ಮಂಗಳೂರು :ಯಾವುದಾದರೂ ಸಮಾರಂಭಗಳು ಅಥವಾ ಕ್ರೀಡಾಕೂಟ ನಡೆಯುತ್ತಿರುವಾಗ ಒಮ್ಮೆಲೆ ಅನಿರೀಕ್ಷಿತವಾಗಿ ದುರಂತಗಳು ಸಂಭವಿಸುವುದನ್ನು ನಾವು ನೋಡಿರ್ತೇವೆ. ಬೆಂಕಿ ಹತ್ತಿಕೊಳ್ಳುವುದು, ಅಥವಾ ಯಾವುದಾದರೂ ಭಾರವಾದ ವಸ್ತು ಬಿದ್ದು ಗಾಯವಾಗೋದು ಹೀಗೆ. ಆದರೆ ದುರಾದೃಷ್ಟವಶಾತ್ ಅಂತಹುದೇ ಘಟನೆ ಮಂಗಳೂರಿನಲ್ಲೂ ನಡೆದಿದೆ.
ಎಮ್ಮೆಕೆರೆಯ ಫುಟ್ಬಾಲ್ ಟೂರ್ನಮೆಂಟಲ್ಲಿ ಅವಘಡ..!
ಮಂಗಳೂರಿನ ಎಮ್ಮೆಕೆರೆ ಬಳಿ ನಡೆದ ಫುಟ್ಬಾಲ್ ಟೂರ್ನಮೆಂಟ್ ಒಂದರಲ್ಲಿ ಪ್ರೇಕ್ಷಕರ ಗ್ಯಾಲರಿ ಇದ್ದಕಿದ್ದಂತೆ ಕುಸಿದು ಬಿದ್ದಿದೆ. ಬಿಎಸ್ಎಲ್ ವತಿಯಿಂದ ಆಯೋಜಿಸಿದ್ದ ಫುಟ್ಬಾಲ್ ಟೂರ್ನಮೆಂಟಲ್ಲಿ ಪ್ರೇಕ್ಷಕರು ಕ್ರೀಡೆ ವೀಕ್ಷಿಸುವ ಗ್ಯಾಲರಿ ಕುಸಿತಗೊಂಡಿರುವ ಘಟನೆ ನಡೆದಿದೆ. ಈ ಘಟನೆಯ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಘಟನೆಯಿಂದ ಅದೃಷ್ಟವಶಾತ್ ದೊಡ್ಡ ದುರಂತವೇನೂ ಸಂಭವಿಸದೆ ಸಣ್ಣಪುಟ್ಟ ಗಾಯಗಳಿಂದ ಎಲ್ಲರೂ ಬಚಾವಾಗಿದ್ದಾರೆ.
ಗ್ಯಾಲರಿ ಬಿದ್ದಾಗ ಭಯದಿಂದ ಚೆಲ್ಲಾಪಿಲ್ಲಿಯಾಗಿ ಓಡಿದ ಪ್ರೇಕ್ಷಕರು..!
ಬೋಳಾರ್ ಸೂಪರ್ ಲೀಗ್ ನಿಂದ ಫುಟ್ಬಾಲ್ ಕ್ರೀಡೆಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭ ದಿಢೀರ್ ಗ್ಯಾಲರಿ ಕುಸಿದು ಬಿದ್ದಿದ್ದು ಎಲ್ಲರೂ ಆತಂಕಕ್ಕೊಳಗಾಗಿ ಚೆಲ್ಲಾಪಿಲ್ಲಿಯಾಗಿ ನೇರವಾಗಿ ಆಟದ ಮೈದಾನಕ್ಕೆ ಓಡಿದ್ದಾರೆ. ಘಟನೆಯನ್ನು ನಿಯಂತ್ರಿಸಲು ಆಯೋಜಕರು ಪರದಾಡಿದ್ದಾರೆ.