ಮಂಗಳೂರು: ಪ್ರತಿಯೊಬ್ಬ ಮನುಷ್ಯನಿಗೂ ಒಂದಲ್ಲ ಒಂದು ರೀತಿಯ ಆಸೆ- ಆಕಾಂಕ್ಷೆಗಳಿರುತ್ತದೆ. ಕೆಲವರಿಗೆ ಚೆನ್ನಾಗಿ ದುಡಿದು ಹಣ ಮಾಡುವುದೇ ಒಂದು ಗುರಿಯಾದರೆ ಇನ್ನೂ ಕೆಲವರಿಗೆ ಹೆಸರೂ ಖ್ಯಾತಿ ಪಡೆಯುವ ಉನ್ನತ ಹುದ್ದೆಯನ್ನೇ ಪಡೆಯಬೇಕೆಂಬ ಕನಸಿರುತ್ತದೆ.
ಒಟ್ಟಿನಲ್ಲಿ ಯಾವುದಾದರೂ ಕ್ಷೇತ್ರದಲ್ಲಿ ಏನಾದರೂ ವಿಭಿನ್ನವಾಗಿ ಸಾಧನೆ ಮಾಡಿದಾಗ ಅಂತೂ ಮನಸ್ಸಿಗೆ ಆಗುವ ಸಾರ್ಥಕತೆ ಅಷ್ಟಿಷ್ಟಲ್ಲ. ಇದೀಗ ಅದೇ ಸಾಧನೆಯ ದಾರಿಯಲ್ಲಿ ನಡೆದು ಮಂಗಳೂರಿನ ಯುವತಿಯೋರ್ವರು ಸುದ್ದಿಯಾಗಿದ್ದಾರೆ. ಯಾಕೆ ಗೊತ್ತಾ...ಈ ಮಾಹಿತಿ ನೋಡಿ..
ಜಾಗ್ವಾರ್ ಯುದ್ಧ ವಿಮಾನ ಮುನ್ನಡೆಸುವ ಅವಕಾಶ ಪಡೆದ ಕುಡ್ಲದ ಕುವರಿ...!!
ಜಾಗ್ವಾರ್ ವಿಮಾನ ಭಾರತೀಯ ವಾಯುಪಡೆಯ ಹೆಮ್ಮೆಯ ಮತ್ತು ಯಶಸ್ವಿ ಯುದ್ಧವಿಮಾನಗಳ ಸಾಲಿನಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಇದೀಗ ಈ ವಿಮಾನವನ್ನು ಮುನ್ನಡೆಸುವ ಸುವರ್ಣ ಅವಕಾಶವನ್ನು ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಪಡೆದಿದ್ದಾರೆ. ತುಳುನಾಡಿನ ಜನರು ಹೆಮ್ಮೆ ಪಡುವಂತಹ ಈ ಸಾಧನೆ ಮಾಡಿರೋದು ನಮ್ಮ ಕರಾವಳಿದ್ದೇ ಯುವತಿ. ಇಲ್ಲಿಯವರೆಗೆ ಯಾವ ಫೈಲೆಟ್ ಗಳು ಕೂಡಾ ಯುದ್ಧವಿಮಾನವನ್ನು ಶಾಶ್ವತ ನೆಲೆಯಲ್ಲಿ ಮುಂದುವರೆಸಿಲ್ಲ.
ಇಂತಹ ಸಾಧನೆ ಮಾಡಿದ್ದು ಮಂಗಳೂರು ಮೂಲದ ಪ್ಲೇಯಿಂಗ್ ಆಫೀಸರ್ ತನುಷ್ಕಾ ಸಿಂಗ್ ಅವರು. ಮಿಲಿಟರಿ ಹಿನ್ನೆಲೆಯಿಂದ ಬಂದ ಇವರ ಅರ್ಧಕರ್ಧ ಕುಟುಂಬವೇ ದೇಶ ಸೇವೆ ಮಾಡಿದೆ. ಮೂಲತಃ ಉತ್ತರಪ್ರದೇಶದವರಾದ ಇವರು ಅನೇಕ ವರ್ಷದಿಂದ ಮಂಗಳೂರಿನಲ್ಲೇ ನೆಲೆಸಿದ್ದು ತಾನು ಕುಡ್ಲದ ಯುವತಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಈ ಸಾಧನೆಗೆ ತನುಷ್ಕಾ ಅವರು ಪಟ್ಟ ಶ್ರಮವೆಷ್ಟು ಗೊತ್ತಾ..?
ಇವರ ತಂದೆ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಅಜಯ್ ಪ್ರತಾಪ್ ಸಿಂಗ್ ಅವರು ಪ್ರಸ್ತುತ ಎಂಆರ್ ಪಿಎಲ್ ಸಂಸ್ಥೆಯ ಎಚ್ ಎಸ್ಇ ವಿಭಾಗದಲ್ಲಿ ಜನರಲ್ ಮ್ಯಾನೇಜರ್ ಆಗಿದ್ದಾರೆ. ಚಿಕ್ಕಂದಿನಿಂದಲೂ ಸೇನೆಗೆ ಸೇರುವ ಕನಸು ಹೊಂದಿದ್ದ ಇವರು ವಾಯುಪಡೆಯಲ್ಲಿ ತರಬೇತಿ ಪಡೆದು ನಂತರ ಅದರಲ್ಲಿ ಭಡ್ತಿ ಪಡೆದು ಯುದ್ಧ ವಿಮಾನದ ಫೈಲೆಟ್ ಆಗಲು ಒಂದೂವರೆ ವರ್ಷ ತರಬೇತಿ ಪಡೆದಿದ್ದಾರೆ.
ಈ ವೇಳೆ ಅವರು ಹಾಕ್ ಎಂಕೆ ನೂರ ಮೂವತ್ತೆರಡು ವಿಮಾನವನ್ನು ಚಲಾಯಿಸಿದ್ದಾರೆ. ಇಂತಹ ಅತ್ಯುನ್ನತ ಹುದ್ದೆಗೆ ಆಯ್ಕೆ ಆಗುತ್ತೇನೆಂದು ಕನಸಿನಲ್ಲೂ ಭಾವಿಸಿರಲಿಲ್ಲ ಎಂದು ತನುಷ್ಕಾ ತನ್ನ ಸಂಭ್ರಮವನ್ನು ಹಂಚಿಕೊಳ್ಳುತ್ತಾರೆ.