ಕಾಸರಗೋಡು|ಡಿಸಿಎಂ ಡಿಕೆಶಿ ಜೊತೆಗೆ ತೆರಳುತ್ತಿದ್ದ ಕಾಂಗ್ರೆಸ್ ಮುಖಂಡನ ಕಾರು ಅಪಘಾತ!;ಅಸಲಿಗೆ ನಡೆದಿದ್ದೇನು ಗೊತ್ತಾ?

  • 19 Feb 2025 09:19:15 AM

ಕಾಸರಗೋಡು: ರಸ್ತೆ ಅಪಘಾತಗಳು ಈಗ ಮಾಮೂಲಿ ಆಗಿಬಿಟ್ಟಿದೆ. ಪ್ರತಿದಿನ ಒಂದಲ್ಲ ಒಂದು ಆ್ಯಕ್ಸಿಡೆಂಟ್ ಸುದ್ದಿಗಳನ್ನು ನಾವು ಮಾಧ್ಯಮಗಳಲ್ಲಿ ನೋಡುತ್ತಿರುತ್ತೇವೆ. ಇದಕ್ಕೆ ರಾಜಕೀಯ ಮುಖಂಡರು, ಸೆಲೆಬ್ರೆಟಿಗಳು ಕೂಡಾ ಹೊರತಾಗಿಲ್ಲ. 

 

ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಉಪಮುಖ್ಯಮಂತ್ರಿ ಡಿಕೆಶಿ...!

 

ಕೇರಳದ ಪೆರಿಯ ಕಲ್ಯೂಟ್ ನಲ್ಲಿ ಕೃಪೇಶ್ ಮತ್ತು ಸಜಿತ್ಥಾಲ್ ಅವರ ಆರನೇ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಆಗಮಿಸಿದ್ದು ಅವರ ಕನ್ನಡ ಭಾಷಣವನ್ನು ಮಲಯಾಳಂ ಭಾಷೆಗೆ ಅನುವಾದಿಸಲು ಟಿಎಂ ಶಾಹಿದ್ ತೆಕ್ಕಿಲ್ ಅವರು ಅವರ ಬೆಂಗಾವಲು ವಾಹನದ ಜೊತೆಯಲ್ಲಿ ಪ್ರಯಾಣಿಸುತ್ತಿದ್ದರು. ಆಗ ದುರಂತವೊಂದು ಸಂಭವಿಸಿದೆ. 

 

ಡಿಕೆಶಿ ಜೊತೆಗೆ ತೆರಳುತ್ತಿದ್ದಾಗ ಏನಾಯಿತು..?

 

ಕಾಸರಗೋಡಿನ ಟ್ರಾಫಿಕ್ ಸಿಗ್ನಲ್ ನಲ್ಲಿ ಕಾರು ನಿಲ್ಲಿಸಿದಾಗ ಹಿಂಬದಿಯಿಂದ ಅತಿ ವೇಗವಾಗಿ ಬಂದ ಶಾಸಕ ಹಾರಿಸ್ ಅವರ ಸಂಬಂಧಿಕರ ಗಾಡಿ ಮತ್ತು ಶಾಹಿದ್ ತೆಕ್ಕಿಲ್ ಮತ್ತು ಇತರ ಕಾಂಗ್ರೆಸ್ ಮುಖಂಡರು ಸಂಚರಿಸುತ್ತಿದ್ದ ವಾಹನಕ್ಕೆ ರಭಸವಾಗಿ ಬಂದು ಗುದ್ದಿದೆ. ಕೂಡಲೇ ವಾಹನದ ಏರ್ ಬ್ಯಾಗ್ ತೆರೆದಿದ್ದರಿಂದ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ. ಹಾನಿಯಾಗಿದೆ ಎಂದು ತಿಳಿದುಬಂದಿದೆ.