ಇದೆಂಥಾ ವಿಪರ್ಯಾಸ..! ಗರ್ಭಿಣಿಯಾದದ್ದೇ ತಿಳೀಲಿಲ್ಲ..!! ಹಾಸ್ಟೆಲ್ ನಲ್ಲಿ ಮಗುವಿಗೆ ಜನ್ಮ ನೀಡಿದ ಹತ್ತನೇ ಕ್ಲಾಸ್ ವಿದ್ಯಾರ್ಥಿನಿ...!!

  • 27 Feb 2025 02:55:53 PM

ಒಡಿಶಾ: ರಾಜ್ಯದಲ್ಲಿ ಅತ್ಯಾಚಾರ, ಲೈಂಗಿಕ ಶೋಷಣೆಗಳು, ವೇಶ್ಯಾವಾಟಿಕೆಯಂತಹ ದಂಧೆ, ದುಷ್ಕೃತ್ಯಗಳು ಹೆಚ್ಚಾಗುತ್ತಿದೆ. ಈ ನಡುವೆ ಶಾಲೆ ಕಲಿಯುವ ಮಕ್ಕಳಲ್ಲೂ ನೈತಿಕ ಮೌಲ್ಯ ಕುಸಿಯುತ್ತಿದೆ. ಅತೀ ಬೇಗ ಪ್ರಬುದ್ಧತೆ ಹೊಂದುತ್ತಿರುವ ಶಾಲಾ ಮಕ್ಕಳು ದಿಕ್ಕು ತಪ್ಪಿ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದೀಗ ಅಪ್ರಾಪ್ತ ಬಾಲಕಿಯೋರ್ವಳು ಮಗುವಿಗೆ ಜನ್ಮ ನೀಡಿದ ಅಪರೂಪದ ಘಟನೆಯೊಂದು ನಡೆದಿದೆ. 

 

ಹಾಸ್ಟೆಲ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಬಾಲಕಿ..!

 

ಸರ್ಕಾರಿ ವಸತಿ ಶಾಲೆಯ ಹಾಸ್ಟೆಲ್‌ನಲ್ಲಿ 10ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಹೆಣ್ಣು ಮಗುವಿಗೆ ಜನ್ಮ ನೀಡಿದ ಆಘಾತಕಾರಿ ಘಟನೆ ಒಡಿಶಾದ ಮಲ್ಕನ್‌ಗಿರಿ ಜಿಲ್ಲೆಯಲ್ಲಿ ನಡೆದಿದೆ. ಬೋರ್ಡ್ ಪರೀಕ್ಷೆ ಬರೆದು ಹಾಸ್ಟೆಲ್‌ಗೆ ಹಿಂದಿರುಗಿದ್ದ ಬಾಲಕಿಗೆ ಸೋಮವಾರ ಹೆರಿಗೆ ನೋವು ಕಾಣಿಸಿಕೊಂಡಾಗ ಈ ಘಟನೆ ಬೆಳಕಿಗೆ ಬಂದಿದೆ.

 

ಇಂದು ಪೊಲೀಸರು ಈ ಘಟನೆಯನ್ನು ದೃಢಪಡಿಸಿದ್ದಾರೆ. ಶಾಲಾ ಆಡಳಿತ ಮತ್ತು ಹಾಸ್ಟೆಲ್ ಮೇಲ್ವಿಚಾರಣೆಯಲ್ಲಿನ ಲೋಪಗಳ ಬಗ್ಗೆಯೂ ಶಾಲಾ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

 

ಬಾಲಕಿ ಗರ್ಭಿಣಿಯಾಗಿರುವ ವಿಷ್ಯ ಅರಿವಿಗೆ ಬಾರದಿದ್ದದ್ದೇ ಸೋಜಿಗ..!

 

ಹುಡುಗಿಯರ ಹಾಸ್ಟೆಲ್‌ನಲ್ಲಿ ಪುರುಷರಿಗೆ ಪ್ರವೇಶವಿಲ್ಲ. ಅವಳು ಹೇಗೆ ಗರ್ಭಿಣಿಯಾದಳು ಎಂಬುದೇ ನಮಗೆ ತಿಳಿದಿಲ್ಲ ಎಂದು ಉದಾಸೀನತೆಯ ಉತ್ತರವನ್ನು ಆರೋಗ್ಯ ಕಾರ್ಯಕರ್ತೆಯರು ನೀಡಿದ್ದಾರೆ . ಹಾಸ್ಟೆಲ್‌ನಲ್ಲಿ ವಾಸಿಸುವ ಎಲ್ಲಾ ವಿದ್ಯಾರ್ಥಿಗಳನ್ನು ವಾರಕ್ಕೊಮ್ಮೆ ತಪಾಸಣೆ ಮಾಡಬೇಕು. ಆದರೆ, ಆರೋಗ್ಯ ಕಾರ್ಯಕರ್ತೆ ತನ್ನ ಕೆಲಸವನ್ನು ಮಾಡುತ್ತಿಲ್ಲ ಎಂದು ಈ ಘಟನೆಯಿಂದ ಸಾಬೀತಾಗಿದೆ” ಎಂದು ಅಧಿಕಾರಿಗಳು ಹೇಳಿದ್ದಾರೆ.

 

ರಜೆಯ ಸಮಯದಲ್ಲಿ ಮನೆಗೆ ಹೋದಾಗ ಬಾಲಕಿ ಗರ್ಭಿಣಿಯಾಗಿರುವ ಸಾಧ್ಯತೆಯಿದೆ ಎಂದು ಜಿಲ್ಲಾ ಕಲ್ಯಾಣ ಅಧಿಕಾರಿ ಶ್ರೀನಿವಾಸ್ ಆಚಾರ್ಯ ಹೇಳಿದ್ದಾರೆ. ಈಗಾಗಲೇ ಇಲಾಖೆಯ ವಿಚಾರಣೆ ಪ್ರಾರಂಭವಾಗಿದ್ದು ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸುತ್ತಿದ್ದಾರೆ. ಆಕೆಯನ್ನು ಗರ್ಭಿಣಿ ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.