ಬ್ರಹ್ಮಾವರ: ಆಶ್ರಯ ಹೋಟೆಲ್ ನ ಮುಂಭಾಗದಲ್ಲಿ ಭೀಕರ ವಾಹನಾ ಅಪಘಾತ ಸಂಭವಿಸಿದೆ. ಉಡುಪಿಯಿಂದ ಬ್ರಹ್ಮಾವರ ಕಡೆಗೆ ಸಾಗುತ್ತಿದ್ದ ಒಮಿನಿ ಕಾರು ಎಂಜಿ ಕಾರಿಗೆ ಢಿಕ್ಕಿ ಹೊಡೆದ ರಭಸಕ್ಕೆ ಓಮಿನಿ ಕಾರ್ ಎರಡು ಪಲ್ಟಿ ಆಗಿ ನುಜ್ಜುಗುಜ್ಜಾಗಿದೆ. ಎಂಜಿ ಕಾರಿನ ಏರ್ ಬ್ಯಾಗ್ ತೆರೆದುಕೊಂಡಿದೆ.
ಅಪಘಾತದ ಸಂದರ್ಭದಲ್ಲಿ ಓಮಿನಿ ಕಾರಿನಲ್ಲಿ ಹನ್ನೆರಡು ಮಂದಿ ಪ್ರಯಾಣಿಸುತ್ತಿದ್ದು ಈ ಘಟನೆಯಿಂದ ಅದರಲ್ಲಿದ್ದ ಓರ್ವ ಪ್ರಯಾಣಿಕನಿಗೆ ತೀವ್ರ ಗಾಯವಾಗಿದ್ದು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಅದರಲ್ಲಿ ಪ್ರಯಾಣಿಸುತ್ತಿದ್ದ ಇತರ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.
ಅಪಘಾತದ ಬಳಿಕ ಕೆಲಕಾಲ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಯಿತು ಕೂಡಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಪಘಾತದ ನಿಖರ ಕಾರಣ ತಿಳಿದುಕೊಳ್ಳಲು ತನಿಖೆಯನ್ನು ಮುಂದುವರಿಸಿದ್ದಾರೆ. ಸಾರ್ವಜನಿಕರು ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾದುದು ಅತಿ ಅಗತ್ಯ ಎಂದು ಪೊಲೀಸರೂ ಮನವಿ ಮಾಡಿದ್ದಾರೆ.