ಯುವತಿ ಜೊತೆ ಪಾಲಿಕೆ ಆಯುಕ್ತನ ರಾಸಲೀಲೆ..!! ಪತ್ನಿಯಿಂದ ಬಿತ್ತು ಧರ್ಮದೇಟು..!

  • 23 Feb 2025 09:40:28 AM


ವಾರಸಿಗುಡ: ಇತ್ತೀಚಿನ ದಿನಗಳಲ್ಲಿ ಸಮಾಜ ಹಾಳಾಗುತ್ತಿದೆ. ಮಾನವೀಯ ಮೌಲ್ಯಗಳು ಕುಸಿಯುತ್ತಿದೆ, ಸಂಬಂಧಗಳು ಬೆಲೆ ಕಳೆದುಕೊಳ್ಳುತ್ತಿದೆ.‌ ಅಕ್ರಮ ಸಂಬಂಧ, ಅತ್ಯಾಚಾರದಂತಹ ಪ್ರಕರಣಗಳು ಎಲ್ಲೆ ಮೀರಿ ಹೋಗುತ್ತಿದೆ. 

 

ಯುವತಿ ಜೊತೆ ಚಕ್ಕಂದ, ರೆಡ್ ಹ್ಯಾಂಡ್ ಆಗಿ ಹಿಡಿದ ಪತ್ನಿ..!!

 

ತನ್ನದೇ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇಪ್ಪತ್ತು ವರ್ಷದ ಯುವತಿಯೊಂದಿಗೆ ಅಕ್ರಮ ಸಂಬಂಧದಲ್ಲಿದ್ದ ಜಂಟಿ ಆಯುಕ್ತನೋರ್ವನನ್ನು ಅವನ ಪತ್ನಿಯೇ ರೆಡ್ ಹ್ಯಾಂಡ್ ಆಗಿ ಹಿಡಿದು ಧರ್ಮದೇಟು ನೀಡಿರುವ ಘಟನೆ ವರಸಿಗುಡದಲ್ಲಿ ನಡೆದಿದೆ. ಜಾನಕಿರಾಮ್ ಎಂಬ ಸರ್ಕಾರಿ ಅಧಿಕಾರಿಯೇ ಆ ಚಪಲ ಚೆನ್ನಿಗರಾಯ. ಈತನ ಅಕ್ರಮ ಸಂಬಂಧದ ಬಗ್ಗೆ ಆತನ ಪತ್ನಿ ಮತ್ತು ಕುಟುಂಬಸ್ಥರು ಆರೋಪಿಸಿದ್ದು ಇಬ್ಬರನ್ನೂ ಹಿಡಿದು ಥಳಿಸಲಾಗಿದೆ. 

 

ಪತಿಯನ್ನು ಹಿಂಬಾಲಿಸಿದಾಗ ಕಾದಿತ್ತು ಶಾಕ್, ಗ್ರಹಚಾರ ಬಿಡಿಸಿ ಕಾಳಿಯಾದ ಪತ್ನಿ...!!

 

ವಾರಸಿಗುಡದಲ್ಲಿ ಜಾನಕಿರಾಮ್ ಕಳೆದ ಕೆಲವು ದಿನಗಳಿಂದ ಅಕ್ರಮ ಸಂಬಂಧ ಹೊಂದಿದ್ದ ಎಂದು ಹೇಳಲಾಗುತ್ತಿದ್ದು ಕೆಲವು ದಿನಗಳಿಂದ ಆತ ಮನೆಗೆ ಕೂಡಾ ಬರುತ್ತಿರಲಿಲ್ಲ. ಆತನ ಮೇಲೆ ಒಂದು ಕಣ್ಣಿಟ್ಟಿದ್ದಳು ಪತ್ನಿ. ಸರಿಯಾದ ಸಂದರ್ಭ ಬಂದಾಗ ಆತನಿದ್ದ ಜಾಗಕ್ಕೆ ತೆರಳಿ ಸರಿಯಾಗಿ ಗ್ರಹಚಾರ ಬಿಡಿಸಿದ್ದಾಳೆ. ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಘಟನೆಯ ವೀಡಿಯೋ ಫುಲ್ ವೈರಲ್ ಆಗುತ್ತಿದೆ.