ಹಾಸನದ ಅಧಿದೇವತೆ ಹಾಸನಾಂಬೆಯ ಪವಾಡ ಕಾರಣೀಕ ತಿಳಿಯೋಣ ಬನ್ನಿ.

  • 30 Oct 2024 12:12:45 PM

ತನ್ನದೇ ಆದ ಮಹಿಮೆಯನ್ನು ಕಾರನಿಕ ಶಕ್ತಿಯ ಪವಾಡವನ್ನು, ಪವಾಡದ ಮೂಲಕ ಭಕ್ತರನ್ನು ಸೆಳೆಯುವ ಪರಮ ಪಾವನ ಕ್ಷೇತ್ರ ಹಾಸನಾಂಬ ಕ್ಷೇತ್ರ.
ಪ್ರಸ್ತುತ ಕ್ಷೇತ್ರ ಅಕ್ಟೋಬರ್ 24ಕ್ಕೆ ಕೆ ಬಾಗಿಲು ತೆರೆದು ನವೆಂಬರ್ 2 ಮುಚ್ಚಲಾಗುತ್ತದೆ. ಒಟ್ಟು 14 ದಿನಗಳು ಹಾಸನಾಂಬೆ ದೇಗುಲದ ಬಾಗಿಲು ತೆರೆದಿರಲಿದ್ದು ಭಕ್ತರಿಗೆ ಮೊದಲ ಹಾಗೂ ಕೊನೆಯ ದಿನ ಹೊರತುಪಡಿಸಿ ಉಳಿದ 12 ದಿನಗಳು ದೇವಿ ದರ್ಶನಕ್ಕೆ ಮುಕ್ತ ಅವಕಾಶ ಸಿಗಲಿದೆ.

ಹಾಸನಾಂಬೆ ಹಾಸನದ ಮಾತ್ರವಲ್ಲ ನಾನಾ ರಾಜ್ಯದಿಂದ ಬರುವ ಲಕ್ಷಾಂತರ ಭಕ್ತರ ಕಷ್ಟಗಳನ್ನು ಪರಿಹರಿಸಿ ಇಷ್ಟಾರ್ಥ ಕರುಣಿಸುವ ಕರುಣಾಮಯಿ.ನಾಡಿನ ಶಕ್ತಿದೇವತೆ, ಬೇಡಿದ ವರವ ನೀಡುವ ಭಕ್ತರ ಕಾಮಧೇನು . ದೀಪಾವಳಿ ಸಮಯ ಬಂತೆಂದರೆ ಹಾಸನಾಂಬೆಯ  ದರ್ಶನಕ್ಕೆ ಭಕ್ತರು ಕಾಯುತಿರುತ್ತಾರೆ. ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ಕರುಣಿಸುವ ಹಾಸನಾಂಬೆಯನ್ನು ಕಣ್ತುಂಬಿಕೊಳ್ಳಬೇಕೆಂದು ರಾಜ್ಯ ಮತ್ತು ಅಂತರಾಜ್ಯದಿಂದ ಭಕ್ತರು ಹಾಸನಕ್ಕೆ  ಆಗಮಿಸುತ್ತಾರೆ. ದರ್ಶನ ಸಿಗುವ ಕೆಲವು ದಿನಗಳಲ್ಲಿ ರಾಜ್ಯವಲ್ಲದೆ ಹೊರ ರಾಜ್ಯಗಳಿಂದಲೂ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಬಂದು ದೇವಿಯ ಆಶೀರ್ವಾದ ಪಡೆದು ಪುನೀತರಾಗುತ್ತಾರೆ. ಗಣ್ಯಾತಿ ಗಣ್ಯರು, ಸಿನಿಮಾ ಕ್ಷೇತ್ರದ ನಟ ನಟಿಯರು,ರಾಜಕಾರಣಿಗಳು ಕೂಡ ಶಕ್ತಿದೇವಿಗೆ ಶಿರಬಾಗಿ ನಮಿಸಿ ಸುಖ ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ.

