ಪುತ್ತಿಲ ಪರಿವಾರದ ಮನೀಶ್ ಕುಲಾಲ್ ವಿರುದ್ಧ ದಿನೇಶ್ ಪಂಜಿಗ ನ್ಯಾಯಾಲಯದ ಮೂಲಕ ದಾಖಲಿಸಿದ್ದ ಪ್ರಕರಣಕ್ಕೆ ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯ ತಡೆಯಾಜ್ಞೆ ನೀಡಿದೆ
2023ರ ನವೆಂಬರ್ ತಿಂಗಳಿನಲ್ಲಿ ಮುಕ್ರುಂಪಾಡಿಯಲ್ಲಿರುವ ಪುತ್ತಿಲ ಪರಿವಾರ ಕಚೇರಿ ಬಳಿಗೆ ಬಂದು ತಲುವಾರು ತೋರಿಸಿ ಹಿಂದೂ ಜಾಗರಣ ವೇದಿಕೆಯ ಮುಖಂಡ ದಿನೇಶ್ ಪಂಜಿಗ ಮತ್ತು ಇತರರು ಮನೀಶ್ ಕುಲಾಲ್ ಗೆ ಜೀವ ಬೆದರಿಕೆ ಹಾಕಿದ್ದರು.
ಈ ಪ್ರಕರಣದಲ್ಲಿ ದಿನೇಶ್ ಪಂಜಿಗ ಮತ್ತಿತರರು ಬಂಧನಕ್ಕೊಳಕ್ಕಾಗಿದ್ದರು. ಬಳಿಕ ಕೆಲವು ದಿನಗಳ ಬಳಿಕ ಜಾಮೀನಿನಲ್ಲಿ ಬಿಡುಗಡೆಯಾಗಿದ್ದರು.
ಜೈಲಿನಿಂದ ಬಿಡುಗಡೆಯಾಗಿ ಬಂದ ನಂತರ ಮನೀಶ್ ಕುಲಾಲ್ ಸಾಮಾಜಿಕ ಜಾಲತಾಣದಲ್ಲಿ ಈ ಹಿಂದೆ ನಮಗೆ ಬೆದರಿಕೆ ಒಡ್ಡಿದ್ದಾರೆ ಎಂದು ದಿನೇಶ್ ಪಂಜಿಗ ಎಂಬವರು ಪುತ್ತೂರು ನಗರ ಠಾಣೆಯಲ್ಲಿ ದೂರು ನೀಡಿದ್ದರು ಇದು ಅಸಂಜ್ಞೇಯ ಅಪರಾಧವಾಗಿದ್ದು ನ್ಯಾಯಾಲಯದ ಅನುಮತಿ ಪಡೆಯುವಂತೆ ಪೋಲೀಸರು ಹಿಂಬರಹ ನೀಡಿದ್ದರು ಅದಾದ ಬಳಿಕ ದಿನೇಶ್ ಪಂಜಿಗ ಎಂಬವರು ನ್ಯಾಯಾಲಯದ ಮೊರೆ ಹೋಗಿದ್ದರು ಆ ಬಳಿಕ ಮನೀಶ್ ಕುಲಾಲ್ ವಿರುದ್ದ ಎಫ್ ಐ ಆರ್ ದಾಖಲಾಗಿತ್ತು
ಮನೀಶ್ ಕುಲಾಲ್ ಪರ ಹೈಕೋರ್ಟ್ ನ ಖ್ಯಾತ ವಕೀಲರಾದ ರಾಜರಾಮ್ ಸೂರ್ಯಂಬೈಲು ಇವರು ಸುಧೀರ್ಘವಾದ ವಾದ ಮಂಡಿಸಿದರು ವಾದವನ್ನು ಆಲಿಸಿದ ಉಚ್ಛ ನ್ಯಾಯಾಲಯ ಮನೀಶ್ ಕುಲಾಲ್ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ತಡೆಯಾಜ್ಞೆ ನೀಡಿದೆ.
ಹೈಕೋರ್ಟ್ ವಕೀಲರಾದ ರಾಜಾರಾಮ್ ಸೂರ್ಯಂಬೈಲು