ಮಂಗಳೂರು: ಮಂಗಳೂರಿನಲ್ಲಿ ಇತ್ತೀಚೆಗೆ ಮಾದಕ ವ್ಯಸನ, ಗಾಂಜಾ ಪೂರೈಕೆ, ಡ್ರಗ್ಸ್ ಬಳಕೆಯಂತಹ ಅನಾಚಾರಗಳು ಹೆಚ್ಚಾಗುತ್ತಿದೆ. ಯುವಜನತೆಯಂತೂ ಸಂಪೂರ್ಣವಾಗಿ ಇಂದು ಮಾದಕ ವ್ಯಸನಗಳಲ್ಲಿ ಮುಳುಗಿ ಹೋಗಿದೆ. ಇದೀಗ ಮಂಗಳೂರಿನ ಸೆಂಟ್ರಲ್ ಜೈಲ್ ಗೂ ಗಾಂಜಾ ಪೂರೈಕೆಯಾಗುತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಜೈಲ್ ಕಂಪೌಂಡ್ ಒಳಗೆ ಅನುಮಾನಸ್ಪದ ವಸ್ತು ಬಿಸಾಡಿದ ಯುವಕರು...!!
ರಸ್ತೆಯಿಂದ ಮಂಗಳೂರಿನ ಕಾರಾಗ್ರಹದ ಕಂಪೌಂಡ್ ಒಳಗೆ ಪ್ಲಾಸ್ಟಿಕ್ ಕವರ್ ನಲ್ಲಿ ವಸ್ತುವೊಂದನ್ನು ಇಬ್ಬರು ಯುವಕರು ಬಿಸಾಡುವ ದೃಶ್ಯ ಮಂಗಳೂರಿನ ಮಾಜಿ ಮೇಯರ್ ಕವಿತಾ ಸನೀಲ್ ಅವರ ಕಾರಿನ ಡ್ಯಾಶ್ ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಯುವಕರು ಗಾಂಜಾ ಎಸೆದಿದ್ದಾರೆ ಎಂಬ ಶಂಕೆ ಕೂಡಾ ವ್ಯಕ್ತವಾಗಿದೆ. ಹಾಡಹಗಲೇ ನಂಬರ್ ಪ್ಲೇಟ್ ಇಲ್ಲದ ಸ್ಕೂಟಿಯಲ್ಲಿ ಬಂದ ಇಬ್ಬರು ಯುವಕರು ಜೈಲ್ ಕಂಪೌಂಡ್ ಒಳಗಡೆ ಪ್ಲಾಸ್ಟಿಕ್ ಕವರ್ ನಲ್ಲಿ ವಸ್ತುವೊಂದನ್ನು ಎಸೆದು ಎಸ್ಕೇಪ್ ಆಗಿದ್ದಾರೆ.
ಬೈಕ್ ಸವಾರರನ್ನು ಚೇಸ್ ಮಾಡಿದ ಕವಿತಾ ಸನೀಲ್..!
ದ್ವಿಚಕ್ರ ವಾಹನ ಸವಾರರನ್ನು ಬೆನ್ನಟ್ಟಿದ ಕವಿತಾ ಸನೀಲ್ ಅವರು ಚೇಸ್ ಮಾಡಿದ್ದಾರೆ. ಆದರೆ ಬೈಕ್ ಸವಾರರು ತಪ್ಪಿಸಿಕೊಂಡು ಓಣಿಯೊಳಗೆ ಎಸ್ಕೇಪ್ ಆಗಿದ್ದಾರೆ. ಈ ಘಟನೆಯ ಬಗ್ಗೆ ಜೈಲ್ ಅಧಿಕಾರಿಗಳು ಮೌನ ವಹಿಸಿದ್ದು ಕಂಪೌಂಡ್ ತಪಾಸಣೆಗೆಂದು ಸಿಬ್ಬಂದಿ ಇದ್ರೂ ಆತನಿಗೆ ಈ ವಿಷಯದ ಬಗ್ಗೆ ಅರಿವೇ ಇಲ್ಲ. ಹಾರಿಕೆಯ ಉತ್ತರ ನೀಡಿದ ಅಧಿಕಾರಿಯ ಮೇಲೆ ಶಾಸಕ ವೇದವ್ಯಾಸ್ ಕಾಮತ್ ಅವರು ಗರಂ ಆಗಿದ್ದಾರೆ.