ವರ್ಷಕ್ಕೊಮ್ಮೆ ಅಶ್ವಯುಜ ಮಾಸದ ಹುಣ್ಣಿಮೆಯ ನಂತರ ಬರುವ ಗುರುವಾರ ದೇಗುಲದ ಬಾಗಿಲು ತೆರೆದರೆ ಬಲಿಪಾಡ್ಯಮಿಯ ಮಾರನೆ ದಿನ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಕ್ಷೇತ್ರದ ನಡೆ ಬಾಗಿಲು ಮಾಡಲಾಗುತ್ತೆ. ಮತ್ತೆ ದೇವಿ ದರ್ಶನ ಸಿಗುವುದು ವರ್ಷ ಕಳೆದ ಬಳಿಕವೆ.

ಈ ವರ್ಷ ನವೆಂಬರ್ 2ರಂದು ಬಾಗಿಲು ತೆರೆದಿದ್ದು ನವೆಂಬರ್ 15ಕ್ಕೆಬಾಗಿಲು ಮುಚ್ಚಲಿದೆ. ಒಟ್ಟು 14 ದಿನಗಳು ಹಾಸನಾಂಬೆ ದೇಗುಲದ ಬಾಗಿಲು ತೆರೆದಿರಲಿದ್ದು ಭಕ್ತರಿಗೆ ಮೊದಲ ಹಾಗೂ ಕೊನೆಯ ದಿನ ಹೊರತುಪಡಿಸಿ ಉಳಿದ 12 ದಿನಗಳು ದೇವಿ ದರ್ಶನಕ್ಕೆ ಮುಕ್ತ ಅವಕಾಶ ಸಿಗಲಿದೆ.

#ಹುತ್ತದ_ರೂಪದಲ್ಲಿ_ನೆಲೆಸಿರೋ_ಹಾಸನಾಂಬೆ

ವಾರಣಾಸಿಯಿಂದ ದಕ್ಷಿಣಾಭಿಮುಖವಾಗಿ ವಾಯುವಿಹಾರಕ್ಕೆಂದು ಬಂದ ಸಪ್ತ ಮಾತೃಕೆಯರು ಅಂದರೆ, ಬ್ರಾಹ್ಮೀದೇವಿ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ ಮತ್ತು ದುರ್ಗೆ, ಚಾಮುಂಡಿ ಇವರು ಇಲ್ಲಿಗೆ ಬಂದರೆಂದು ಪ್ರತೀತಿ. ಅವರಲ್ಲಿ, ವೈಷ್ಣವಿ, ವಾರಾಹಿ ಮತ್ತು ಇಂದ್ರಾಣಿ ಈ ಮೂವರು ಹುತ್ತದಲ್ಲಿ ನೆಲೆಸಿದ ಸ್ಥಳವೇ ಹಾಸನಾಂಬೆಯ ದೇಗುಲ. (ದೇವನೊಬ್ಬನೇ ಆದರೂ ಆದಿ ಮಹರ್ಷಿಗಳು ಪುರುಷ ಮತ್ತು ಸ್ತ್ರೀ ಎರಡೂ ಶಕ್ತಿರೂಪಗಳನ್ನು ಒಂದಾಗಿ ಕಂಡಿದ್ದಾರೆ. ಹಾಗೆ ಕಂಡ ಸ್ತ್ರೀ ರೂಪಗಳೆ ಸಪ್ತಮಾತೃಕೆಯರು). ಹಾಸನ ನಗರದ ಹೃದಯಭಾಗದಲ್ಲಿರುವ ದೇವಿಕೆರೆಯಲ್ಲಿ, ಬ್ರಾಹ್ಮಿದೇವಿ, ಕೆಂಚಮ್ಮ ದೇವಿ ಹೊಸಕೋಟೆಯಲ್ಲಿ ನೆಲೆಸಿದ್ದಾರೆ.

