ಮಂಗಳೂರು: ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಸಂಸದರಾಗಿ ಆಯ್ಕೆಯಾದ ಮೇಲೆ ಕರಾವಳಿಯ ಸಮಗ್ರ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸುತ್ತಾ ಬಂದಿದ್ದಾರೆ. ಕೇಂದ್ರದ ಸಚಿವರುಗಳಿಗೆ ಒಂದಲ್ಲ ಒಂದು ಪ್ರಗತಿಪರ ವಿಚಾರದಲ್ಲಿ ಬೇಡಿಕೆ ಸಲ್ಲಿಸುತ್ತಲೇ ಇರುತ್ತಾರೆ. ಇದೀಗ ಇವರು ಅಭಿವೃದ್ಧಿ ಕಾರ್ಯಕ್ಕೊಂದು ಪಟ್ಟ ಶ್ರಮಕ್ಕೆ ಕೊನೆಗೂ ಫಲ ಸಿಕ್ಕಿದೆ.
ಸುಬ್ರಹ್ಮಣ್ಯಕ್ಕೆ ವಿಸ್ತರಣೆಯಾದ ಮಂಗಳೂರು-ಕಬಕ ಪ್ಯಾಸೆಂಜರ್ ರೈಲು...!!
ದಶಕಗಳ ಹಿಂದಿನಿಂದಲೂ ಬೇಡಿಕೆಯಾಗಿದ್ದ ಮಂಗಳೂರು- ಕಬಕ ಪ್ಯಾಸೆಂಜರ್ ರೈಲು ಸೇವೆಯನ್ನು ಇದೀಗ ಸುಬ್ರಹ್ಮಣ್ಯಕ್ಕೆ ವಿಸ್ತರಿಸಿ ಕೇಂದ್ರ ರೈಲ್ವೇ ಮಂಡಳಿ ಅನುಮೋದನೆ ನೀಡಿದೆ. ಇನ್ಮುಂದೆ ಮಂಗಳೂರು ಪುತ್ತೂರು ಸುಬ್ರಹ್ಮಣ್ಯ ನಡುವೆ ಪ್ರತಿದಿನ ಸಂಚರಿಸುವ ಪ್ರಯಾಣಿಕರು ಹಾಗೂ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ಹೋಗುವ ಭಕ್ತಾದಿಗಳಿಗೆ ಹೆಚ್ಚು ಅನುಕೂಲವಾಗಲಿದೆ.
ರೈಲು ವಿಸ್ತರಣೆಗೆ ಮಂಜೂರಾತಿ ಲಭಿಸಿರುವ ಬಗ್ಗೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಕೇಂದ್ರ ರೈಲ್ವೇ ಸಚಿವ ಅಶ್ವಿನ್ ವೈಷ್ಣವ್ ಮತ್ತು ದ.ಕ ಜಿಲ್ಲೆಯ ಜನರಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಹೊಸ ವೇಳಾಪಟ್ಟಿ ಪ್ರಕಾರ ಚಲಿಸಲಿರುವ ಪ್ಯಾಸೆಂಜರ್ ರೈಲು..!
ಹೊಸ ವೇಳಾಪಟ್ಟಿಯ ಪ್ರಕಾರ ಮಂಗಳೂರು ಸೆಂಟ್ರಲ್ ಕಬಕ ಪುತ್ತೂರು ಸುಬ್ರಹ್ಮಣ್ಯ ರಸ್ತೆಯ ಪ್ಯಾಸೆಂಜರ್ ರೈಲು ಮುಂಜಾನೆ ನಾಲ್ಕು ಗಂಟೆಗೆ ಮಂಗಳೂರು ಸೆಂಟ್ರಲ್ ನಿಂದ ಹೊರಟು ಕಬಕ ಪುತ್ತೂರಿಗೆ ಮುಂಜಾನೆ ೫.೧೮ಕ್ಕೆ ರೀಚ್ ಆಗಲಿದೆ.
ಅಲ್ಲಿಂದ ಮತ್ತೆ ಎರಡು ನಿಮಿಷ ನಿಲುಗಡೆಯಾಗಿ ಮತ್ತೆ ರೈಲು ಆರೂವರೆ ಸುಮಾರಿಗೆ ಸುಬ್ರಹ್ಮಣ್ಯ ತಲುಪಲಿದೆ. ಅದೇ ರೀತಿ ಸುಬ್ರಹ್ಮಣ್ಯ ಮಂಗಳೂರು ಪ್ಯಾಸೆಂಜರ್ ರೈಲು ಬೆಳಿಗ್ಗೆ ಏಳಕ್ಕೆ ಸುಬ್ರಹ್ಮಣ್ಯ ರಸ್ತೆಯಿಂದ ಹೊರಟು ಕಬಕ ಪುತ್ತೂರು ತಲುಪಿ ನಂತರ ಒಂಭತ್ತು ಮೂವತ್ತಕ್ಕೆ ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣ ತಲುಪಲಿದೆ.