ಕಯ್ಯಾರು ಮಂಡೇಕಾಪು, ಪೈವಳಿಕೆ ಪಂಚಾಯತ್ ವ್ಯಾಪ್ತಿಯ 10ನೇ ತರಗತಿ ವಿದ್ಯಾರ್ಥಿನಿಯಾದ ಶ್ರೇಯಾ ಎಂಬ ಬಾಲಕಿ 12-02-2025 ರ ರಾತ್ರಿ 2:00 ಗಂಟೆಗೆ ಮನೆಯಿಂದ ನಾಪತ್ತೆಯಾಗಿದ್ದಾರೆ. ಪೋಷಕರಾದ ಪ್ರಿಯೇಶ್ ಮತ್ತು ಪ್ರಭಾವತಿ, ಆಕೆಯ ಸುಳಿವು ಇಲ್ಲದೆ ತೀವ್ರ ಆತಂಕದಲ್ಲಿದ್ದಾರೆ.
ನಾಪತ್ತೆಯಾಗಿ 16 ದಿವಸಗಳಾದರೂ ಶ್ರೇಯಾ ಕುರಿತಾಗಿ ಯಾವುದೇ ರೀತಿಯ ಸುಳಿವು ಲಭಿಸಲಿಲ್ಲ. ಈ ಸಂಬಂಧವಾಗಿ ಕುಂಬ್ಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಸಹ ವ್ಯಕ್ತ ಇದುವರೆಗೆ ಯಾವುದೇ ಪ್ರಗತಿ ಇಲ್ಲ ಎಂದು ಕುಟುಂಬದವರು ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ವಿಶ್ವ ಹಿಂದೂ ಪರಿಷತ್ ಮಾತೃಶಕ್ತಿಯ ಮುಖಂಡರಾದ ಮೀರಾ ಅಳ್ವಾ ಮತ್ತು ಪದ್ಮಾ ಮೋಹನ್ ದಾಸ್ ಅವರು ಮನೆಯಗೆ ಭೇಟಿ ನೀಡಿ, ತಾಯಿಗೆ ಸಾಂತ್ವನ ಹೇಳಿದ್ದಾರೆ.
ನಾಪತ್ತೆಯಾದ ಶ್ರೇಯಾ ಎಂಬ ಹುಡುಗಿಯ ಪತ್ತೆಗಾಗಿ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕೆಂದು ಸಾರ್ವಜನಿಕರಿಂದ ಆಗ್ರಹ ವ್ಯಕ್ತ ಪಡಿಸಿದ್ದಾರೆ.