ಮ್ಯಾಟ್ರಿಮೊನಿಯಲ್ಲಿ ಪರಿಚಯ, 15ಕ್ಕೂ ಹೆಚ್ಚು ಮಹಿಳೆಯರ ಮೇಲೆ ರೇಪ್...26 ವರ್ಷದ ಕಾಮುಕ ಅರೆಸ್ಟ್...!

  • 22 Feb 2025 04:11:18 PM


ಮಹಾರಾಷ್ಟ್ರ:ಈಗಿನ ಹುಡುಗರಿಗೆ, ಅಂಕಲ್ ಗಳಿಗೆ ಅದೇನು ಕಾಮತೃಷೆಯೋ. ಸಾಮಾಜಿಕ ಜಾಲತಾಣದ ಪ್ರಭಾವವೋ, ಮಾನಸಿಕ ಅಸ್ವಸ್ಥತೆಯೋ ಗೊತ್ತಿಲ್ಲ. ಪ್ರತಿನಿತ್ಯ ಇಂತಹ ಒಂದಲ್ಲ ಒಂದು ಘಟನೆಯನ್ನು ನಾವು ಮಾಧ್ಯಮಗಳಲ್ಲಿ ನೋಡುತ್ತಿರುತ್ತೇವೆ. ಇಲ್ಲೊಬ್ಬ ಕಾಮದಾಹಿ ಯುವಕ ಬರೋಬ್ಬರಿ ಹದಿನೈದಕ್ಕೂ ಹೆಚ್ಚು ಮಹಿಳೆಯರ ಮೇಲೆರಗಿ ತನ್ನ ತೃಷೆಯನ್ನು ತೀರಿಸಿಕೊಂಡಿದ್ದಾನೆ.

 

ಮ್ಯಾಟ್ರಿಮೊನಿ ವೆಬ್ಸೈಟ್ ನ್ನು ತನ್ನ ತೃಷೆಗೆ ಬಳಸಿಕೊಂಡ ಕಾಮುಕ...!

 

ಮ್ಯಾಟ್ರಿನೊನಿ ಮ್ಯಾರೇಜ್ ವೆಬ್ಸೈಟ್ ಗಳಲ್ಲಿ ಪರಿಚಯವಾದ ಹದಿನೈದಕ್ಕೂ ಹೆಚ್ಚು ಮಹಿಳೆಯರನ್ನು ಮದುವೆಯಾಗುವುದಾಗಿ ನಂಬಿಸಿ ಅವರ ಮೇಲೆ ಅತ್ಯಾಚಾರ ಎಸಗಿದ ಯುವಕನೋರ್ವನನ್ನು ಮಹಾರಾಷ್ಟ್ರದ ಪೊಲೀಸರು ಬಂಧಿಸಿದ್ದಾರೆ‌. ಇಪ್ಪತ್ತಾರು ವರ್ಷದ ಗುಜರಾತ್ ಮೂಲದ ಹಿಮಾಂಶು ಯೋಗೇಶ್ ಭಾಯ್ ಪಂಚಾಲ್ ಎಂಬಾತ ಬಂಧಿತ ಆರೋಪಿ. ಆರೋಪಿ ಫೇಕ್ ಐಡಿ ಕ್ರಿಯೇಟ್ ಮಾಡಿ ತನ್ನನ್ನು ದೆಹಲಿ ಕ್ರೈಂ ಬ್ರ್ಯಾಂಚ್ ನ ಸೈಬರ್ ಸೆಕ್ಯುರಿಟಿ ವಿಭಾಗದ ಅಧಿಕಾರಿಯೆಂದು ಹೇಳಿಕೊಂಡಿದ್ದ. ಅಲ್ಲದೆ ತಾನು ಶ್ರೀಮಂತ ಕುಟುಂಬದ ಯುವಕನಂತೆ ನಾಟಕವಾಡಿದ್ದ. ಈತ ಮದ್ವೆಯಾಗುವ ಆಸೆಯೊಡ್ಡಿ ನಕಲಿ ವಜ್ರದ ಆಭರಣಗಳನ್ನು ನೀಡುತ್ತಿದ್ದ. ಮೊದಲ ಭೇಟಿಯಲ್ಲೇ ದೈಹಿಕ ಸಂಪರ್ಕ ಮಾಡುವಂತೆ ಒತ್ತಾಯಿಸುತ್ತಿದ್ದ. ನಂತರ ಹಣಕ್ಕಾಗಿ ಡಿಮ್ಯಾಂಡ್ ಮಾಡಿ ಲೈಂಗಿಕವಾಗಿ ಮತ್ತು ಆರ್ಥಿಕವಾಗಿ ತೊಂದರೆ ಕೊಟ್ಟ ಮೇಲೆ ಅವರ ಜೊತೆಗಿನ ಸಂಪರ್ಕವನ್ನೇ ನಿಲ್ಲಿಸುತ್ತಿದ್ದ.

 

ಇಂಗ್ಲೀಷ್ ನಲ್ಲಿ ಮಾತನಾಡಿಯೇ ಮಹಿಳೆಯರನ್ನು ಬುಟ್ಟಿಗೆ ಬೀಳಿಸುತ್ತಿದ್ದ ಖತರ್ನಾಕ್ ಖದೀಮ..!

 

ಈತ ಉತ್ತಮ ಇಂಗ್ಲೀಷ್ ಭಾಷೆ ಮಾತಾಡುತ್ತಿದ್ದ. ಮತ್ತು ಮಹಿಳೆಯರನ್ನು ಆಕರ್ಷಿಸುವುದರಲ್ಲಿ ಬಲು ನಿಪುಣನಾಗಿದ್ದ. ಇವನ ಬಳಿ ಐದು ಫೋನ್ ಗಳು ಮತ್ತು ಆ್ಯಪಲ್ ಲ್ಯಾಪ್‌ಟಾಪ್ ಗಳು ಇದ್ದವು. ಹೋಟೆಲ್ ವೈಫೈಗಳನ್ನು ಈತ ಹೆಚ್ಚು ಬಳಸುತ್ತಿದ್ದ.‌ಆದ್ದರಿಂದ ಈತನನ್ನು ಹುಡುಕಿ ಬಂಧಿಸಲು ಸುಲಭವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.