ಪ್ರೀತಿ ಇದು ಒಂದು ಪವಿತ್ರ ಸಂಬಂಧ. ಎರಡು ಹೃದಯಗಳ ಸಮ್ಮಿಲನ ಆದರೆ ಈಗ ಮಾತ್ರ ಪ್ರೀತಿ, ಪ್ರೇಮ ವ್ಯವಹಾರದ ಒಂದು ಮಾಧ್ಯಮವಾಗಿ ಬಿಟ್ಟಿದೆ. ಅದೇನೇ ಇರಲಿ. ನೈಜವಾಗಿ, ಮನಸ್ಸಿನಲ್ಲಿ ಆರಾಧಿಸುತ್ತಾ ನಿರ್ಮಲವಾಗಿ ಪ್ರೀತಿ ಮಾಡುವವರೂ ಈಗಿನ ಕಾಲದಲ್ಲಿದ್ದಾರೆ. ಆದರೆ ಹೆಚ್ಚಿನ ನೈಜ ಪ್ರೀತಿಗಳಿಗೆ ಕೊನೆಗೆ ಸಿಗೋದು ನೋವೇ. ಇದೀಗ ಇಲ್ಲಿ ನಡೆದ ವಿಚಿತ್ರ ಪ್ರೇಮ ಪ್ರಕರಣವೊಂದು ಕೊಲೆಯಲ್ಲಿ ಅಂತ್ಯವಾಗಿದೆ.
ಮುಸ್ಲಿಂ ಯುವತಿ ಮೇಲೆ ಲವ್, ಹಿಂದೂ ಧರ್ಮದಿಂದ ಮತಾಂತರ..!!
ಹಿಂದೂ ಯುವಕನೊಬ್ಬನಿಗೆ ಮುಸ್ಲಿಂ ಯುವತಿಯ ಮೇಲೆ ಪ್ರೀತಿ ಹುಟ್ಟಿತ್ತು. ಆತ ರಾಹುಲ್ನಿಂದ ಮುರ್ಷದ್ ಆಗಿ ಕೇವಲ ಹೆಸರು ಬದಲಾಯಿಸಿಕೊಂಡಿದ್ದು ಮಾತ್ರವಲ್ಲದೆ, ಆತ ಇಸ್ಲಾಂ ಧರ್ಮಕ್ಕೆ ಕೂಡಾ ಮತಾಂತರಗೊಂಡಿದ್ದ. ಮುರ್ಷಿದ್ ಕಳೆದ ಎರಡು ವರ್ಷಗಳಿಂದ ಮುಸ್ಲಿಂ ಯುವತಿ ಜತೆಗೆ ಡೇಟಿಂಗ್ ಮಾಡುತ್ತಿದ್ದ, ಆಕೆಗಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ, ನಮಾಜ್ ಮಾಡುವುದನ್ನು ಕೂಡ ಕಲಿತಿದ್ದ. ಆದರೂ ದಾಖಲೆಗಳಲ್ಲಿ ಮಾತ್ರ ಆತ ಇನ್ನೂ ಹಿಂದೂವಾಗಿಯೇ ಇದ್ದಾನೆ.
ತನ್ನ ಪ್ರೇಯಸಿಗಾಗಿತ್ತು ಮತ್ತೊಂದು ವಿವಾಹ, ಇಬ್ಬರ ಕೊಲೆಯಲ್ಲಿ ಪ್ರೀತಿಯೂ ಅಂತ್ಯ..!
ತನ್ನ ಹುಡುಗಿ ಬೇರೆ ಹುಡುಗನ ಜತೆ ವಿವಾಹವಾಗಿರುವುದನ್ನು ತಿಳಿದು ಆತ ಶಾಕ್ ಗೆ ಒಳಗಾಗಿದ್ದ. ಆಕೆಯನ್ನು ಭೇಟಿಯಾಗಲು ಹೋಗಿದ್ದ, ಆದರೆ ಇಬ್ಬರ ನಡುವೆ ಜಗಳ ನಡೆದು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ. ಸ್ವಲ್ಪ ಸಮಯದ ಬಳಿಕ ಹುಡುಗಿಯ ಕುಟುಂಬದವರು ಬಂದು ಮುರ್ಷದ್ನನ್ನು ಕ್ರೂರವಾಗಿ ಥಳಿಸಿ ಹಲ್ಲೆ ಮಾಡಿದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ತೀವ್ರವಾಗಿ ಗಾಯಗೊಂಡಿದ್ದ ಯುವಕನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದರು.
ಆದರೆ ದುರಾದೃಷವಶಾತ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಇಬ್ಬರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಸ್ಪಿ ಅಂಕುರ್ ಅಗರ್ವಾಲ್ ತಿಳಿಸಿದ್ದಾರೆ.