ಮಡಿಕೇರಿ: ಇತ್ತೀಚಿನ ದಿನಗಳಲ್ಲಿ ಸ್ಕೀಂ ವ್ಯವಹಾರಗಳು ಹೆಚ್ಚಾಗಿ ಬಿಟ್ಟಿದೆ. ಉಳಿತಾಯದ ದಾರಿ ಇದು, ಅನೇಕ ಗೃಹೋಪಯೋಗಿ ವಸ್ತುಗಳು ಸಿಗುತ್ತದೆ, ಹಣ ಡಬಲ್ ಆಗುತ್ತದೆ ಎಂದೆಲ್ಲಾ ನಂಬಿಸಿ ವಂಚಿಸುತ್ತಾರೆ. ಇದನ್ನು ನಂಬಿ ಹೋದವರಿಗೆ ಕಡೆಗೆ ಚೊಂಬೇ ಗತಿ. ಅದೇ ರೀತಿ ಜನರನ್ನು ಯಾಮಾರಿಸಿದಂತಹ ಘಟನೆ ಮಡಿಕೇರಿಯಲ್ಲಿ ನಡೆದಿದೆ.
ಸ್ಕೀಂ ಹೆಸರಿನಲ್ಲಿ ಯಾಮಾರಿಸಿ ವಂಚಿಸಿದ ಖದೀಮರು ಅರೆಸ್ಟ್..!
ಮೋಸ ಮಾಡಿ ಹಣ ಗಳಿಸುವ ಉದ್ದೇಶದಿಂದ ಗ್ರಾಹಕರಿಂದ ಹಣವನ್ನು ಸಂಗ್ರಹಿಸಿದ ಆರೋಪದಡಿಯಲ್ಲಿ ಎಸ್.ವಿ ಸ್ಟಾರ್ಟ್ ವಿಷನ್ ಎಂಬ ಸ್ಕೀಂ ಮಾಲಕ ಸಹಿತ ಐವರನ್ನು ಮಡಿಕೇರಿ ನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸ್ಕೀಂ ಮಾಲಕ ಮಂಗಳೂರು ಸುರತ್ಕಲ್ ಮೂಲದ ಮಹಮ್ಮದ್ ಅಶ್ರಫ್, ಮಡಿಕೇರಿಯ ಎಂ.ವೈ ಸುಲೈಮಾನ್, ಅಬ್ದುಲ್ ಗಫೂರ್, ಮೊಹಮ್ಮದ್ ಅಕ್ರಮ್, ಕಿಶೋರ್ ಬಂಧಿತ ಆರೋಪಿಗಳಾಗಿದ್ದಾರೆ. ಇವರು ಎಸ್.ವಿ ಸ್ಟಾರ್ಟ್ ವಿಷನ್ ಸ್ಕೀಂ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದರು. ಈಗಾಗಲೇ ಇದಕ್ಕೆ ಸಾವಿರದ ನೂರು ಜನ ಸೇರಿಕೊಂಡಿದ್ದಾರೆ.
ಅಧಿಕೃತ ಸ್ಕೀಂನಂತೆಯೇ ಮಂಗ ಮಾಡಿದ್ದ ಖತರ್ನಾಕ್ ಖದೀಮರು..!
ಒಂದು ಸಾವಿರದಂತೆ ಇಪ್ಪತ್ನಾಲ್ಕು ಕಂತುಗಳನ್ನು ಕಟ್ಟಿ ಪ್ರತೀ ತಿಂಗಳ ಕೊನೆಯಲ್ಲಿ ಲಕ್ಕಿ ಡ್ರಾ ಮಾಡಿ ರಿಸಲ್ಟ್ ನ್ನು ವಾಟ್ಸಾಪ್ ಗ್ರೂಪ್ ನಲ್ಲಿ ತಿಳಿಸಲಾಗುವುದು ಎಂದು ಹೇಳಿ ಇಪ್ಪತ್ತು ತಿಂಗಳ ಲಕ್ಕಿ ಡ್ರಾದಲ್ಲಿ ಒಟ್ಟು ತೊಂಭತ್ತಾರು ಜನರಿಗೆ ವಿವಿಧ ರೀತಿಯ ಬಹುಮಾನವನ್ನು ನೀಡುವುದಾಗಿ ಇವರು ಘೋಷಿಸಿಕೊಂಡಿದ್ದರು ಎನ್ನಲಾಗಿದೆ. ಇವರ ವಿರುದ್ಧ ಪ್ರಕರಣ ದಾಖಲಾಗಿದ್ದು ನ್ಯಾಯಾಂಗ ವಶಕ್ಕೆ ನೀಡಲಾಗಿದೆ.