ಮಂಗಳೂರು : ಯುವಜನತೆಯಲ್ಲಿ ನಾದಕ ವಸ್ತುವಿನ ಅಮಲು ನೆತ್ತಿಗೇರಿದೆ. ವೈದ್ಯಕೀಯ ಶಿಕ್ಷಣ ಕಲಿಯುತ್ತಿರುವ ವಿದ್ಯಾರ್ಥಿಗಳಿಂದ ಹಿಡಿದು ಅದೆಷ್ಟೋ ಯುವತರುಣರು ಈ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಇದೊಂದು ರೀತಿ ಚಟವಾಗಿ ಬಿಟ್ಟಿದೆ.
ಅಕ್ರಮವಾಗಿ ತಂದು ನಶೆಯೇರಿಸುವ ಈ ಡ್ರಗ್ಸ್ ಮಾಫಿಯಾಕ್ಕೆ ಯಂಗ್ಸ್ಟರ್ಸ್ ಎಡಿಕ್ಟ್ ಆಗಿ ಬಿಟ್ಟಿದ್ದಾರೆ. ಇದರೊಳಗೆ ಒಮ್ಮೆ ಹೊಕ್ಕಿ ನೋಡಿದರೆ ಮಾಯಾ ಲೋಕದಂತೆ. ಮತ್ತೆ ಹಿಂದಿರುಗಲು ಮನಸ್ಸಾಗೋದಿಲ್ಲ. ಇದೀಗ ಮಂಗಳೂರಿನಲ್ಲಿ ಅಕ್ರಮವಾಗಿ ಗಾಂಜಾ, ನಿಷೇಧಿತ ಮಾದಕ ವಸ್ತು ತಂದು ಮಾರಾಟ ಮಾಡುತ್ತಿದ್ದ ಇಬ್ಬರು ಪೊಲೀಸರ ಅತಿಥಿಯಾಗಿದ್ದಾರೆ.
ಮಾದಕ ವಸ್ತು ಮಾರುತ್ತಿದ್ದವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಸಿಸಿಬಿ ಪೊಲೀಸರು..!
ಮುಂಬಯಿಯಿಂದ ಮಂಗಳೂರಿಗೆ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದು ಅವರಿಂದ ಇಪ್ಪತ್ತಮೂರು ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ವಶಕ್ಕೆ ಪಡೆದಿದ್ದಾರೆ.
ಗುಲ್ಬರ್ಗಾದ ಶೇಖ್ ಸಿಖಂದರ್ ಮತ್ತು ಮಂಗಳೂರಿನ ಕಾವೂರು ನಿವಾಸಿ ಮೊಹಮ್ಮದ್ ತೌಫಿಕ್ ಬಂಧಿತ ಆರೋಪಿಗಳು. ಇವರಿಂದ ಲಕ್ಷಾಂತರ ಮೌಲ್ಯದ ಗಾಂಜಾ, ಎರಡು ಮೊಬೈಲ್ ಫೋನ್ ಗಳು ಸೇರಿದಂತೆ ಒಟ್ಟು ಎರಡು ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸ್ ಮುಖೇನವೂ ಮಾದಕ ವಸ್ತು ರವಾನೆ...!!
ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎಯನ್ನು ಮುಂಬೈಯಿಂದ ಗುಲ್ಬರ್ಗಾ ಮಾರ್ಗವಾಗಿ ಮಂಗಳೂರಿಗೆ ಸಾಗಾಟ ಮಾಡಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾರುತ್ತಿದ್ದರು. ಬಸ್ಸಿನಲ್ಲಿ ಗಾಂಜಾವನ್ನು ಸಾಗಿಸುತ್ತಿದ್ದು ಈ ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಸಿಸಿಬಿ ಪೊಲೀಸರ ತಂಡ ಮತ್ತು ಇತರ ಸಿಬ್ಬಂದಿ ಭಾಗಿಯಾಗಿದ್ದರು.