ಉಡುಪಿ: ಬೈಲಕೆರೆ ಎಂಬಲ್ಲಿ ಫೆ.19 ರಂದು 32 ವರ್ಷದ ಯುವಕ ಚಾವಣಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದ್ದು ಮೃತರನ್ನು ಬೈಲಕೆರೆಯ ರಾಮಕೃಷ್ಣ ದೇವಾಡಿಗ ಅವರ ಪುತ್ರ, ಸಂಗೀತ ಕಲಾವಿದ ಅಶ್ವಥ್ (32) ಎಂದು ಗುರುತಿಸಲಾಗಿದೆ.
ಆತ್ಮಹತ್ಯೆಗೆ ನಿಖರವಾದ ಕಾರಣ ಏನು ಎನ್ನುವುದು ಇನ್ನೂ ತಿಳಿದುಬಂದಿಲ್ಲ. ಈ ಘಟನೆಯ ಮಾಹಿತಿ ತಿಳಿದ ಕೂಡಲೇ ಸಮಾಜಸೇವಕರಾದ ನಿತ್ಯಾನಂದ ವೊಲಕಾಡ್ ಮತ್ತು ಸ್ಥಳೀಯ ಸುನೀಲ್ ಬೈಲಕೆರೆ ಅವರ ಸಹಾಯದಿಂದ ಅಶ್ವಥ್ ಅವರನ್ನು ನೇಣಿನಿಂದ ಕೆಳಗಿಳಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಪರೀಕ್ಷೆ ಬಳಿಕ ವೈದ್ಯರು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.
ಸ್ಥಳಕ್ಕೆ ಎಎಸ್‌ಐ ಸುಭಾಸ್ ಕಾಮತ್, ಹೆಡ್ ಕಾನ್‌ಸ್ಟೆಬಲ್ ಹರೀಶ್ ಮಾಲಾ ಹಾಗೂ ಟೌನ್ ಪೊಲೀಸ್ ಠಾಣೆಯ ಜಯಕರ್ ಭೇಟಿ ನೀಡಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.