#ಮೊಲದ_ರೂಪದಲ್ಲಿ_ದರ್ಶನ_ನೀಡಿದ_ದೇವಿ

ಕೃಷ್ಣಪ್ಪನಾಯಕ 12 ನೇ ಶತಮಾನದ ಪಾಳೆಗಾರ. ಕೃಷ್ಣಪ್ಪನಾಯಕ ಕಾರ್ಯನಿಮಿತ್ತ ಪ್ರಯಾಣ ಹೊರಟಾಗ ಮೊಲವೊಂದು ಅಡ್ಡ ಬಂದಿತು. ಇದು ಅಪಶಕುನವೆಂದು ಭಾವಿಸುತ್ತಾನೆ. ಪ್ರತ್ಯಕ್ಷಳಾದ ಆದಿಶಕ್ತಿ ಸ್ವರೂಪಿಣಿ-ಈ ಸ್ಥಳದಲ್ಲಿ ದೇಗುಲ ಕಟ್ಟು, ನಾನು ಹಾಸನಾಂಬೆ ಎಂದೇ ಹೆಸರಾಗಿ ಇಲ್ಲಿ ನೆಲೆಸುವೆ ಎಂದಳಂತೆ. ಕೃಷ್ಣಪ್ಪ ನಾಯಕನ ಕಾಲದಿಂದಲೂ ಆಶ್ವೀಜ ಮಾಸ ಪೌರ್ಣಮಿಯ ನಂತರ ಬರುವ ಗುರುವಾರದಂದು ಹಾಸನಾಂಬೆಯ ದೇವಾಲಯ ತೆರೆಯಲ್ಪಡುತ್ತದೆ. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತಾದಿಗಳು ಅಂದು ದರ್ಶನಾಕಾಂಕ್ಷಿಗಳಾಗಿ ಬಂದು ದೇವಿಯ ದರ್ಶನ ಪಡೆಯುತ್ತಾರೆ.

#ಪವಾಡಗಳಿಂದಲೇ_ಪ್ರಖ್ಯಾತಿಯಾದ_ಹಾಸನಾಂಬೆ

ಇಲ್ಲಿಯ ವಿಶೇಷವೇನೆಂದರೇ ಗರ್ಭಗುಡಿಯಲ್ಲಿ ವಾಲ್ಮೀಕ ಅಂದ್ರೆ ಹುತ್ತದೋಪಾದಿಯಲ್ಲಿರುವ ಆದಿಶಕ್ತಿ ಸ್ವರೂಪಿಣಿ ಹಾಸನಾಂಬೆಗೆ ಹಿಂದಿನ ವರುಷ ಹಚ್ಚಿಟ್ಟಿದ್ದ ದೀಪವು ಆರದೇ, ಮುಡಿಸಿದ ಹೂ ಬಾಡದೇ ಹಾಗೂ ನೈವೇದ್ಯ ಹಲಸದೆ ಇರೋದು ಇಲ್ಲಿನ ಪವಾಡಕ್ಕೆ ಪ್ರತ್ಯಕ್ಷ ಸಾಕ್ಷಿ. ಇದನ್ನೇ  ಈಗಿನ ರಾಜಕೀಯದ ಲಾಲಸೆಗಾಗಿ ಮೌಢ್ಯ ಎಂದೂ ಕರೆಯುವವರು ಹೆಚ್ಚಾಗಿದ್ದಾರೆ. ಮೌಢ್ಯ ಪವಾಡ ಇಲ್ಲ ಎಲ್ಲ ಸುಳ್ಳು ಎಂದು ಟೀವಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅರ್ಚಕರೊಬ್ಬರಿಗೆ ಅನಾರೋಗ್ಯ ಮತ್ತು ಮಾನಸಿಕ ಸಮಸ್ಯೆ ಬಂದಿರುವುದು ದೇವಿ ಶಕ್ತಿಯನ್ನು ತೋರ್ಪಡಿಸುತ್ತದೆ.ಹೀಗಿದ್ದು ಸಾಮಾಜಿಕ ಜಾಲತಾಣದಲ್ಲಿ ಕ್ಷೇತ್ರದ ಪವಾಡದ ಬಗ್ಗೆ ಅವಹೇಳನ ಮಾಡುವ ಜನರ ಬದುಕಿನ ಮೇಲೂ ವ್ಯತಿರಿಕ್ತ ಪ್ರಭಾವ ಬೀರುತ್ತೆ ಅನ್ನೋದು ಕ್ಷೇತ್ರದ ಭಕ್ತರ ಅಭಿಪ್ರಾಯ. 

