ಕಾಂಗ್ರೆಸ್‌ಗೆ ಕ್ಯಾಕರಿಸಿ ಉಗಿದ ಪ್ರೀತಿ ಝಿಂಟಾ!;ಕಾರಣ ಏನ್ ಗೊತ್ತಾ?

  • 26 Feb 2025 03:18:47 PM

ಬಾಲಿವುಡ್ ನ ಅನೇಕ ನಟಿಯರು ತನ್ನದೇ ರೀತಿಯಲ್ಲಿ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿಕೊಂಡಿದ್ದಾರೆ.‌ ಅದೆಷ್ಟೋ ಅಭಿಮಾನಿಗಳ ಪ್ರೀತಿಯನ್ನು ಸಂಪಾದಿಸಿದ್ದಾರೆ. ಅಂತವರಲ್ಲಿ ನಟಿ, ಡಿಂಪಲ್ ಕ್ವೀನ್ ಪ್ರೀತಿ ಝಿಂಟಾ ಕೂಡಾ ಒಬ್ಬರು. ಒಂದು ಟೈಮಲ್ಲಿ ಬಹು ಬೇಡಿಕೆಯಿದ್ದ ಹೀರೋಯಿನ್ ಇವರು. ಇದೀಗ ಕಳೆದೆರಡು ದಿನಗಳಿಂದ ಭಾರೀ ಸುದ್ದಿಯಲ್ಲಿದ್ದಾರೆ. 

 

ನಟಿ ಪ್ರೀತಿ ಝಿಂಟಾ ಅವರ ಹದಿನೆಂಟು ಕೋಟಿ ಸಾಲ ಮನ್ನಾ ಮಾಡಿದ ಬ್ಯಾಂಕ್....!! ಅಸಲಿಯತ್ತೇನು..?

 

 ನ್ಯೂ ಇಂಡಿಯಾ ಕೋಅಪರೇಟಿವ್ ಬ್ಯಾಂಕ್ ಲಿಮಿಟೆಡ್ ನಟಿ ಅವರ ಹೆಸರಿನಲ್ಲಿರುವ ಹದಿನೆಂಟು ಕೋಟಿ ಸಾಲವನ್ನು ಮನ್ನಾ ಮಾಡಿದೆ ಎಂಬಿತ್ಯಾದಿ ಸುದ್ದಿಗಳು ಸಖತ್ ವೈರಲ್ ಆಗುತ್ತಿದೆ. ಆದರೆ ಇದಕ್ಕೆ ನಟಿ ಅವರ ಕಾನೂನು ತಂಡ ಹನ್ನೆರಡು ವರ್ಷಗಳ ಹಿಂದೆ ಬ್ಯಾಂಕ್ ಓವರ್ ಡ್ರಾಫ್ಟ್ ಸೌಲಭ್ಯಕ್ಕೆ ಸಂಬಂಧಿಸಿದ ಸಂಪೂರ್ಣ ಬಾಕಿಗಳನ್ನು ಪಾವತಿಸಿ ಖಾತೆಯನ್ನು ಮುಚ್ಚಲಾಗಿದೆ ಎಂದು ಸ್ಪಷ್ಟನೆ ನೀಡಿದೆ. 

 

ನಿಮಗೆ ನಾಚಿಕೆಯಾಗ್ಬೇಕು..- ಕಾಂಗ್ರೆಸ್ ಗೆ ಬೈದು ಛೀಮಾರಿ ಹಾಕಿದ ನಟಿ...!!

 

ನನ್ನ ಸಾಮಾಜಿಕ ಜಾಲತಾಣದ ಅಕೌಂಟನ್ನು ನಾನೇ ನಿಭಾಯಿಸುತ್ತೇನೆ. ಇಂತಹ ಸುಳ್ಳು ಸುದ್ದಿ ಹಬ್ಬಿಸಲು ನಿಮಗೆ ನಾಚಿಕೆಯಾಗ್ಬೇಕು. ಯಾರೂ ಕೂಡಾ ನನ್ನ ಸಾಲ ಮನ್ನಾ ಮಾಡಿಲ್ಲ. ಈ ಸುದ್ದಿಗಳು ನಿಜಕ್ಕೂ ಶಾಕ್ ಆಗಿದೆ. ತೆಗೆದುಕೊಂಡ ಸಾಲವನ್ನು ಹತ್ತು ವರ್ಷಗಳ ಹಿಂದೆಯೇ ಸಂಪೂರ್ಣವಾಗಿ ಮರುಪಾವತಿಸಲಾಗಿದೆ. ಹೀಗೆ ತೇಜೋವಧೆ ಮಾಡ್ಬೇಡಿ ಎಂದು ಆಕ್ರೋಶಭರಿತರಾಗಿ ನಟಿ ಪ್ರೀತಿ ಝಿಂಟಾ ಟ್ವೀಟ್ ಮಾಡಿದ್ದಾರೆ.