ಶಸ್ತ್ರ ಚಿಕಿತ್ಸೆಯಲ್ಲಿ ಭಾರೀ ಎಡವಟ್ಟು: ಹೆರಿಗೆಯ ಬಳಿಕ ಬಾಣಂತಿಯ ಹೊಟ್ಟೆಯಲ್ಲಿ ಉಳಿದ ಸರ್ಜಿಕಲ್ ಬಟ್ಟೆ!

  • 24 Feb 2025 07:31:37 PM


ಪುತ್ತೂರು : ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ಹೆರಿಗೆಯ ಶಸ್ತ್ರ ಚಿಕಿತ್ಸೆಯ ನಂತರ ಬಾಣಂತಿಯೋರ್ವಳು 20 ದಿನಗಳ ಕಾಲ ಜೀವ ಮರಣ ಹೋರಾಟ ನಡೆಸ ಬೇಕಾಯಿತು. ಶರಣ್ಯ ಲಕ್ಷ್ಮೀ ಎಂಬ ಆಕೆ ನವೆಂಬರ್ 27ರಂದು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಿಕೊಂಡಿದ್ದರು. ಡಿಸೆಂಬರ್ 2 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಅವರ ಆರೋಗ್ಯ ಹದಗೆಡಲು ಆರಂಭವಾಯಿತು. ವೈದ್ಯರು ಜ್ವರಕ್ಕೆ ಮಾತ್ರೆ ನೀಡಿದರೂ ಸಮಸ್ಯೆ ಕಡಿಮೆಯಾಗದೆ ಬಂದಲ್ಲಿ ಪರಿಸ್ಥಿತಿ ಗಂಭೀರವಾದ ನಂತರ ಕುಟುಂಬದವರು ಮಂಗಳೂರಿನ ವೈದ್ಯರನ್ನು ಸಂಪರ್ಕಿಸಿದರು.

 

 ಸ್ಕ್ಯಾನಿಂಗ್ ಮೂಲಕ ಹೊಟ್ಟೆ ಒಳಗೆ ಮಾರ್ಚ್ ಫಾರ್ಮೇಶನ್ ಆಗಿರುವುದು ಕಂಡುಬಂದಿತು. ಹೆಚ್ಚಿನ ತಪಾಸಣೆಯಿಂದ ಶಸ್ತ್ರ ಚಿಕಿತ್ಸೆಯ ವೇಳೆಯಲ್ಲಿ ವೈದ್ಯರು ಹೊಟ್ಟೆಯಲ್ಲಿ ಸರ್ಜಿಕಲ್ ಬಟ್ಟೆ ಮರೆತು ಬಿಟ್ಟಿದ್ದಾರೆ ಎಂಬುದಾಗಿ ಪತ್ತೆಹಚ್ಚಿದರು. ತಕ್ಷಣವೇ ಮತ್ತೊಂದು ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿ ಆ ವಸ್ತುವನ್ನು ಹೊರ ತೆಗೆಯಲಾಯಿತು.

 

ಈ ಗಂಭೀರ ನಿರ್ಲಕ್ಷ್ಯ ವೈದ್ಯಕೀಯ ದೋಷಕ್ಕೆ ಬಾಣಂತಿಯ ಪತಿ ಗಗನ್ ದೀಪ್ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವೈದ್ಯ ಡಾ. ಅನಿಲ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.