ಹಾಸನಾಂಬೆ ದೇವಿ ಮಡಿವಂತಿಕೆ

ನೈರ್ಮಲ್ಯ, ನೇಮ ನಿಷ್ಠೆಗೆ ಒಲಿವಳೆಂಬದು ಆಚಾರ ವಿಚಾರಗಳಿಂದ ತಿಳಿದು ಬಂದಿದೆ. ವರ್ಷಕ್ಕೊಮ್ಮೆ ಮಾತ್ರ ಭಕ್ತಾದಿಗಳು ಭಯಭಕ್ತಿಯಿಂದ ದೇವಿಯ ದರ್ಶನ ಪಡೆಯಲು ಇಲ್ಲಿಗೆ ಬರುತ್ತಾರೆ. ಅಂದು ಹಾಸನದ ನಗರ ಹಾಸನಾಂಬೆಯ ಜಾತ್ರೆ ನಡೆಯುತ್ತದೆ. ಆಸ್ತಿಕರಿಗೆ ನೋಡಲು ನಯನ ಮನೋಹರವಾಗಿದೆ.#ಸಪ್ತಮಾತೃಕೆಯರು : ಸಪ್ತಮಾತೃಕೆಯರು ಆದಿ ಪರಾಶಕ್ತಿಯ ಭಿನ್ನ ರೂಪಗಳಾಗಿದ್ದಾರೆ. ಸಪ್ತಮಾತೃಕೆಯರು ವಿಭಿನ್ನ ದೇವತೆಗಳಿಂದ ಹೊರಹೊಮ್ಮಿದ ಶಕ್ತಿಗಳು. ಬ್ರಹ್ಮಾಣಿಯು ಬ್ರಹ್ಮನಿಂದ ಹೊರಹೊಮ್ಮಿದಳು, ವೈಷ್ಣವಿ ವಿಷ್ಣುವಿನಿಂದ, ಮಹೇಶ್ವರಿ ಶಿವನಿಂದ, ಇಂದ್ರಾಣಿ ಇಂದ್ರನಿಂದ, ಕೌಮಾರಿ ಸ್ಕಂದನಿಂದ, ವರಾಹಿ ವರಾಹನಿಂದ ಮತ್ತು ಚಾಮುಂಡಿ ದೇವಿಯಿಂದ

