ಮಂಗಳೂರು|ಶಾಲಾ ರಂಗೋತ್ಸವದಲ್ಲಿ ದೈವಾರಾಧನೆ..! ಸಿಡಿದೆದ್ದ ಶಾಸಕ ವೇದವ್ಯಾಸ್ ಕಾಮತ್..!

  • 21 Feb 2025 10:55:11 PM

ಮಂಗಳೂರು: ತುಳುನಾಡಿನಲ್ಲಿ ದೈವಾರಾಧನೆಗೆ ವಿಶೇಷವಾದ ಪ್ರಾಶಸ್ತ್ಯವಿದೆ. ನಂಬಿಕೆಯಿದೆ. ಆದರೆ ಕಾಂತಾರ ಚಿತ್ರದ ಬಳಿಕ ಇದೊಂದು ಮನರಂಜನೆಯ ಭಾಗವಾಗಿ ಬಿಟ್ಟಿದೆ. ಈಗಾಗಲೇ ದೈವಾರಾಧನೆಯ ಬಗ್ಗೆ ಅನೇಕ ವಿಮರ್ಶೆಗಳು, ಟೀಕೆಗಳು, ಅಭಿಪ್ರಾಯಗಳು ವ್ಯಕ್ತವಾಗಿದೆ. ಇದೀಗ ಮಂಗಳೂರಿನಲ್ಲಿ ನಡೆದ ಘಟನೆಯೊಂದು ಕರಾವಳಿಗರನ್ನೇ ಆಕ್ರೋಶಭರಿತರನ್ನಾಗಿ ಮಾಡಿದೆ.

 

ಶಾಲೆಯ ಮನರಂಜನೆ ಕಾರ್ಯಕ್ರಮದಲ್ಲಿ ದೈವಾರಾಧನೆ ಎಷ್ಟು ಸರಿ..??

 

ರಾಜ್ಯ ಕಾಂಗ್ರೆಸ್ ಸರ್ಕಾರದ ಶಾಲೆಗಳಲ್ಲಿ ರಂಗೋತ್ಸವ ಎಂಬ ಮನರಂಜನಾ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಆದರೆ ಇರದರಲ್ಲಿ ಭೂತಾರಾಧನೆಯನ್ನು ಕೂಡಾ ಸೇರಿಸಿರುವುದು ಖಂಡನೀಯ. ಇದು ತಪ್ಪಲ್ಲವೇ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದ ವಿಭಿನ್ನ ಕಲೆ ಸಂಸ್ಕೃತಿಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಶಾಲೆಗಳಲ್ಲಿ ರಂಗೋತ್ಸವ ಎಂಬ ಮನರಂಜನಾ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತಂದಿದೆ. ಇದರಲ್ಲಿ ಬೊಂವೆಯಾಟ, ಕೋಲಾಟ ಎಲ್ಲವೂ ಸೇರಿದೆ. ಇದರ ಜೊತೆಗೆ ದೈವಾರಾಧನೆಯನ್ನು ಸೇರಿಸಿರುವುದೂ ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.

 

ಈ ಬಗ್ಗೆ ಶಾಸಕರು ಹೇಳೋದೇನು..?

 

ಸಾವಿರಾರು ವರ್ಷಗಳಿಂದ ತುಳುನಾಡಿನ ಶ್ರದ್ಧಾ ಭಕ್ತಿಯ ಇತಿಹಾಸವನ್ನು ಹೊಂದಿರುವ ದೈವಾರಾಧನೆ ಮನರಂಜನೆಯ ಭಾಗವಂತೂ ಅಲ್ಲವೇ ಅಲ್ಲ. ಅದೊಂದು ಧಾರ್ಮಿಕ ಆಚರಣೆ. ಮಕ್ಕಳಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು, ಪ್ರತಿಭೆಯನ್ನು ಅನಾವರಣಗೊಳಿಸಲು ಮೋಜು ಮಸ್ತಿಗಳಿಂದ ಕೂಡಿದ ಇಂತಹ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ನಮ್ಮ ವಿರೋಧವಿಲ್ಲ. ದೈವಗಳು ವೇದಿಕೆಯ ಮೇಲೆ ನರ್ತನ ಮಾಡಿ ತೋರಿಸುವ ವಸ್ತುವಲ್ಲ ಎಂಬ ಕನಿಷ್ಠ ಜ್ಞಾನವೂ ಕಾಂಗ್ರೆಸ್ ಸರ್ಕಾರಕ್ಕೆ ಇಲ್ವಾ..? ಇದು ಬೇಜಾವಬ್ದಾರಿ ನಡೆಯಾಗಿದ್ದು ಇದನ್ನು ದೈವಾರಾಧಕರು ಕೂಡಾ ಖಂಡಿಸುತ್ತಾರೆ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಹೇಳಿದ್ದಾರೆ.