ದೆಹಲಿಯ ನಾಲ್ಕನೇ ಮಹಿಳಾ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಭವ್ಯ ಪ್ರಮಾಣ ವಚನ ಸ್ವೀಕಾರ!

  • 20 Feb 2025 09:46:41 PM

ದೆಹಲಿ: ಭಾಜಪಾ ನಾಯಕಿ ರೇಖಾ ಗುಪ್ತಾ ಅವರು ದೆಹಲಿಯ 8 ನೆಯ ಮುಖ್ಯಮಂತ್ರಿಯಾಗಿ (4ನೆಯ ಮಹಿಳಾ ಮುಖ್ಯಮಂತ್ರಿ) ಇಂದು ಪ್ರಮಾಣವಚನ ಸ್ವೀಕರಿಸಿದರು. ರಾಮಲೀಲಾ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ದೆಹಲಿಯ ರಾಜ್ಯಪಾಲರ ಸಮ್ಮುಖದಲ್ಲಿ ರೇಖಾ ಗುಪ್ತ ಅವರು ಅಧಿಕಾರಕ್ಕೆ ಬಂದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಹಲವಾರು ಪ್ರಮುಖ ನಾಯಕರು ಉಪಸ್ಥಿತರಿದ್ದರು. 

 

ಪ್ರಥಮ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿರುವ ರೇಖಾ ಗುಪ್ತಾ, ಬಿಜೆಪಿಯ ಶಾಸಕಾಂಗ ಪಕ್ಷದ ಸಭೆಯಲ್ಲಿ ಒಮ್ಮತದಿಂದ ನಾಯಕಿಯಾಗಿ ಆಯ್ಕೆಗೊಂಡರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರೇಖಾ ಗುಪ್ತಾ ಅವರನ್ನು ಅಭಿನಂದಿಸಿ, ಅವರ ಆಡಳಿತ ದೆಹಲಿಯ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಹಾರೈಸಿದರು. 

 

ರೇಖಾ ಗುಪ್ತಾ ಅವರು ದೆಹಲಿಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮತ್ತು ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ಬಲವರ್ಧನೆಗೆ ಮಹತ್ವ ನೀಡಲಿದ್ದಾರೆ ಎಂದೂ ಜೊತೆಗೆ ಮಹಿಳಾ ಭದ್ರತೆ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುದರ ಕುರಿತಾಗಿ ಅವರ ವಿಶೇಷ ಒತ್ತು ನೀಡಲಿದ್ದಾರೆ.

 

ರೇಖಾ ಗುಪ್ತಾ ಅವರ ನೇತೃತ್ವದಲ್ಲಿ ದೆಹಲಿ ಹೊಸ ಆವೃತ್ತಿಯ ಅಭಿವೃದ್ಧಿ ದಿಕ್ಕನ್ನು ಕಾಣಲಿದೆ. ರಾಜಕೀಯವಾಗಿ ಇದು ಬಿಜೆಪಿ ಪಕ್ಷದ ದೃಢತೆಯನ್ನು ತೋರಿಸುವುದರೊಂದಿಗೆ ದೆಹಲಿಯ ಆಡಳಿತ ಪರಿಕಲ್ಪನೆಗೆ ಹೊಸ ಮಾರ್ಗಸೂಚಿಗಳನ್ನು ರೂಪಿಸಲಿದೆ.