ಸಪ್ತಮಾತೃಕೆಯರ ಪಕ್ಕದಲ್ಲಿ ಶಿವ ಮತ್ತು ಗಣೇಶ
ಸಪ್ತಮಾತೃಕೆಯರು ತಾಂತ್ರಿಕ ಶಾಸ್ತ್ರ ವಿದ್ಯೆಗಳಿಗೆ ಸರ್ವೋತ್ಕೃಷ್ಟ ಮಹತ್ವವನ್ನು ಪಡೆಯುತ್ತಾರೆ.ಶಾಕ್ತ ಪಂಥದಲ್ಲಿ, ಇವರು ಮಹಾನ್ ಶಾಕ್ತ ದೇವಿಗೆ ಅಂದ್ರೆ ಅಸುರರೊಂದಿಗೆ  ಧರ್ಮಕ್ಕಾಗಿ ಲೋಕ ಕಲ್ಯಾಣಕ್ಕಾಗಿ ಜಗತ್ತನ್ನು ಉಳಿಸಲು ತ್ರಿಮೂರ್ತಿ ಮತ್ತು ಉಳಿದ ದೇವತೆಗಳ ಶಕ್ತಿ ಚೈತನ್ಯದಿಂದ ಸೃಷ್ಠಿಯಾದ ದೇವತೆಗಳೆಂದು ನಂಬಿಕೆ.ಹೀಗೇ ಬಂದ ಸಪ್ತ ಮಾತೃಕೆಯರಲ್ಲಿ ಮೂರು ಮಾತೆಯರು ಹಾಸನದ ದೇವಿಕೆರೆ ಕ್ಷೇತ್ರದಲ್ಲೂ, ಇನ್ನುಳಿದ ಮೂರು ಮಾತೆಯರು ಹಾಸನದ ಹಾಸನಾಂಬ ದೇವಾಲಯದಲ್ಲೂ, ಇನ್ನು ಒಬ್ಬಾಕೆ ಮಾತೆಯೂ ಹಾಸನದಿಂದ ನಲುವತ್ತು ಕಿಮಿ ದೂರದಲ್ಲಿರುವ ಕೆಂಚಮ್ಮನ ಹೊಸಕೋಟಾಯಲ್ಲಿ ಕೆಂಚಾಂಬಿಕೆಯಾಗಿ ನೆಲೆಸುತ್ತಾರೆ ಅನ್ನೋದು ಚರಿತ್ರೆ.ಇಲ್ಲಿ ಉತ್ಸವ ನಡೆಯುವಾಗ ಆ ಉಳಿದ ನಾಲ್ಕು ಮಾತೆಯರನ್ನು ಆವಾಹಿಸಿ ಅವರಿಗೂ ಇಲ್ಲಿ ಪೂಜೆ ಸಲ್ಲುತ್ತದೆ.ವರ್ಷದಲ್ಲಿ 365ದಿನ ಪೂಜೆ ಇರಲ್ಲ. ಅಶ್ವಿಜ ಮಾಸದ ಹುಣ್ಣಿಮೆ ದಿನ ಗುರುವಾರ ಮತ್ತು ಕಾರ್ತಿಕ ಮಾಸದ ಬೀದಿಗೆ ದಿನ ಕ್ಷೇತ್ರ ಬಾಗಿಲು ತೆರೆಯುತ್ತೆ.ನವರಾತ್ರಿ ಒಂಬತ್ತು ರೀತಿಯಲ್ಲಿ ಅವತಾರ ತಳೆದ ಮಾತೆ ಕೊನೆಯದಾಗಿ ಚಾಮುಂಡಿ ರೂಪ ಪಡೆದು ಶತ್ರು ಸಂಹಾರ ಮೂರ್ತಿಯಾಗಿ ಅಶ್ವಿಜ ಮಾಸದ ಹುಣ್ಣಿಮೆ ದಿನ ಹಾಸನಕ್ಕೆ ಬರುತ್ತಾರೆ ಎನ್ನುವುದು ಐತಿಹ್ಯ. ದೇವಾಲಯದ ವರ್ಷಕ್ಕೆ ಒಮ್ಮೆ ಬಾಗಿಲು ತೆಗೆದಾಗ ಶತ್ರು ಸಂಹಾರ ಮೂರ್ತಿ ದೃಷ್ಠಿ ಪ್ರಭಾವ ಭಕ್ತರ ಮೇಲೆ ಬೀಳದ ಹಾಗೇ ಗುಡಿ ಮುಂದೆ ಬಾಳೆ ನೆಡುವ ಸಂಪ್ರದಾಯವಿದೆ. ಇಲ್ಲಿ ವರ್ಷಕ್ಕೆ ಒಮ್ಮೆ ಯಾಕೆ ಪೂಜೆ ಮಾಡ್ತಾರೆ ಅಂದ್ರೆ ಎಲ್ಲ ಕ್ಷೇತ್ರಕ್ಕಿಂತ ಇಲ್ಲಿಯ ಪೂಜೆ ವಿಭಿನ್ನ ರೀತಿಯಲ್ಲಿ ಶ್ರೀಸೂಕ್ತ ರೀತಿಯಲ್ಲಿ ನೆರವೇರುತ್ತೆ.