ಬೆಳ್ತಂಗಡಿ| ಧರ್ಮದರ್ಶಿಯಿಂದ ದೈವಕ್ಕೆ ಅವಮಾನ..! ಆರಿಕೋಡಿ ಧರ್ಮದರ್ಶಿ ವಿರುದ್ಧ ಸಿಡಿದೆದ್ದ ದೈವಾರಾಧಕ ತಮ್ಮಣ್ಣ ಶೆಟ್ಟಿ..!

  • 25 Feb 2025 02:35:48 PM


ಬೆಳ್ತಂಗಡಿ :ಕರಾವಳಿ ಅಂದ್ರೆ ದೈವ-ದೇವರುಗಳು ನೆಲೆಯಾದ ಪುಣ್ಯದ ತವರೂರು. ಇಲ್ಲಿ ದೈವಾರಾಧನೆಗೆ ವಿಶೇಷವಾದ ಪ್ರಾಶಸ್ತ್ಯವಿದೆ. ತನ್ನದೇ ಕಾರ್ಣಿಕ ಶಕ್ತಿಯಿಂದ ಅನೇಕ ಭಕ್ತರನ್ನು ಕೆಲವೊಂದು ಕ್ಷೇತ್ರ ತನ್ನತ್ತ ಸೆಳೆಯುತ್ತದೆ. ಇದೀಗ ಅಂತಹುದೇ ಕ್ಷೇತ್ರದಲ್ಲಿ ದೈವಕ್ಕೆ ಅಪಮಾನ ಆಗಿರುವುದರ ಬಗ್ಗೆ ವಿವಾದ ಸೃಷ್ಠಿಯಾಗಿದೆ. 

 

ಅರಿಕೋಡಿ ಕ್ಷೇತ್ರದಲ್ಲಿ ದೈವಕ್ಕೆ ಅಪಮಾನ..!??

 

ಬೆಳ್ತಂಗಡಿಯ ಅರಿಕೋಡಿ ಕ್ಷೇತ್ರ ಅನೇಕ ಭಕ್ತಾದಿಗಳ ನಂಬಿಕೆಯ ಮತ್ತು ಕಾರ್ಣಿಕದ ಕ್ಷೇತ್ರವಾಗಿ ಕರಾವಳಿಯಲ್ಲಿ ಪ್ರಖ್ಯಾತಿಯನ್ನು ಗಳಿಸಿದೆ. ಬೆಳ್ತಂಗಡಿಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆದ ಚಾಮುಂಡಿ-ಗುಳಿಗ ದೈವಗಳ ಕೋಲ ಹಾಗೂ ದೈವದ ಭಂಡಾರ ಬರುವ ದೃಶ್ಯ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ದೈವಾರಾಧಕ ತಮ್ಮಣ್ಣ ಶೆಟ್ಟಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುಳುನಾಡಿನ ದೈವಾರಾಧನೆಗೆ ಅದರದ್ದೇ ಆದ ಮೂಲ ನಿಯಮಗಳಿವೆ. ಆದರೆ ಇತ್ತೀಚಿಗೆ ಇಂತಹ ಆಡಂಬರದ ಆರಾಧನೆಯನ್ನು ದೈವಾರಾಧಕರು ತೀವ್ರವಾಗಿ ಖಂಡಿಸಿದ್ದಾರೆ. 

 

ಈ ಬಗ್ಗೆ ತಮ್ಮಣ್ಣ ಶೆಟ್ಟಿ ಹೇಳೋದ್ದೇನು..?

 

ದುಡ್ಡು ಮಾಡುವ ದಂಧೆಗಾಗಿ ನಾಟಕದ, ಯಕ್ಷಗಾನದ ವೇಷಧಾರಿಗಳಂತೆ ವೇಷ ಹಾಕಿಸೋದು ತಪ್ಪು. ದೈವದ ಪರಿಕರವಿರುವ ಭಂಡಾರದ ವಿಚಾರದಲ್ಲೂ ಅದೇ ನಿಯಮಗಳಿವೆ. ಪೆಟ್ಟಿಗೆ, ಕೋಲು, ತ್ರಿಶೂಲ ಇಂತಹ ಪರಿಕರಗಳು ಚಾಮುಂಡಿ ದೈವಕ್ಕೆ ಬಳಕೆಯಾಗೋದಿಲ್ಲ. ಭಂಢಾರ ಹಿಡಿದುಕೊಂಡು ಬರುವ ಎಲ್ಲರಿಗೂ ಹೀಗಾದರೆ ಹೇಗೆ..? ಇದ್ಯಾವ ರೀತಿಯ ಆರಾಧನೆ? ತುಳುನಾಡಿನಲ್ಲಿ ಚಾಮುಂಡೇಶ್ವರಿ ಎನ್ನುವ ದೈವವೇ ಇಲ್ಲ. ಅಲ್ಲಿರೋದು ದೈವವೇ ಅಥವಾ ದೇವರೇ..? ಎಂದು ಖಡಕ್ ಆಗಿ ಪ್ರಶ್ನಿಸಿದ್ದಾರೆ.