನಿ ಬೇರೆ ಕಡೆ ಕೆಲಸಕ್ಕೆ ಹೋಗಿದ್ದು ಅವರ ಮಗಳು ಮಾತ್ರ ಇದ್ದರು. ವಿಷ್ಯ ತಿಳಿದುಕೊಂಡೇ ಪ್ಲ್ಯಾನ್ ಮಾಡಿದ್ದ ಕಳ್ಳರು ಮನೆಯೊಳಗೆ ನುಗ್ಗಿ ಕಪಾಟು ತೆರೆಯುವ ವೇಳೆ ಸೌಂಡ್ ಬಂದು ಯುವತಿ ನೋಡಿದ್ದಾಳೆ. 

 

ಯುವತಿಗೆ ಸ್ಪ್ರೇ ಹಾಕಿ ಪ್ರಜ್ಞೆ ತಪ್ಪಿಸಿ ಚಿನ್ನ ಕದ್ದೊಯ್ದ ಕಳ್ಳರು..!

 

ಯುವತಿ ಬೊಬ್ಬೆ ಹೊಡೆಯದಂತೆ ಕಳ್ಳರು ಅವಳ ಬಾಯನ್ನು ಒತ್ತಿ ಹಿಡಿದು ಸ್ಪ್ರೇ ಹಾಕಿ ಪ್ರಜ್ಞೆ ತಪ್ಪಿಸಿ ನಗದು ಮತ್ತು ಆಭರಣವನ್ನು ದೋಚಿಕೊಂಡು ಹೋಗಿದ್ದಾರೆ. ಸಂಬಂಧದ ಮಹಿಳೆ ಮನೆಗೆ ಬಂದಾಗಲೇ ಯುವತಿ ಎಚ್ಚರಗೊಂಡಿದ್ದು ನಡೆದ ಘಟನೆ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ವಿಚಾರಣೆ ನಡೆಸುತ್ತಿದ್ದಾರೆ.