ಈ ದೇವಿ ಪೂಜೆ ಮಾಡುವುದು ಕಟ್ಟುನಿಟ್ಟಾಗಿ ಬಹಳ ಶಿಸ್ತಿನಿಂದ ಮಾಡಬೇಕು. ಮಡಿಯಿಂದ ಒದ್ದೆ ಬಟ್ಟೆಯಿಂದ ದೇವಿಯನ್ನು ಪೂಜೆ ಮಾಡಬೇಕು.ಗರ್ಭ ಗುಡಿಯಲ್ಲಿ ಪ್ರಧಾನ ಅರ್ಚಕರು ಧರಿಸಿದ ಒದ್ದೆ ಬಟ್ಟೆ ಒಣಗಬಾರದು. ಮತ್ತೆ ಬೇರೆ ಅರ್ಚಕರಾಗಲಿ ಇತರೆ ಯಾರೇ ಆಗಿರಲಿ ಪ್ರಧಾನ ಅರ್ಚಕರನ್ನು ಆ ಸಮಯದಲ್ಲಿ ಸ್ಪರ್ಶಿಸಬಾರದು ಎಂಬ ಪದ್ಧತಿ ಅನಾದಿ ಕಾಲದಿಂದ ನಡೆದು ಬಂದಿದೆ.ಹಾಗೆಯೇ ಅಲ್ಲಿ ದೇವರಿಗೆ ನೀಡುವ ನೈವೇದ್ಯ ಮಾಡುವಾಗ ಅದರ ವಾಸನೆಯನ್ನು ಆಗ್ರಾಣಿಸಬಾರದು. ಅದಕ್ಕೆ ಅಪ್ಪಿತಪ್ಪಿ ಎಂಜಲು ಬೀಳಬಾರದು ಎನ್ನುವ ನಿಟ್ಟಿನಲ್ಲಿ ಮುಖಕ್ಕೆ ಕಣ್ಣು ಬಿಟ್ಟು ಮೂಗು ಮತ್ತೆ ಬಾಯಿಗೆ ಬಟ್ಟೆಯನ್ನು ಸುತ್ತಿಕೊಳ್ಳುವ ಕ್ರಮವಿದೆ.ನಾಲ್ಕು ದಿನ ಮಾತ್ರ ಅಭಿಷೇಕ ನಡೆಯುತ್ತೆ. ಈ ಅಭಿಷೇಕ ನಡೆಯುವ ದಿನ ಮಾತ್ರ ಕ್ಷೇತ್ರದಲ್ಲಿ  ತೀರ್ಥ ಸಿಗುತ್ತೆ.ಅಭಿಷೇಕ ನಡೆಯುವಾಗ ಹಸಿರು ಸೀರೆ, ಹಳದಿ ಸೀರೆ ಮತ್ತು ಕೊಳದ ಸೀರೆ, ಮತ್ತು ಮಹಾರಾಜ ಭಕ್ತಿಯಿಂದ ಕೊಡುವ ಸೀರೆ.ಹೀಗೇ ನಾಲ್ಕು ರೀತಿಯ ಸೀರೆಯ ಅಲಂಕಾರದಲ್ಲಿ ತಾಯಿಯನ್ನು ಕಾಣಬಹುದು.ತಾಯಿಯ ಮೂರು ಭಾವದ ರೂಪ ಮಹಾಕಾಳಿ, ಮಹಾಲಕ್ಷ್ಮಿ ಮಹಾಸರಸ್ವತಿ ಎಂದು ನಂಬಿಕೆ.ಇಲ್ಲಿ ಮಾಂಗಲ್ಯ ಭಾಗ್ಯಕ್ಕಾಗಿ ತಾಳಿ ಹರಕೆ ರೂಪದಲ್ಲೂ,ಸಂತಾನ ಭಾಗ್ಯಕ್ಕಾಗಿ ತೊಟ್ಟಿಲ ಮಗುವನ್ನೂ ಅರ್ಪಿಸಲಾಗುತ್ತೆ.ಈ ಮಾತೆ ಚಂದ್ರಾಕೃತಿಯಲ್ಲಿ ಸಿಂಧೂರದ ರೂಪದಲ್ಲಿ ಹಣೆಯಲ್ಲಿ  ಇರಿಸಿಕೊಂಡಿದ್ದಾಳೆ ಅನ್ನೋದು ದೇವಿ ರೂಪವನ್ನು ನೋಡಿದಾಗ ತಿಳಿಯುತ್ತೆ.ಹಾಸನದ ಗ್ರಾಮ ದೇವತೆ ಎಂದು ಕರೆಯಲಾಗುವ ಮಂದಹಾಸವಿರುವ ದೇವತೆ ಪ್ರತೀಕವಾಗಿ ಹಾಸನ ಎಂಬ ಹೆಸರು ಬಂತೆದೂ ಉಲ್ಲೇಖವಿದೆ.