ಭೀಮಾ ಜ್ಯುವೆಲರ್ಸ್ ಮಾಲೀಕನ ಮಗ ವಿಷ್ಣು ಭಟ್ ಅರೆಸ್ಟ್!; ಅಷ್ಟಕ್ಕೂ ಈತ ಮಾಡಿದ ತಪ್ಪೇನು ಗೊತ್ತಾ?

  • 28 Feb 2025 11:03:18 AM

ಬೆಂಗಳೂರು:ಪ್ರತಿಷ್ಠಿತ ವ್ಯಕ್ತಿಗಳು ಕೆಲವೊಮ್ಮೆ ಸಾರ್ವಜನಿಕವಾಗಿ ಬಹಳಷ್ಟು ಕೀಳುಮಟ್ಟಕ್ಕಿಳಿದು ತಮ್ಮ ಘನತೆ, ಗೌರವ ಕಳೆದುಕೊಳ್ಳುತ್ತಾರೆ. ಸದ್ಯ, ಆಭರಣ ಲೋಕದ ಹೆಸರಾಂತ ಸಂಸ್ಥೆ ಭೀಮಾ ಜ್ಯುವೆಲರ್ಸ್ ಮಾಲೀಕನ ಪುತ್ರನಾಗಿರುವ ವಿಷ್ಣು ಭಟ್ ಅಂತಹದ್ದೇ ಕೆಲಸ ಮಾಡಿ ಕಂಬಿ ಎಣಿಸುವಂತಾಗಿದೆ. ಅಷ್ಟಕ್ಕೂ ಭೀಮಾ‌ ಜ್ಯುವೆಲರ್ಸ್ ಮಾಲೀಕನ ಮಗ ವಿಷ್ಣು ಭಟ್ ಮಾಡಿದ ತಪ್ಪೇನು ಗೊತ್ತಾ? ಈ ಸ್ಟೋರಿ ಓದಿ.

 

ಹೋಟೇಲ್ ಸಿಬ್ಬಂದಿ ಮೇಲೆ ಹಲ್ಲೆ!

 

ದೇಶದಾದ್ಯಂತ ಸಾಕಷ್ಟು ಶಾಖೆಗಳನ್ನು ಹೊಂದಿರುವ ಆಭರಣ ಲೋಕದ ದಿಗ್ಗಜ ಭೀಮಾ ಜ್ಯುವೆಲರ್ಸ್ ಮಾಲೀಕನ ಮಗ ವಿಷ್ಣು ಭಟ್ ಫೆಬ್ರವರಿ 7ರಂದು ಬೆಂಗಳೂರಿನ ಹೋಟೇಲ್ ಒಂದರಲ್ಲಿ ಗಲಾಟೆ ಮಾಡಿದ್ದಾರೆ. ಆ ಬಳಿಕ ಫೆಬ್ರವರಿ 26ರಂದು‌ ಮತ್ತೆ ಅದೇ ಹೋಟೇಲ್ ಗೆ ತೆರಳಿ ಸಿಬ್ಬಂದಿಯ‌ ಮೇಲೆ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

 

ವಿಷ್ಣು ಭಟ್ ಅರೆಸ್ಟ್!

 

ಅಮಾಯಕನಾದ ಹೊಟೇಲ್‌ ಸಿಬ್ಬಂದಿಯ ಮೇಲೆ ಕಬ್ಬಿಣದ ರಾಡ್ ನಿಂದ ಅಮಾನುಷವಾಗಿ ಹಲ್ಲೆ ನಡೆಸಿರುವ ವಿಷ್ಣು ಭಟ್ ಸದ್ಯ, ಪೊಲೀಸರ ಅಥಿತಿಯಾಗಿದ್ದಾನೆ.‌ಬೆಂಗಳೂರಿನ ಹೆಚ್.ಎಸ್ ಠಾಣಾಧಿಕಾರಿಗಳು ಈತನನ್ನು ಬಂಧಿಸಿದ್ದು, ತನಿಖೆ ನಡೆಯುತ್ತಿದೆ‌ ಎಂದು ತಿಳಿದು ಬಂದಿದೆ.