ಕಂಬಂ: ಮದುವೆ ಅನ್ನೋದು ಹೆಣ್ಮಕ್ಕಳ ಜೀವನದಲ್ಲಿ ಮಹತ್ತರವಾದ ಘಟ್ಟ. ಅನೇಕ ಆಸೆ- ಆಕಾಂಕ್ಷೆಗಳನ್ನು ಇಟ್ಟುಕೊಂಡು ಹೊಸ ಬದುಕಿಗೆ ಹೆಜ್ಜೆಯಿಡುತ್ತಾಳೆ. ಆದರೆ ಕೆಲವೊಮ್ಮೆ ಆಕೆಯ ಬದುಕಿನಲ್ಲಿ ಅನಿರೀಕ್ಷಿತ ಘಟ್ಟಗಳನ್ನು ನೋಡುತ್ತಾಳೆ. ಅದ್ಯಾಕೋ ಏನೋ ಆತುರಪಟ್ಟು ಕೆಲವೊಮ್ಮೆ ದುಡುಕಿನ ನಿರ್ಧಾರ ತೆಗೆದುಕೊಂಡು ಬದುಕನ್ನೇ ಅಂತ್ಯವಾಗಿಸಿಕೊಳ್ಳುತ್ತಾಳೆ. ಅಂತಹುದೇ ಒಂದು ಘಟನೆ ಇದೀಗ ಕಂಬಂನಲ್ಲಿ ನಡೆದಿದೆ.
ಮದುವೆಯಾದ ಮರುದಿನವೇ ನೇಣಿಗೆ ಕೊರಳೊಡ್ಡಿದ ವಿವಾಹಿತೆ..!
ಮದುವೆಯಾದ ಮರುದಿನವೇ ನವವಿವಾಹಿತೆಯೋರ್ವಳು ಆತ್ಮಹತ್ಯೆಗೆ ಶರಣಾದ ಘಟನೆ ಕಂಬಂ ಮಂಡಲದ ದೇವನಗರಂ ಗ್ರಾಮದಲ್ಲಿ ನಡೆದಿದೆ. ಸುಶ್ಮಿತಾ ಜೀವಾಂತ್ಯಗೊಳಿಸಿದ ಯುವತಿ. ಇವರು ಫೆ.ಹದಿನಾರರಂದು ವೆಂಕಟೇಶ್ ಎಂಬವರನ್ನು ವಿವಾಹವಾಗಿದ್ದಾರೆ. ಆ ಬಳಿಕ ಎಲ್ಲಾ ಸಮಾರಂಭವೂ ಸುಸೂತ್ರವಾಗಿ ನಡೆದಿದೆ. ಎಲ್ಲವೂ ಚೆನ್ನಾಗಿರುವಾಗಲೇ ಸುಶ್ಮಿತಾ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಇಷ್ಟವಿಲ್ಲದಿದ್ದರೂ ನಡೆದ ಮದುವೆಗೆ ಬೇಸರಪಟ್ಟು ಜೀವಾಂತ್ಯ...!!
ಸುಶ್ಮಿತಾ ಅವರಿಗೆ ಈ ಮದುವೆ ಇಷ್ಟವಿರಲಿಲ್ಲ..ಆದರೂ ಒತ್ತಾಯಪೂರ್ವಕವಾಗಿ ಈ ಮದುವೆ ಮಾಡಿದಕ್ಕೆ ಬೇಸತ್ತು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.