ದೇವರಿಗೆ ನೀಡುವ ನೈವೇದ್ಯ ಜೊತೆಗೇ #ಮಾಧರ ನೈವ್ಯೆದ್ಯ ಎಂದು ಪ್ರತ್ಯೇಕವಾದ ಹೆಸರಿಂದ ಕರೆಯಲಾಗುವ ಮಹಾ ನೈವ್ಯೆದ್ಯ ಇಲ್ಲಿನ ವೈಶಿಷ್ಟ್ಯತೆ. ದೇವಾಲಯದ ಹೊರಗೆ #ಅತ್ತೆ_ಮನೆಯ_ಸೊಸೆ_ಕಲ್ಲು ಅಂತ ಒಂದು ಕಲ್ಲಿನ ಕತೆ ಇದೆ.ಆ ಸೊಸೆ ಕಲ್ಲನ್ನೂ ಕೂಡಾ ಭಕ್ತರು ದೇವಿ ಸ್ವರೂಪದಲ್ಲಿ ದರ್ಶನ ಮಾಡ್ತಾರೆ.ಹಿಂದೆ ಒಬ್ಬಾಕೆ ಹಾಸನಾಂಬೆ ಭಕ್ತೆ ಓರ್ವಳಿಗೆ ಅತ್ತೆ ಕಾಟ ಕೊಡ್ತಾ ಇರ್ತಾಳೆ.ತನ್ನ ಕಷ್ಟವನ್ನು ಯಾರಲ್ಲೂ ಹೇಳದ ಸೊಸೆ ತನ್ನ ಕಷ್ಟವನ್ನು ಮಾತೆಯ ಬಳಿ ಹೇಳಿಕೊಳ್ಳುತ್ತಾಳೆ.ಹೀಗೇ ಹೇಳ್ತಾ ಇರಬೇಕಾದರೆ ಒಂದು ದಿನ ಮಾತೆ ಒಲಿದು ನಿನ್ನ ಜೊತೆಗೆ ನಾನಿದ್ದೇನೆ. ಆದ್ರೆ ನೀನು ನನ್ನಲ್ಲಿ ಮಾತನಾಡುವ ವಿಷಯ, ಇಲ್ಲಿಗೆ ಬರುವ ವಿಷಯ ಯಾರಲ್ಲೂ ಹೇಳಬಾರದು ಎಂದು ನಿಬಂಧನೆ ವಿಧಿಸುತ್ತಾಳೆ.ಹೀಗೇ ಬಂದು ಹೋಗುವುದನ್ನು ಗಮನಿಸಿಕೊಂಡ ಅತ್ತೆಗೆ ಸೊಸೆಯ ಮೇಲೆ ಅನುಮಾನ ಬಂದು ಹಿಂಬಾಲಿಸಿಕೊಂಡು ಬರ್ತಾಳೆ. ಅತ್ತೆ ಸೊಸೆ ದೇವಿ ಜೊತೆಗೆ ಹೇಳುವುದು, ದೇವಿ ಸೊಸೆಯನ್ನು ಸಮಾಧಾನಪಡಿಸುವ ದೃಶ್ಯ ಅತ್ತೆ ನೋಡ್ತಾಳೆ. ಅತ್ತೆ ನೋಡುವ ವಿಚಾರ ದೇವಿಗೆ ತಿಳಿದು ದೇವಿ ತನ್ನ ಭಕ್ತೆಗೆ ಚಂದನದ ತಟ್ಟೆಯಿಂದ ಬಡಿದಳು.ನಂತರ ಶಾಂತಳಾದ ತಾಯಿ ತನ್ನ ಭಕ್ತೆಗೆ ನೀನು ದೇವಿ ರೂಪದಲ್ಲಿ ಇಲ್ಲಿ ನೆಲೆಸು ವರ್ಷಪ್ರತಿ ಒಂದು ಭತ್ತದ ಗಾತ್ರದಲ್ಲಿ ಮುಂದೆ ಚಲಿಸಬೇಕು. ಚಲಿಸಿ ನನ್ನ ಪಾದದ ಬಳಿಗೆ ನೀನು ಯಾವಾಗ ಸಮೀಪಿಸುತ್ತಿಯೋ ಅವಾಗ ಕಲಿಯುಗ ಅಂತ್ಯ ಎಂಬ ವಿಷಯ ಹೇಳ್ತಾಳೆ ಎನ್ನುವುದು ಹಿನ್ನಲೆ..!! ಇದು ಹಾಸನಾಂಬೆ ಕುರಿತಾದ ಚರಿತ್ರೆ... #ಮಣಿರಾಜ್_ಕಾಸರಗೋಡು