ಅಯೋಧ್ಯ: ರಾಮಮಂದಿರ ಸ್ಥಾಪನೆಗೊಂಡು ಉದ್ಘಾಟನೆಯಾದಾಗ ವಿರೋಧ ಪಕ್ಷಗಳು, ಅಲ್ಪ ಮನಸ್ಸಿನ ಬುದ್ಧಿಜೀವಿಗಳು ನಾನಾ ರೀತಿಯಲ್ಲಿ ಟೀಕೆ ಮಾಡಿದ್ದವು. ಅಷ್ಟೇ ಏಕೆ ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದ ವ್ಯವಸ್ಥೆಯ ಕುರಿತು ಕೂಡಾ ಹಲವಾರು ಟೀಕೆಗಳು, ವ್ಯಂಗ್ಯಮಾತುಗಳು ವ್ಯಕ್ತವಾಗಿತ್ತು. ಆದರೆ ಇದೀಗ ಕಾಂಗ್ರೆಸ್ ಪಕ್ಷದ ಮುಖಂಡರೇ ಅಯೋಧ್ಯೆ, ಕುಂಭಮೇಳಕ್ಕೆ ತೆರಳಿ ದರ್ಶನ ಪಡೆದು ಮಿಂದೆದ್ದು ಬರುತ್ತಿದ್ದಾರೆ.
ಅಯೋಧ್ಯೆ ಶ್ರೀರಾಮನ ದರ್ಶನ ಪಡೆದ ಕಾಂಗ್ರೆಸ್ ನಾಯಕ, ರಾಜ್ಯಸಭಾ ಸಂಸದ ಅಭಿಷೇಕ್ ಸಿಂಘ್ವಿ...!!
ಟೀಕೆಗಳನ್ನೇ ಕೆಲಸವೆಂದು ಭಾವಿಸುತ್ತಾ ಅದನ್ನೇ ಮುಂದುವರೆಸುತ್ತಿರುವ ಕಾಂಗ್ರೆಸ್ ನ ಹಿರಿಯ ಮುಖಂಡ ಖರ್ಗೆಯ ಮಾತಿಗೆ ಈ ವ್ಯಕ್ತಿ ಸೆಡ್ಡು ಹೊಡೆದಿದ್ದಾರೆ. ಅಯೋಧ್ಯೆಯಲ್ಲಿ ರಾಮನ ದರ್ಶನ ಪಡೆದು ಅಭಿಷೇಕ್ ಸಿಂಘ್ವಿ ಅವರು ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ `ಅಯೋಧ್ಯೆಯಲ್ಲಿ ರಾಮಲಲ್ಲಾನ ದರ್ಶನ, ಪ್ರಯಾಗ್ ರಾಜ್ ನ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದ ನಂತರ ಭಕ್ತಿ ಮತ್ತು ನಂಬಿಕೆಯಿಂದ ಹೃದಯದಿಂದ ದೆಹಲಿಗೆ ಹಿಂತಿರುಗುತ್ತಿದ್ದೇನೆ. ಈ ತೀರ್ಥಯಾತ್ರೆಯು ಭಾರತದ ಆತ್ಮವು ಏಕತೆ, ಆಧ್ಯಾತ್ಮಿಕತೆ ಮತ್ತು ಶ್ರೀಮಂತ ಸಂಪ್ರದಾಯಗಳಲ್ಲಿದೆ ಎಂಬುದನ್ನು ನಮಗೆ ನೆನಪಿಸುತ್ತಿದೆ ಎಂದು ಹೇಳಿದ್ದಾರೆ.
ಅಯೋಧ್ಯೆಯಲ್ಲಿ ನನಗೆ ಶಾಂತಿಯ ಅನುಭವವಾಯಿತು..!
ಪವಿತ್ರ ಭೂಮಿಯಾದ ಅಯೋಧ್ಯೆಯಲ್ಲಿ ನಡೆದಾಡಿದಾಗ ನನಗೆ ಶಾಂತಿಯ ದಿವ್ಯ ಅನುಭವವಾಯಿತು. ಭಗವಾನ್ ಶ್ರೀರಾಮನ ಮಂದಿರದ ಮೂಲೆ ಮೂಲೆಯಲ್ಲೂ ಭಕ್ತಿ ಮತ್ತು ಶಾಂತಿ ತುಂಬಿದೆ. ಇದು ನಿಜಕ್ಕೂ ಆತ್ಮವನ್ನು ಕಲಕುವ ಅನುಭವ ಎಂದು ಬರೆದಿದ್ದಾರೆ.