ದ.ಕ ಜಿಲ್ಲೆಯಲ್ಲಿ ನೆತ್ತಿ ಸುಡುತ್ತಿದೆ..!ಮೂರು ದಿನ ಮತ್ತಷ್ಟು ಬಿಸಿಗಾಳಿ ಸಾಧ್ಯತೆ..! ಹವಾಮಾನ ಇಲಾಖೆ ಎಚ್ಚರಿಕೆ...!

  • 27 Feb 2025 12:44:12 PM

ದ. ಕ: ಈಗ ಎಲ್ಲಿ ನೋಡಿದರೂ ನೆತ್ತಿ ಸುಡುವ ಸುಡು ಬಿಸಿಲು. ಹೊರಗೆ ಹೋಗೋದಂದ್ರೆ ಅದೇನೋ ಒಂಥರಾ ಕಿರಿಕಿರಿ ಅನುಭವ. ಈ ಬಿಸಿಲ ಬೇಗೆಗೆ ನೀರು ಕುಡಿದಷ್ಟೂ ಸಾಕಾಗೋದಿಲ್ಲ. ತಂಪು ಪಾನೀಯಗಳ ಮೇಲೆ ನಾವು ಹೆಚ್ಚು ಅವಲಂಬಿತರಾಗುತ್ತಿದ್ದೇವೆ. ಕರಾವಳಿಯಲ್ಲಂತೂ ಈ ಬಿಸಿಲ ಬೇಗೆಯ ಬಗ್ಗೆ ಹೇಳೋದೇ ಬೇಡ. ಜನರು ಸೆಕೆಯಿಂದ ಕಿರಿಕಿರಿ ಅನುಭವಿಸುತ್ತಿದ್ದಾರೆ. ಇದೀಗ ಹವಾಮಾನ ಇಲಾಖೆ ಖಡಕ್ ಎಚ್ಚರಿಕೆಯೊಂದನ್ನು ನೀಡಿದೆ.

 

ಕರಾವಳಿಯಲ್ಲಿ ಎರಡು ದಿನ ರಣ ಬಿಸಿಲು...!

 

ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಬಿಸಿಗಾಳಿಯ ಬಗ್ಗೆ ವಾರ್ನಿಂಗ್ ನೀಡಿದ್ದು ತಾಪಮಾನದಲ್ಲಿ ಗಣನೀಯ ಏರಿಕೆಯಾಗುವ ಎಚ್ಚರಿಕೆಯನ್ನು ನೀಡಿದೆ. ಇಂದು ಮತ್ತು ನಾಳೆ ಉತ್ತರ ಕನ್ನಡ ಮತ್ತು ದ.ಕ ಜಿಲ್ಲೆಯಲ್ಲಿ ಬಿಸಿ ವಾತಾವರಣ ಇರಲಿದ್ದು ಗರಿಷ್ಠ ತಾಪಮಾನ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯುದೆ. ಮಂಗಳೂರಿನಲ್ಲಿ ಹಾಗೂ ಪುತ್ತೂರಿನಲ್ಲಿ ೩೯.೭ ಡಿ.ಸೆ ತಾಪಮಾನ ದಾಖಲಾಗಿದೆ. ಹೊತ್ತು ಹೊತ್ತು ದ್ರವ ಆಹಾರ ಸೇವನೆ ಮಾಡುವಂತೆ ಎಚ್ಚರಿಕೆ ನೀಡಲಾಗಿದೆ. 

 

ಕರಾವಳಿಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ..!!

 

ನಾವು ಮಳೆಗಾಲದಲ್ಲಿ ಯೆಲ್ಲೋ ಅಲರ್ಟ್, ರೆಡ್ ಅಲರ್ಟ್ ಘೋಷಣೆಯಾಗುವುದನ್ನು ಕೇಳಿದ್ದೇವೆ. ಆದರೆ ಇದೀಗ ಬಿಸಿಲ ತಾಪಮಾನಕ್ಕೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಇಂದು ಮತ್ತು ನಾಳೆ ಬಿಸಿ ಮತ್ತು ಆರ್ದ ವಾತಾವರಣದ ಎಚ್ಚರಿಕೆ ನೀಡಿದೆ. ಹೊರಗಡೆ ಹೋಗುವಾಗ ಕೊಡೆ ಬಳಕೆ ಮಾಡಬೇಕು. ನಿರಂತರ ನೀರು ಕುಡಿಯುವುದರ ಜೊತೆಗೆ ಅಗತ್ಯ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.