ಮಣಿಪಾಲ: ಇಯರ್ ಫೋನ್ ಹಾಕಿ ಮೊಬೈಲ್ ನೋಡುತ್ತಾ ಕುಳಿತಲ್ಲೇ ವ್ಯಕ್ತಿಯ ಅಕಾಲಿಕ ಸಾವು!

  • 20 Feb 2025 03:02:39 PM

ಮಣಿಪಾಲ: 49 ವರ್ಷದ ಗುರುಪ್ರಸಾದ್ ಎಂಬ ವ್ಯಕ್ತಿ ಅಕಾಲಿಕ ಮರಣ ಹೊಂದಿದ ಘಟನೆ ಪರ್ಕಳ ಗ್ಯಾಡ್ಸನ್‌ನಲ್ಲಿ ನಡೆದಿದೆ. ಈ ಘಟನೆಯು ಸ್ಥಳೀಯರಲ್ಲಿ ತೀವ್ರ ಆಘಾತವನ್ನು ಉಂಟು ಮಾಡಿದೆ. ರಾತ್ರಿ ಊಟ ಮುಗಿಸಿ ಮಲಗಲು ಹೋದ ಅವರು, ಬೆಡ್ ಮೇಲೆ ಕುಳಿತು ಇಯರ್‌ಫೋನ್ ಹಾಕಿಕೊಂಡು ಮೊಬೈಲ್ ನೋಡುತ್ತಿದ್ದರು. ಆ ಸಂದರ್ಭದಲ್ಲೇ ಕುಳಿತ ಸ್ಥಿತಿಯಲ್ಲೇ ಅವರು ಸಾವನ್ನಪ್ಪಿದ್ದಾರೆ ಎಂದೂ ತಿಳಿದು ಬಂದಿದೆ.

 

ಅಕಾಲಿಕ ಮರಣದ ಹಿಂದಿನ ಗುಟ್ಟೇನು?

 

ಹೃದಯಾಘಾತ ಅಥವಾ ಇನ್ನಿತರ ಆರೋಗ್ಯ ಸಮಸ್ಯೆಗಳಿಂದ ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ನಿಖರ ಕಾರಣ ತಿಳಿಯಲು ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

 

 

ಅನಿರೀಕ್ಷಿತ ಸಾವಿನಿಂದ ಅವರ ಕುಟುಂಬ ಅತೀವ ದುಃಖದಲ್ಲಿದ್ದಾರೆ. ಸ್ಥಳೀಯರು ಇದೇನು ಆಘಾತಕಾರೀ ಘಟನೆ ಎಂದು ಬೆಚ್ಚಿಬಿದ್ದಿದ್ದಾರೆ. ತಕ್ಷಣವೇ ಪ್ರಾಣ ಹೋಗುವಂತಹದ್ದು ಏನಾಯ್ತು?? ಇದರ ಹಿಂದೆ ಕೇವಲ ಆರೋಗ್ಯ ಸಮಸ್ಯೆ ಇರಬಹುದೇ ಎನ್ನುವುದರ ಬಗ್ಗೆ ಮಾಹಿತಿ ದೊರಕಲಿಲ್ಲ.