ಮಗುವಿಗೆ ಜನ್ಮವಿತ್ತ ಹೈಸ್ಕೂಲು ವಿದ್ಯಾರ್ಥಿನಿ..! ಮಗುವಿನ ತಂದೆ ಹತ್ತನೇ ಕ್ಲಾಸ್ ಬಾಲಕ...!!

  • 23 Feb 2025 05:21:00 PM


ರಾಜಸ್ಥಾನ: ಇದೆಂಥಾ ಕಾಲ ಬಂತಪ್ಪಾ..!! ಶಾಲೆಗೆ ಹೋಗುವ ವಯಸ್ಸಿನಲ್ಲಿ ಮಕ್ಕಳು ಸಂಪೂರ್ಣವಾಗಿ ವಿದ್ಯಾಭ್ಯಾಸದ ಕಡೆ ಗಮನಕೊಡಬೇಕು. ಮಕ್ಕಳು ಸನ್ನಡತೆಯನ್ನು ಅಳವಡಿಸಿಕೊಂಡು ಉತ್ತಮ ದಾರಿಯಲ್ಲಿ ನಡೆಯುತ್ತಿದ್ದಾರೋ ಇಲ್ಲವೋ ಎಂದು ಸೂಕ್ಷ್ಮವಾಗಿ ಗಮನಿಸಿ ಅವರ ಜವಾಬ್ದಾರಿ ತೆಗೆದುಕೊಳ್ಳುವುದು ಕೂಡಾ ಪೋಷಕರ ಜವಾಬ್ದಾರಿ.

 

ಆದರೆ ಈಗಿನ ಮಕ್ಕಳು ಹೈಪರ್ ಮೆಚ್ಯುರಿಟಿಯಿಂದ ತಮ್ಮ ಸುಂದರ ಭವಿಷ್ಯಕ್ಕೆ ಕೊಳ್ಳಿಯಿಡುತ್ತಿದ್ದಾರೆ. ತಮ್ಮ ಬದುಕಿನ ದಿಕ್ಕನ್ನೇ ಬದಲಾಯಿಸಿಕೊಳ್ಳುತ್ತಾ ಅನಾವಶ್ಯಕ ವಿಚಾರಗಳಿಗೆ ಗಮನಕೊಡುತ್ತಿದ್ದಾರೆ. ಇದೀಗ ಎಲ್ಲರೂ ಆಶ್ಚರ್ಯಪಡುವ ಸಂಗತಿಯೊಂದು ಬೆಳಕಿಗೆ ಬಂದಿದೆ. ಈ ಘಟನೆ ಕೇಳಿ ನೀವೂ ಅವಕ್ಕಾಗಬಹುದು. 

 

ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಬಾಲಕಿ...!!

 

ಅಪ್ರಾಪ್ತೆಯೋರ್ವಳು ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ಅಪರೂಪದ ಘಟನೆ ರಾಜಾಸ್ಥಾನದ ಬಾರಾ ಎಂಬಲ್ಲಿ ನಡೆದಿದೆ. ಈಕೆಯ ಗರ್ಭಾಧಾರಣೆಗೆ ಅವಳದ್ದೇ ಶಾಲೆಯಲ್ಲಿ ಓದುತ್ತಿರುವ ಹತ್ತನೇ ತರಗತಿ ವಿದ್ಯಾರ್ಥಿಯೇ ಕಾರಣ ಎಂದು ತಿಳಿದುಬಂದಿದೆ. ಅಪ್ರಾಪ್ತ ಬಾಲಕಿಯ ಮೇಲೆ ಈತ ಅತ್ಯಾಚಾರ ನಡೆಸಿದ್ದಾನೆ. ಸಂತ್ರಸ್ತೆಯ ದೂರನ್ನು ಆಧರಿಸಿ ಆ ಬಾಲಕನ ಮೇಲೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮಾಡುತ್ತಿದ್ದಾರೆ. 

 

ಬಾಲಕಿ ಗರ್ಭಿಣಿಯಾಗಿರುವ ವಿಚಾರ ತಂದೆಯ ಗಮನಕ್ಕೆ ಬಂದಿಲ್ಲ...!!

 

ಕೆಲವು ತಿಂಗಳುಗಳಿಂದ ಇವರ ನಡುವೆ ಪ್ರೀತಿಯಿದ್ದು ಪರಸ್ಪರ ಪ್ರೀತಿಸುತ್ತಿದ್ದರು. ಬಾಲಕಿ ತಾಯಿಯು ತೀರಿಕೊಂಡಿದ್ದು ಅವಳ ತಂದೆ ಕೆಲಸದಲ್ಲಿ ನಿರತರಾಗಿದ್ದಾರೆ. ಇದರಿಂದಾಗಿ ಆಕೆ ಗರ್ಭಿಣಿ ಆಗಿರುವ ವಿಷಯ ಕೂಡಾ ಅವರಿಗೆ ಗೊತ್ತಾಗಲಿಲ್ಲ. ಬಾಲಕಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಆಸ್ಪತ್ರೆಯಲ್ಲಿ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ‌. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಅಪ್ರಾಪ್ತನ ಮೇಲೆ ಪೋಕ್ಸೋ ಕೇಸ್ ದಾಖಲಿಸಿದ್ದಾರೆ.