ಹಿಂದೂ ಹೆಸರಲ್ಲಿ ಹೆಣ್ಣುಮಕ್ಕಳನ್ನು ಪ್ರೀತಿಸಿ ವೆಶ್ಯಾವಾಟಿಕೆಗೆ ದೂಡುತ್ತಿದ್ದ ಈ ಅಫ್ತಾಬ್!;ಈತನ ಕತೆ ಕೇಳಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ!

  • 26 Feb 2025 03:30:42 PM

ದೇಶದಲ್ಲಿ ವೇಷ್ಯಾವಾಟಿಕೆಯಂತಹ ದಂಧೆಗಳು ಹೆಚ್ಚಾಗುತ್ತಿರುವುದರ ಜೊತೆಗೆ ಅನ್ಯಕೋಮಿನವರ ತಕರಾರು ಕೂಡಾ ಮಿತಿ ಮೀರುತ್ತಿದೆ. ಹಿಂದೂ ಹೆಣ್ಮಕ್ಕಳನ್ನು ಮೋಸದ ಬಲೆಗೆ ಬೀಳಿಸಿ ಲವ್ ಜಿಹಾದ್ ನಂತಹ ದುಷ್ಕೃತ್ಯವನ್ನು ಎಸಗುತ್ತಿದ್ದಾರೆ. ಇಲ್ಲೊಬ್ಬ ಪಾಪಿ ಮಾಡಿದ ಖತರ್ನಾಕ್ ಕೆಲಸ ಅಂತಿಂತದ್ದಲ್ಲ. ತಾನು ಹಿಂದೂ ಎಂಬ ನಾಟಕವಾಡಿ ಅದೆಷ್ಟೋ ಅಪ್ರಾಪ್ತೆಯರ ಬದುಕನ್ನೇ ನಾಶ ಮಾಡಿದ ಈತನ ಕಥೆ ಕೇಳಿದ್ರೆ ನೀವು ದಂಗಾಗೋದು ಗ್ಯಾರಂಟಿ...

 

ನಾನು ಹನುಮ ಭಕ್ತ ಎನ್ನುತ್ತಲೇ ಬಾಲಕಿಯರನ್ನು ಬಲೆಗೆ ಬೀಳಿಸುತ್ತಿದ್ದ ಪಾಪಿ...!!

 

ನನ್ನ ಹೆಸರು ಅಂಕಿತ್ ತಿವಾರಿ. ನಾನು ಹನುಮನ ಪರಮ ಭಕ್ತ ಎಂದು ಹೇಳಿಕೊಳ್ಳುತ್ತಾ ತನ್ನ ಕಾರಿನ ಮೇಲೆ ಜೈ ಭಜರಂಗಬಲಿ ಎಂದು ಬರೆದುಕೊಂಡಿದ್ದ ಈ ಮಹಾಪಾತಕಿ ಹಿಂದೂ ಬಾಲಕಿಯರನ್ನು ಟಾರ್ಗೆಟ್ ಮಾಡಿ ತನ್ನ ವ್ಯವಹಾರ ನಿರ್ವಹಿಸುತ್ತಿದ್ದ.

 

ಮೋಸದ ಬಲೆಗೆ ಬೀಳಿಸಿ ಮದುವೆಯಾಗುವುದಾಗಿ ನಂಬಿಸಿ ಕೊನೆಗೆ ಕೈಗೆ ಚೊಂಬು ಇಡುತ್ತಿದ್ದ. ವೇಶ್ಯಾವಾಟಿಕೆಗೆ ಬಾಲಕಿಯರನ್ನು ತಳ್ಳಿ ಜೀವನವನ್ನೇ ಹಾಳು ಮಾಡುತ್ತಿದ್ದ ಈತನ ಹೆಸರು ಅಂಕಿತ್ ಅಲ್ಲ. ಅಫ್ತಾಬ್ ಖಾನ್. ಈತನ ಕತ್ರೀನಾ ಎನ್ನುವ ಪ್ರೇಯಸಿಯ ನಿಜನಾಮ ಜುಬೀದಾ. ಈತನ ವೇಶ್ಯವಾಟಿಕೆ ಅಡ್ಡದಿಂದ ಪೊಲೀಸರು ಹನ್ನೊಂದು ಬಾಲಕಿಯರನ್ನು ರಕ್ಷಣೆ ಮಾಡಿದ್ದಾರೆ.

 

ಗ್ರಾಹಕರಿಂದ ಪ್ರತೀ ರಾತ್ರಿಗೆ ಹತ್ತು ಸಾವಿರ ಶುಲ್ಕ....!!

 

ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಒಟ್ಟು ಮೂವತ್ತೆರಡು ಮಂದಿಯನ್ನು ಬಂಧಿಸಿದ್ದಾರೆ. ಅನ್ಯಕೋಮಿನ ಈ ಪಾಪಿಗಳು ಸೇರಿ ಹಿಂದೂ ಹೆಣ್ಮಕ್ಕಳ ಜೊತೆ ಸೋಷಿಯಲ್ ಮೀಡಿಯಾದಲ್ಲಿ ಸಂಪರ್ಕ ಮಾಡಿ ಸ್ನೇಹ ಬೆಳೆಸುತ್ತಿದ್ದರು. ನಂತರ ಸಲುಗೆಯಿಂದ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದಂಧೆಗೆ ಸಿಲುಕಿಸುತ್ತಿದ್ದರು.

 

ಗ್ರಾಹಕರಿಂದ ಪ್ರತೀ ರಾತ್ರಿಗೆ ಹತ್ತು ಸಾವಿರ ಶುಲ್ಕವಿಧಿಸಲಾಗುತ್ತಿತ್ತು. ಇತರ ರಾಜ್ಯಗಳಿಂದಲೂ ಬಾಲಕಿಯರನ್ನು ಮಾರಾಟ ಮಾಡಿದ್ದಾರೆ. ಕೆಲವು ಗ್ರಾಹಕರಿಂದ ಈ ಪಾಪಿಗಳು ಐದು ಲಕ್ಷಕ್ಕೂ ಅಧಿಕ ಹಣಪಡೆದುಕೊಂಡಿದ್ದಾರೆ.‌ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.